Thursday, February 29, 2024
Homeಕ್ರೀಡಾ ಸುದ್ದಿಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್

ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್

ನವದೆಹಲಿ, ಜ.22- ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶ, ವಿದೇಶದ ಗಣ್ಯಾತಿ ಗಣ್ಯರು ಪಾಲ್ಗೊಂಡು ಕಣ್ಮನ ತುಂಬಿಸಿಕೊಂಡಿರುವಂತೆ ಕ್ರಿಕೆಟ್ ತಾರೆಯರು ಕೂಡ ಹಾಜರಾಗಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಗಾಡ್ ಆಫ್ ಕ್ರಿಕೆಟ್ ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕೂಡ ಮುಂಬೈನಿಂದ ಉತ್ತರಪ್ರದೇಶದ ಅಯೋಧ್ಯೆಗೆ ತೆರಳಿ ಸಂಪ್ರದಾಯಿಕ ಉಡುಗೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಕಣ್ತುಂಬಿಕೊಂಡಿದ್ದಾರೆ.

ಇನ್ನು ನಜಾಫಗಢದ ವೀರೇಂದ್ರ ಸೆಹ್ವಾಗ್ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಈ ಕಾರ್ಯಕ್ರಮದ ಬಗ್ಗೆ ಸಂತಸದ ಮಾತುಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬಹುಶಃ ಇದು ಸೋಮವಾರದಂದು ತುಂಬಾ ಕುತೂಹಲದಿಂದ ಕಾಯುತ್ತಿರುವ ಮೊದಲ ಭಾನುವಾರವಾಗಿದೆ. ಶ್ರೀರಾಮ್, ಜೈ ರಾಮ್, ಜೈ ಜೈ ರಾಮ್' ಎಂದು ಪೋಸ್ಟ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕನ್ನಡಿಗ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕೂಡ ಈ ಧಾರ್ಮಿಕ ಸಮಾರಂಭದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದು ,ಹೇಳಿ, ಹಾಡಿ, ಘಂಟಘೋಷವಾಗಿ ಕೂಗಿ ಜೈ ಶ್ರೀರಾಮ್’ ಎಂದು ಹೇಳಿದ್ದಾರೆ.

ನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು

ಲಂಡನ್ ಒಲಿಂಪಿಕ್ಸ್‍ನಲ್ಲಿ ಪದಕ ಗೆದ್ದು ದೇಶದ ಕೀರ್ತಿ ಬೆಳಗಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ` ಇದು ನಮಗೆಲ್ಲರಿಗೂ ಬಹಳ ದೊಡ್ಡ ದಿನವಾಗಿದೆ. ಇಲ್ಲಿಗೆ ಬರುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ . ರಾಮ್‍ಜಿಯವರ ದರ್ಶನ ಪಡೆದಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ಹೇಳಿದ್ದಾರೆ. ಇನ್ನೂ ಜಂಬೂ ಖ್ಯಾತಿಯ ಅನಿಲ್‍ಕುಂಬ್ಳೆ , ಟರ್ಬನೇಟರ್ ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News