Monday, January 13, 2025
Homeರಾಷ್ಟ್ರೀಯ | Nationalಮಹಿಳೆಯರ ರಕ್ಷಣೆಗೆ ಒಟ್ಟಾಗಿ : ರಾಷ್ಟ್ರಪತಿ ದ್ರೌಪದಿ ಮುರ್ಮ

ಮಹಿಳೆಯರ ರಕ್ಷಣೆಗೆ ಒಟ್ಟಾಗಿ : ರಾಷ್ಟ್ರಪತಿ ದ್ರೌಪದಿ ಮುರ್ಮ

ನವದೆಹಲಿ,ಮಾ.8- ಹೆಣ್ಣುಮಕ್ಕಳ ಹಾದಿಯಲ್ಲಿರುವ ಅಡೆತಡೆಗಳನ್ನು ನಿವಾರಿಸಿ ಅವರಿಗೆ ರಕ್ಷಣೆ ನೀಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮ ಕರೆಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿನ ಪೋಸ್ಟ್ ಮಾಡಿರುವ ಅವರು, ದೇಶದ ಮಹಿಳೆಯರಿಗೆ ಶುಭ ಕೋರಿ, ಮಹಿಳಾ ದಿನದಂದು ಎಲ್ಲರಿಗೂ ನನ್ನ ಶುಭಾಶಯಗಳು! ಇದು ನಾರಿ ಶಕ್ತಿಯನ್ನು ಆಚರಿಸುವ ಸಂದರ್ಭವಾಗಿದೆ. ಸಮಾಜದ ಪ್ರಗತಿಯನ್ನು ಅದರ ಮಹಿಳೆಯರು ಮಾಡಿದ ಪ್ರಗತಿಯಿಂದ ಅಳೆಯಲಾಗುತ್ತದೆ ಎಂದಿದ್ದಾರೆ.

ಭಾರತದ ಹೆಣ್ಣುಮಕ್ಕಳು ಕ್ರೀಡೆಯಿಂದ ವಿಜ್ಞಾನದವರೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದಕ್ಕಾಗಿ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಪ್ರಶಂಸಿಸಿದ್ದಾರೆ. ಯುವತಿಯರ ಹಾದಿಯಲ್ಲಿರುವ ಅಡೆತಡೆಗಳನ್ನು ತೆಗೆದುಹಾಕಲು ನಾವು ಒಟ್ಟಾಗಿ ಕೆಲಸ ಮಾಡೋಣ ಮತ್ತು ಅವರಿಗೆ ರಕ್ಷಣೆ ನೀಡೋಣ, ಏಕೆಂದರೆ ಅವರು ನಾಳಿನ ಭಾರತವನ್ನು ರೂಪಿಸುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Latest News