ಬೆಂಗಳೂರು,ಮಾ.11-ಸ್ನೇಹಿತೆಯ ಮನೆಗೆ ಬಂದು ಆಭರಣಗಳನ್ನು ಕಳ್ಳತನ ಮಾಡಿದ್ದ ಸ್ನೇಹಿತ ಹಾಗೂ ಕಳವು ಆಭರಣಗಳನ್ನು ಸ್ವೀಕರಿಸುತ್ತಿದ್ದ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ, 17.71 ಲಕ್ಷ ರೂ. ಮೌಲ್ಯದ 126.5 ಗ್ರಾಂ ಆಭರಣಗಳು ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೋರಾಯನಪಾಳ್ಯದ ನಿವಾಸಿ ಮೊಹಮದ್ ಕಹಾಖಾನ್ (23) ಬಂಧಿತ ಆರೋಪಿ.
ಕನಕನಗರದ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಅನೀಸ್ ಫಾತೀಮಾ ಎಂಬುವವರ ಮನೆಯಲ್ಲಿ ಸುಮಾರು 481 ಗ್ರಾಂ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಕೆಲಸದಾಕೆ ಮತ್ತು ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ವಿಚಾರಣೆ ನಡೆಸಿದಾಗ ಕಳ್ಳತನದಲ್ಲಿ ಭಾಗಿಯಾಗದಿರುವುದು ಕಂಡು ಬಂದಿದೆ.
ಹಾಗಾಗಿ ತನಿಖೆ ಮುಂದುವರೆಸಿದ ಪೊಲೀಸರು ಫಾತೀಮಾ ಅವರ ಮನೆಗೆ ಬಂದು ಹೋಗಿರುವವರ ಬಗ್ಗೆ ವಿಚಾರಿಸಿದಾಗ, ಚಿಕ್ಕ ಮಗಳ ಸ್ನೇಹಿತನು ಆಗಾಗ್ಗೆ ಬರುತ್ತಿದ್ದನು ಎಂದು ಹೇಳಿದಾಗ ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಕಳುವು ಮಾಡಿದ್ದ ಆಭರಣಗಳ ಪೈಕಿ ಕೆಲವು ಆಭರಣಗಳನ್ನು ಪರಿಚಯಸ್ಥರ ಮುಖಾಂತರ ದಿನ್ನೂರು ಮುಖ್ಯ ರಸ್ತೆಯ ಪ್ಯೂರ್‌ಗೋಲ್ಡ್ ಅಂಗಡಿಯಲ್ಲಿ ಮತ್ತು ಆರ್‌ಟಿನಗರದ ಹಿಂದೂಸ್ಥಾನ್ ಗೋಲ್‌್ಡನಲ್ಲಿ ಮಾರಾಟ ಮಾಡಿದ್ದು, ಇನ್ನೂ ಕೆಲವು ಆಭರಣಗಳನ್ನು ನಗರತ್‌ಪೇಟೆಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ.
ತನಿಖೆ ಮುಂದುವರೆಸಿ ಎರಡು ಆಭರಣಗಳ ಅಂಗಡಿಗಳಿಂದ ಒಟ್ಟು 98.50 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಲ್ಲದೇ, ಕಳವು ಆಭರಣಗಳನ್ನು ಸ್ವೀಕರಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಕಳವು ಮಾಲೆಂದು ಗೊತ್ತಿದ್ದರೂ ಸಹ ಅವುಗಳನ್ನು ಕರಗಿಸಿ ಗಟ್ಟಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಈತನಿಂದ 28 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಭೈರ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಮನೆಕೆಲಸದಾಕೆಯ ಸೆರೆ : 10 ಗ್ರಾಂ ವಜ್ರ ಮಿಶ್ರಿತ ಚಿನ್ನದ 4 ಉಂಗುರ ಜಪ್ತಿ
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಾಲೀಕರ ಕಣ್ತಪ್ಪಿಸಿ ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಸುಬ್ರಮಣ್ಯನಗರ ಠಾಣೆ ಪೊಲೀಸರು ಬಂಽಸಿ 4 ಲಕ್ಷ ವೌಲ್ಯದ 10 ಗ್ರಾಂ ವಜ್ರ ಮಿಶ್ರಿತ ಚಿನ್ನದ 4 ಉಂಗುರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಪಿರ್ಯಾದು ದಾರರ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಮನೆಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಬ್ಯಾಗ್‌ನಲ್ಲಿದ್ದ ಹಣ ಹಾಗೂ ವಾರ್ಡ್‌ರೋಬ್‌ನಲ್ಲಿದ್ದ ವಜ್ರ ಮಿಶ್ರಿತ ಚಿನ್ನದ ನಾಲ್ಕು ಉಂಗುರಗಳನ್ನು ಕಳ್ಳತನ ಮಾಡಿದ್ದಾಳೆ. ಅದು ಮನೆಯವರ ಗಮನಕ್ಕೆ ಬಂದಿಲ್ಲ.ಇತ್ತೀಚೆಗೆ ಮನೆ ಮಾಲೀಕರು ವಾರ್ಡ್‌ರೋಬ್ ತೆಗೆದು ನೋಡಿದಾಗ ಅದರಲ್ಲಿ ಉಂಗುರ ಗಳು ಇಲ್ಲದಿರುವುದು ಗಮನಿಸಿ ಮನೆಗೆಲಸದಾಕೆಯನ್ನು ವಿಚಾರಿಸಿದ್ದಾರೆ.
ಆ ಸಂದರ್ಭದಲ್ಲಿ ತನಗೆ ಯಾವುದೇ ಹಣ,ಆಭರಣದ ಬಗ್ಗೆ ಗೊತ್ತಿಲ್ಲ, ನಾನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾಳೆ. ಮನೆ ಮಾಲೀಕರಿಗೆ ಆಕೆಯ ಮೇಲೆಯೇ ಅನುಮಾನ ಬಂದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಮನೆಗೆಲಸದಾಕೆಯನ್ನು ಸುಬ್ರಮಣ್ಯನಗರದ 14ನೇ ಮುಖ್ಯ ರಸ್ತೆ, ಪುಣ್ಯಕೋಟಿ ವಾಟರ್ ಸರ್ವಿಸ್ ಹತ್ತಿರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.
ಆಕೆಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, 10 ಗ್ರಾಂ ವಜ್ರ ಮಿಶ್ರಿತ ಚಿನ್ನದ 4 ಉಂಗುರಗಳನ್ನು ತನ್ನ ಮನೆಯ ಲ್ಲಿಯೇ ಇಟ್ಟಿರುವುದಾಗಿ ತಿಳಿಸಿದ್ದು, ