ಬೆಂಗಳೂರು, ಮಾ.13- ಗ್ಯಾಸ್ ಸಮಸ್ಯೆಯಿಂದ ಹಲವು ಹೋಟೆಲ್‌ಗಳಲ್ಲಿ ತಿನಿಸುಗಳ ತಯಾರಿಕೆಯಲ್ಲಿ ವ್ಯತ್ಯಯವಾಗಿದ್ದು, ಗ್ರಾಹಕರಿಗೂ ಕೂಡ ತಲೆ ಬಿಸಿಯಾಗಿದೆ. ತರಾವರಿ ತಿಂಡಿಗಳನ್ನು ತಯಾರಿಸುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದ ಕೆಲವು ಹೋಟೆಲ್‌ಗಳು ಮುಚ್ಚಲಾಗಿದ್ದು, ಇನ್ನೂ ಕೆಲವೆಡೆ ಕೇವಲ ಅನ್ನ ಸಾಂಬಾರ್, ಚಿತ್ರಾನ್ನ ಮಾತ್ರ ದೊರೆಯುತ್ತಿದೆ.
ವಾಣಿಜ್ಯ ಸಿಲಿಂಡರ್‌ಗಳನ್ನು ನಿಗದಿಯಂತೆ ಕೆಲವು ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಒಮೆಲೆ ಬೇಡಿಕೆ ಹೆಚ್ಚುತ್ತಿರುವುದರಿಂದ ಇಂತಹ ಪರಿಸ್ಥಿತಿಯನ್ನು ನಿರ್ಮಾನವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವೆಡೆ ಈಗ ಇಂಡೆಕ್ಷನ್ ಸ್ಟೌಗಳನ್ನು ಬಳಸುತ್ತಿದ್ದು ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಸೀಮೆಎಣ್ಣೆ ಪಂಪ್ ಸ್ಟೌಗಳು ಕೂಡ ಹೊರಗೆ ಬರುತ್ತಿವೆ. ಸೌರಶಕ್ತಿಯನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಕೆ ಕೇಂದ್ರಗಳು ಕೂಡ ಹಲವೆಡೆ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಬಳಸಿಕೊಂಡು ನಿಗದಿಯಂತೆ ಹಲವು ಹೋಟೆಲ್‌ಗಳಿಗೆ ತಲುಪಿಸಲಾಗುತ್ತಿದೆ.
ಇನ್ನೂ ಕೆಲವರು ಆನ್‌ಲೈನ್ ಮೂಲಕ ಆಹಾರ ತರಿಸಿಕೊಳ್ಳುವ ವ್ಯವಸ್ಥೆಗೂ ಕೂಡ ಪೆಟ್ಟು ಬಿದ್ದಿದ್ದು, ಮನೆ ಊಟಕ್ಕೆ ಈಗ ಕೆಲವರು ಮುಂದಾಗುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಾಜ್ಯದ ಕೆಲವೆಡೆ ಗ್ಯಾಸ್ ಏಜೆನ್ಸಿಯವರು ಫೋನ್ ಕಾಲ್ ರಿಸೀವ್ ಮಾಡುತ್ತಿಲ್ಲ ಎಂದು ಕೇಂದ್ರದ ಬಳಿಯೇ ಹೋಗಿ ಸಿಲಿಂಡರ್‌ಗಳನ್ನು ಪಡೆಯಲು ಸಾಲು ಗಟ್ಟಿರುವ ದೃಶ್ಯಗಳು ಕೂಡ ಕಂಡು ಬಂದಿದೆ. ಹೋಟೆಲ್‌ಗಳಲ್ಲಿ ಪಾರ್ಟಿಗಳು ಕಡಿಮೆಯಾಗಿದ್ದು, ಆಹಾರ ಪೂರೈಕೆ ಕ್ಷೇತ್ರದಲ್ಲೂ ಕೂಡ ಸಾಕಷ್ಟು ಸಮಸ್ಯೆ ಉಂಟಾಗಿದೆ. ಮದುವೆ ಮತ್ತು ಶುಭ ಕಾರ್ಯಗಳಿಗೆ ಆಹಾರ ತಯಾರಿಕೆಗೆ ಕೂಡ ಅನಿಲ ಕೊರತೆ ಉಂಟಾಗಿದೆ.
