Tuesday, May 28, 2024
Homeರಾಷ್ಟ್ರೀಯ1000 ಕೋಟಿಗೂ ಹೆಚ್ಚು ಜಿಎಸ್‍ಟಿ ವಂಚನೆ

1000 ಕೋಟಿಗೂ ಹೆಚ್ಚು ಜಿಎಸ್‍ಟಿ ವಂಚನೆ

ನವದೆಹಲಿ,ಮಾ.8- ಉತ್ತರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ 1,100 ಕೋಟಿಗೂ ಹೆಚ್ಚಿನ ಜಿಎಸ್‍ಟಿ ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಈವರೆಗೂ 5 ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೀರಥ್‍ನ ಸಿಜಿಎಸ್‍ಟಿ ಆಯುಕ್ತಾಲಯ ವಂಚನೆ ಮಾರ್ಗವಾಗಿ ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಪ್ರಮಾಣದ ತೆರಿಗೆ ವಂಚನೆ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿದೆ.

ಸಿಜಿಎಸ್‍ಟಿ ತೆರಿಗೆ ವಂಚನೆ ನಿಗ್ರಹ ದಳ 2023 ರ ಅಕ್ಟೋಬರ್‍ನಲ್ಲಿ ತನಿಖೆ ಆರಂಭಿಸಿತ್ತು. ನಕಲಿ ಬಿಲ್‍ಗಳು ಹಾಗೂ ಲೆಕ್ಕಪತ್ರಗಳನ್ನು ಸಲ್ಲಿಸಿ ವಂಚನೆ ಮಾರ್ಗವಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಪಡೆದಿರುವುದನ್ನು ಖಚಿತಪಡಿಸಿಕೊಂಡಿದೆ. ಸುಮಾರು 232 ನಕಲಿ ಕಂಪನಿಗಳನ್ನು ಈವರೆಗೂ ಗುರುತಿಸಲಾಗಿದೆ. ಅವುಗಳಲ್ಲಿ 91 ಕಂಪನಿಗಳು ಒಂದೇ ಮೊಬೈಲ್ ನಂಬರ್‍ನಡಿ ನೋಂದಾವಣೆಯಾಗಿವೆ. ಉತ್ತರ ಪ್ರದೇಶ ಅಷ್ಟೇ ಅಲ್ಲದೆ ದೇಶಾದ್ಯಂತ ಬೇರೆ ಬೇರೆ ಸ್ಥಳಗಳಲ್ಲಿ ಇವುಗಳ ಕಾರ್ಯಾಚರಣೆ ನಡೆಸುವುದಾಗಿ ದಾಖಲಿಸಲಾಗಿದೆ.

ಸುಮಾರು 1,048 ಕೋಟಿ ರೂ.ಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್‍ಗಳನ್ನು ಈ ನಕಲಿ ಕಂಪನಿಗಳ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ. ಈ ಕಂಪನಿಗಳ ಮೂಲಕ 5,842 ಕೋಟಿ ರೂ. ಸರಕು ಸರಬರಾಜು ಸೇವೆಯನ್ನು ನಡೆಸಿರುವುದಾಗಿ ತನಿಖೆಯಲ್ಲಿ ದೃಢಪಟ್ಟಿದೆ.

ಹಣ ಬದಲಾವಣೆ ಕಂಪನಿಗಳ ಕುಡಿಗಳ ಬೆನ್ನತ್ತಿರುವ ತನಿಖಾಧಿಕಾರಿಗಳು ಒಂದೇ ಕಂತಿನಲ್ಲಿ 1,120 ಕೋಟಿ ರೂ.ಗೂ ಅಧಿಕ ಸೊಗಟು ಖರೀದಿ ವ್ಯವಹಾರವನ್ನು ಗುರುತಿಸಿದ್ದಾರೆ. ತನಿಖೆ ಹಾಗೂ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಈವರೆಗೂ ವಿದೇಶಿ ವಿನಿಮಯ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಮೂವರನ್ನು ಬಂಸಲಾಗಿದೆ ಎಂದು ತಿಳಿಸಲಾಗಿದೆ.

RELATED ARTICLES

Latest News