Monday, May 6, 2024
Homeರಾಜ್ಯಜ.22ರಂದು ರಜೆ ಘೋಷಿಸುವಂತೆ ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯಿ

ಜ.22ರಂದು ರಜೆ ಘೋಷಿಸುವಂತೆ ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯಿ

ಬೆಂಗಳೂರು,ಜ.19- ಇದೇ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಂದು ರಜೆಯನ್ನು ಘೋಷಿಸುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಎಸ್‍ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕ ರಾಜ್ಯಗಳು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವಂತೆ ರಜೆ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರವು ಅರ್ಧದಿನವನ್ನು ರಜೆ ಎಂದು ಘೋಷಿಸಿದೆ. ಅದೇ ರೀತಿ ರಾಜ್ಯದಲ್ಲೂ ಘೋಷಣೆ ಮಾಡಲಿ ಎಂದು ಮನವಿ ಮಾಡಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ರಾಮ ಭಕ್ತರಿಗೆ ಪೂಜೆ, ಪುನಸ್ಕಾರ ಹಾಗು ಕಾರ್ಯಕ್ರಮವನ್ನು ಖುದ್ದು ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯ ಎಂದರು. ರಾಮನ ಬಗ್ಗೆ ಇಂದು ಪುಂಖಾನುಪುಂಖವಾಗಿ ಮಾತನಾಡುತ್ತಿರುವ ಕಾಂಗ್ರೆಸ್‍ನವರು ಒಂದು ಕಾಲದಲ್ಲಿ ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದವರು , ರಾಮನಿಲ್ಲ ಎಂದವರು ಇಂದು ಶ್ರೀರಾಮನನ್ನು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದರು.

ಪ್ರಭು ಶ್ರೀರಾಮಚಂದ್ರನ ಅಸ್ತಿತ್ವದ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ನನ್ನ ಮನವಿ ಏನೆಂದರೆ, ರಾಮನ ಬಗ್ಗೆ ಮಾತನಾಡುತ್ತೇವೆ ಎಂದರೆ ಮೊದಲು ಮಹರ್ಷಿ ವಾಲ್ಮೀಕಿಯವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.

ಅನೇಕ ವರ್ಷಗಳ ಹೋರಾಟದ ಬಳಿಕ ಎಸ್‍ಟಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಿದ್ದ ಕೀರ್ತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿ ದಿನಾಚರಣೆ ಆಚರಣೆ ಮಾಡಲು ರಜೆ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ. ಬುಡಕಟ್ಟು ಜನಾಂಗದಿಂದ ಬಂದ ದ್ರೌಪದಿ ಮುರ್ಮು ಸಹ ಇಂದು ರಾಷ್ಟ್ರಪತಿ ಆಗಿದ್ದಾರೆ, ಅವರನ್ನು ಗುರುತಿಸುವ ಕೆಲಸ ಮಾಡಿದ್ದು ಬಿಜೆಪಿಯೇ.

