ಬೆಂಗಳೂರು,ಡಿ.11- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿವೃತ್ತಿಯಾದರೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತ ಕಳ್ಳಾಟ ನಡೆಸುತ್ತಿದ್ದ ನಿವೃತ್ತಿ ನೌಕರರ ಕಳ್ಳಾಟಕ್ಕೆ ಬ್ರೇಕ್ ಹಾಕಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಆಯಕಟ್ಟಿನ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದ ಸುಮಾರು ಒಂದ್ ಡಜನ್ ನಿವೃತ್ತಿ ನೌಕರರಿಗೆ ಬಿಡಿಎ ದಿಢೀರ್ ಶಾಕ್ ನೀಡಿದೆ.
BIG NEWS : 370ನೇ ವಿಧಿ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಸುಪ್ರೀಂ
ಪ್ರತಿ ಫೈಲ್ ನಲ್ಲೂ ನಿವೃತ್ತಿ ನೌಕರರು ಸಾಲು ಸಾಲು ಕೈಚಳಕ ಆರೋಪ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ನಿವೃತ್ತರಾದ ಬಳಿಕ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರರು ಜೊತೆಗೆ ಹೊಸಬರಿಗೆ ಕೆಲಸ ಮಾಡಲು ಅವರು ಬಿಡುತ್ತಿರಲಿಲ್ಲ ಎಂಬ ಆರೋಪವೂ ಅವರ ಮೇಲೆ ಕೇಳಿ ಬಂದಿತ್ತು.
ಗೇಟ್ ಪಾಸ್ ಪಡೆದ ನಿವೃತ್ತ ನೌಕರರ ವಿವರ ಇಂತಿದೆ. ವಿ.ಮಂಜುನಾಥ್, ನಿವೃತ್ತ ಮೇಲ್ವಿಚಾರಕರು- ಸಧ್ಯ ಟಪಾಲ್ ವಿಭಾಗದಲ್ಲಿ ಅಭಿಯಂತರ ಸದಸ್ಯರಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ
* ಸಂಪತ್ ಕುಮಾರ್- ನಿವೃತ್ತ ಮೇಲ್ವಿಚಾರಕರು- ಸಧ್ಯ ಬಿಡಿಎ ಅಧ್ಯಕ್ಷರ ಆಪ್ತ ಶಾಖೆಯಲ್ಲಿ ಗುತ್ತಿಗೆ ಕೆಲಸ
* ಸುಬ್ಬರಾವ್ – ನಿವೃತ್ತ ಮೇಲ್ವಿಚಾರಕರು- ಆಯುಕ್ತರ ಆಪ್ತ ಶಾಖೆ- ಗುತ್ತಿಗೆ
* ಹೊಸಳಯ್ಯ- ನಿವೃತ್ತ ಕಂದಾಯ ನಿರೀಕ್ಷಕರು- ಸಧ್ಯ ಪಿ.ಆರ್ಆರ್ ಹೊರಗುತ್ತಿಗೆ
* ಚಿಕ್ಕೇಗೌಡ- ನಿವೃತ್ತ ಅಧಿಕಾರಿ- ಸಧ್ಯ ಪಿಆರ್ಆರ್ ಹೊರ ಗುತ್ತಿಗೆ
* ಶ್ರೀನಿವಾಸ್ -ನಿವೃತ್ತ ಶಿಫ್ರ ಲಿಪಿಗಾರ. ಸಧ್ಯ ನಗರ ಯೋಜನಾ ಸದಸ್ಯ. ಹೊರಗುತ್ತಿಗೆ
* ಪ್ರಕಾಶ್ ಡಿ.ಎನ್- ನಿವೃತ್ತ ಗ್ರೂಪ್ ಡಿ ನೌಕರ. ವಾಹನ ಚಾಲಕ – ಹೊರಗುತ್ತಿಗೆ
* ವೆಂಕಟಯ್ಯ-ನಿವೃತ್ತ ಗ್ರೂಪ್ ಡಿ ನೌಕರ ಸಧ್ಯ ಮಾನ್ಯ ಆಯುಕ್ತರ ಆಪ್ತ ಶಾಖೆ- ಗುತ್ತಿಗೆ
* ಲಿಂಗಯ್ಯ- ನಿವೃತ್ತ ಡಿ ಗ್ರೂಪ್ ನೌಕರ ಸಧ್ಯ ಕಾರ್ಯದರ್ಶಿಯವರ ಅಪ್ತ ಶಾಖೆ/ ಗುತ್ತಿಗೆ
* ಶಿವಲಿಂಗಯ್ಯ- ನಿವೃತ್ತ ಗ್ರೂಪ್ ಡಿ ನೌಕರ, ಸಧ್ಯ ಕಾರ್ಯದರ್ಶಿಯವರ ಅಪ್ತ ಶಾಖೆ/ ಗುತ್ತಿಗೆ
* ನಾರಾಯಣ ಸ್ವಾಮಿ- ನಿವೃತ್ತ ಗ್ರೂಪ್ ಡಿ- ಸಧ್ಯ ಆರ್ಥಿಕ ಸದಸ್ಯ-ಗುತ್ತಿಗೆ.