Friday, October 4, 2024
Homeರಾಜ್ಯಕೇಸರಿಮಯವಾದ ಸಿಲಿಕಾನ್ ಸಿಟಿ

ಕೇಸರಿಮಯವಾದ ಸಿಲಿಕಾನ್ ಸಿಟಿ

ಬೆಂಗಳೂರು,ಜ.22- ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಹೈಟೆಕ್ ಸಿಟಿ ಬೆಂಗಳೂರು ಕೇಸರಿಮಯವಾಗಿ ಪರಿವರ್ತನೆಗೊಂಡಿದೆ. ಹಲವು ಹಿಂದೂ ಸಂಘಟನೆಗಳು ನಗರದ ಹಲವಾರು ಪ್ರದೇಶಗಳಲ್ಲಿ ಕೇಸರಿ ಬಣ್ಣ ಬಳಿದಿವೆ. ಹಿಂದೂಗಳ ದೊಡ್ಡ ಹಬ್ಬ ದೀಪಾವಳಿಗೆ ಮಾತ್ರ ಹೊಂದಿಕೆಯಾಗುವ ಆಚರಣೆಗಳು, ಕೇಸರಿ ಪುಷ್ಪಗಳು, ಶ್ರೀರಾಮ, ಹನುಮಂತ, ಸೀತೆ ಮತ್ತು ಲಕ್ಷ್ಮಣನ ಚಿತ್ರಗಳಿರುವ ಕೇಸರಿ ಧ್ವಜಗಳು ಮತ್ತು 500 ವರ್ಷಗಳ ಅಂತರದ ನಂತರ ರಾಮ ತನ್ನ ಜನ್ಮಸ್ಥಳಕ್ಕೆ ಆಗಮನವನ್ನು ಸ್ವಾಗತಿಸುವ ಪೋಸ್ಟರ್‍ಗಳು ನಗರದ ಮೂಲೆ ಮೂಲೆಗಳಲ್ಲೂ ರಾರಾಜಿಸುತ್ತಿವೆ.

ಬೆಳಗ್ಗೆಯಿಂದಲೇ ಶ್ರೀ ವೆಂಕಟೇಶ್ವರ ದೇವಸ್ಥಾನದ ಜೊತೆಗೆ ಶ್ರೀರಾಮ, ಹನುಮಾನ್ ದೇಗುಲಗಳಿಗೆ ಭಕ್ತರ ದಂಡು ಹರಿದು ಬಂದಿತ್ತು. ವಿವಿಧೆಡೆ ಭಜನೆ ಮತ್ತು ಕೀರ್ತನೆಗಳನ್ನು ಏರ್ಪಡಿಸಲಾಗಿತ್ತು. ರಾಮಾಂಜನೇಯ ಗುಡ್ಡ ದೇವಸ್ಥಾನ, ಪಟ್ಟಾಭಿರಾಮ ಸ್ವಾಮಿ ದೇವಸ್ಥಾನ, ರಾಜಾಜಿನಗರದ ರಾಮ ದೇವಸ್ಥಾನ ಮತ್ತು ಮಲ್ಲೇಶ್ವರಂನ ರಾಮದೇವರ ದೇವಸ್ಥಾನ ಮತ್ತು ಬಸವನಗುಡಿಯ ರಾಮ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.ಈ ದೇವಾಲಯಗಳು ಭಕ್ತರಿಗೆ ಭವ್ಯವಾದ ಪ್ರಸಾದ ವಿತರಣೆಯನ್ನು ಸಹ ಆಯೋಜಿಸಿದ್ದವು.

ಬೆಂಗಳೂರಿನ ಬಿಜೆಪಿ ರಾಜ್ಯ ಪ್ರಧಾನ ಕಛೇರಿ ಜಗನ್ನಾಥ ಭವನವು ಅಲಂಕಾರಿಕ ದೀಪಗಳು, ವಸ್ತ್ರಗಳು, ಬ್ಯಾನರ್‍ಗಳು ಮತ್ತು ಪೆಪೋಸ್ಟರ್‍ಗಳಿಂದ ಆಕರ್ಷಣೆಯ ಕೇಂದ್ರವಾಗಿತ್ತು. ಮಹಾಲಕ್ಷ್ಮಿ ಲೇಔಟ್‍ನ ರಾಣಿ ಅಬ್ಬಕ್ಕ ಮೈದಾನದಲ್ಲಿ ನಡೆದ ಶ್ರೀರಾಮತಾರಕ ಮಹಾಯಾಗ-ಕಲಶಾಭಿಷೇಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ, ಶಾಸಕರು, ಮಾಜಿ ಸಚಿವರು ಭಾಗವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿ ನಗರದಲ್ಲಿ ಮೆರವಣಿಗೆ ಆಯೋಜಿಸಿತ್ತು.

ರಾಮಲಲ್ಲಾ ಕಾರ್ಯಕ್ರಮ ನೇರ ಪ್ರಸಾರಕ್ಕೆ ತಮಿಳುನಾಡಿನಲ್ಲಿ ಕಿಡಿಗೇಡಿಗಳಿಂದ ಅಡ್ಡಿ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೀದರ್, ವಿಜಯಪುರದ ಪ್ರಮುಖ ಸ್ಥಳಗಳಲ್ಲಿ ಇದೇ ರೀತಿಯ ಹಬ್ಬಗಳು ಕಂಡುಬಂದವು. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರು, ತುಮಕೂರು, ಕೋಲಾರ, ಬಳ್ಳಾರಿ, ಕೊಪ್ಪಳ, ಗದಗ, ದಾವಣಗೆರೆ ಮತ್ತು ಹಾವೇರಿ ಪಟ್ಟಣಗಳು ಕೇಸರಿ ನಗರಿಗಳಾಗಿ ಪರಿವರ್ತನೆಗೊಂಡಿದ್ದವು.

RELATED ARTICLES

Latest News