Sunday, July 7, 2024
Homeರಾಜಕೀಯ"ಕರ್ನಾಟಕದ ಕಾನೂನು ಸುವ್ಯವಸ್ಥೆ ಉಳಿಸುವ ದಕ್ಷ ಗೃಹಸಚಿವರು ಬೇಕಾಗಿದ್ದಾರೆ" : ಯತ್ನಾಳ್‌

“ಕರ್ನಾಟಕದ ಕಾನೂನು ಸುವ್ಯವಸ್ಥೆ ಉಳಿಸುವ ದಕ್ಷ ಗೃಹಸಚಿವರು ಬೇಕಾಗಿದ್ದಾರೆ” : ಯತ್ನಾಳ್‌

ಬೆಂಗಳೂರು,ಮೇ20- ಕರ್ನಾಟಕದ ಕಾನೂನು ಸುವ್ಯವಸ್ಥೆ ಉಳಿಸುವ ದಕ್ಷ ಗೃಹಸಚಿವರು ಬೇಕಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯಭರಿತವಾಗಿ ಟ್ವೀಟ್‌ ಮಾಡಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕುರ್ಚಿಗೆ ಭಾವಚಿತ್ರವನ್ನು ಅಂಟಿಸಿ ದಕ್ಷ ಗೃಹಸಚಿವರು ಬೇಕಾಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಹಾಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರ ಕಾಲೆಳೆದಿದ್ದಾರೆ. ಸಮಾಜದಲ್ಲಿ ಅಶಾಂತಿ, ಗಲಭೆ, ಬೆದರಿಕೆ, ಕೊಲೆ, ಅತ್ಯಾಚಾರ, ಅನೀತಿ, ಅನ್ಯಾಯ, ಕೃತ್ಯಗಳನ್ನು ಹತ್ತಿಕ್ಕಲು ಓರ್ವ ದಕ್ಷ ಸಮರ್ಥ ಗೃಹಮಂತ್ರಿ ಬೇಕಾಗಿದ್ದಾರೆ ಎಂದು ಹಾಲಿ ಸಚಿವರ ಕಾರ್ಯವೈಖರಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಕಠಿಣ ಕ್ರಮ, ಕಾನೂನು ರೀತ್ಯ ಕ್ರಮ ಈ ಪದಪುಂಜಗಳನ್ನು ಬಿಟ್ಟು ಪಾತಕಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಕಾರ್ಯ ನಿರ್ವಹಿಸಬೇಕು. ಅವರು ನಮ ಬ್ರದರ್ಸ್‌, ಸಿಸ್ಟರ್ಸ್‌ ಎಂದು ಓಲೈಕೆ ರಾಜಕಾರಣ ಮಾಡಬಾರದು ಉಡಾಫೆ ಮಾತುಗಳನ್ನು ಆಡಮಾರದೆಂದು ಮನವಿ ಮಾಡಿದ್ದಾರೆ.

ಹಾರಿಕೆ ಉತ್ತರಗಳನ್ನು ಬಿಟ್ಟು ಗಂಭೀರವಾಗಿ ಕೆಲಸ ನಿರ್ವಹಿಸಬೇಕು, ದೇಶ ಮೊದಲು ಎಂಬ ಭಾವನೆ ಇರಬೇಕು. ಹಿರಿಯ ಅಧಿಕಾರಿಗಳಿಗೆ/ಜನರಿಗೆ ಏಕವಚನವನ್ನು ಬಳಸದಿರುವುದು ಪೊಲೀಸ್‌‍ ಇಲಾಖೆ/ಗುಪ್ತಚರ ಇಲಾಖೆಯನ್ನು ಕಾರ್ಪರೇಟ್‌ ಮಾದರಿ ನಡೆಸುವ ಚಾಕಚಕ್ಯತೆ, ಕಾನೂನುಬಾಹಿರ ಚಟುವಟಿಕೆಗಳಿಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಸಲಹೆ ಮಾಡಿದ್ದಾರೆ.

ಮೇಲ್ಕಂಡ ಕಾರ್ಯವೈಖರಿ, ವ್ಯಕ್ತಿತ್ವವಿರುವ ಶಾಸಕರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ ಸ್ವವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕಳುಹಿಸಬಹುದು ಎಂದು ಟೀಕೆ ಮಾಡಿದ್ದಾರೆ.

RELATED ARTICLES

Latest News