ಮೋದಿ ಹಗಲು-ರಾತ್ರಿ ಕೆಲಸ ಮಾಡಿ ಅಗ್ರಗಣ್ಯ ದೇಶದ ಸಾಲಿಗೆ ಭಾರತವನ್ನು ಸೇರಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಗಿಮಿಕ್ ಮಾಡಿಕೊಂಡು ಗ್ಯಾರಂಟಿ ಕೊಡುತ್ತಿದೆ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕೆಂದು ಕಾರ್ಯಕರ್ತರಿಗೆ ವಿಜಯೇಂದ್ರ ಕರೆ ಕೊಟ್ಟರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ರಾಮಾಯಣದ ಆದರ್ಶ ವ್ಯವಸ್ಥೆ ಅತ್ಯಂತ ಸಂದೇಶ ಸ್ಪಷ್ಟನೆ ಕೊಟ್ಟಿದೆ. ಜಾತಿಗಿಂತ ಗುಣಕ್ಕೆ ಪ್ರಧಾನ್ಯ ಇತ್ತು ಎಂದು ವಾಲ್ಮಿಕಿ ನಿರೂಪಿಸಿದ್ದರು ಎಂದು ಹೇಳಿದರು.ಪಕ್ಷದಲ್ಲಿ ST ಸಮುದಾಯದವರು ಯಾರು ಗೆದ್ದಿಲ್ವ. ಮುದ್ರಾ ಯೋಜನೆಯಲ್ಲಿ ಎಸ್‍ಟಿ-ಎಸ್‍ಸಿಗಳಿಗೆ 50% ಸಾಲ ಸಿಕ್ಕಿದೆ. ಏಕಲವ್ಯ ಶಾಲೆಯನ್ನು ನಿರ್ಲಕ್ಷ್ಯ ಮಾಡಲಾಗಿತ್ತು. 38 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು ನರೇಂದ್ರ ಮೋದಿ ಸರ್ಕಾರ ಎಂದರು.

ಪ್ರಧಾನಿ ಜನ್ ಮನ್ ಯೋಜನೆಯಲ್ಲಿ 24 ಸಾವಿರ ಕೊಟ್ಟು ಶಾಲೆಗಳಿಗೆ ನೀರು ಮುಂತಾದ ಮೂಲಭೂತ ಸೌಕರ್ಯ ಕೊಟ್ಟು ನ್ಯಾಯ ನೀಡಿದ್ದು ಪ್ರಧಾನಿ ಮೋದಿಯವರು. ಶ್ರೀರಾಮನ ಪ್ರತಿಷ್ಠಾಪನೆ ನಡೆಯುವ ಸಮಯದಲ್ಲಿ ಅಪಹಾಸ್ಯ ಮಾಡುವ ತಕ್ಕಪಾಠ ಕಲಿಸಬೇಕಿದೆ ಎಂದು ಹೇಳಿದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ : ಕ್ಷಮೆ ಯಾಚಿಸಿದ ನಟಿ ನಯನತಾರಾ

ದೇಶದಲ್ಲಿ ಬಹುದೊಡ್ಡ ಬೆಳವಣಿಗೆ ನಡೆಯುತ್ತಿದೆ. ಆರ್ಥಿಕವಾಗಿ ಬಹುದೊಡ್ಡ ಹೆಜ್ಜೆ ಇಡಲಾಗುತ್ತಿದೆ. ನೂರು ಲಕ್ಷ ಕೋಟಿಯನ್ನು ಇನ್‍ಫ್ರಾಸ್ಟಕ್ಚರ್‍ಗೆ ಅನುದಾನ ಕೊಟ್ಟು ಕೆಲಸ ಮಾಡುತ್ತಿದ್ದಾರೆ. 10 ವರ್ಷದಲ್ಲಿ ಏನಾಗಿದೆ ಎಂದು ಪ್ರಶ್ನೆ ಕೇಳುವವರಿಗೆ ಸಾಕಷ್ಟು ಉದಾಹರಣೆಗಳಿವೆ ಎಂದರು.

5 ದುರ್ಬಲ ರಾಷ್ಟ್ರ ಅಂತ ಪರಿಗಣಿಸುತ್ತಿದ್ದರು. ಈಗ ಭಾರತ ಜಗತ್ತಿನ ಪ್ರಬಲ 5ನೇ ಆರ್ಥಿಕ ರಾಷ್ಟ್ರವಾಗಿದೆ. 21ನೇ ಶತಮಾನವು ಭಾರತದ ಶತಮಾನವಾಗಲಿದೆ. ವಿಕಸಿತ ಭಾರತ ಅಗುವುದಕ್ಕೆ ರೋಡ್ ಮ್ಯಾಪ್ ಪ್ರಧಾನಿ ಮೋದಿ ಬಳಿ ಇದೆ. ಜನರಲ್ಲಿ ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

RELATED ARTICLES

Latest News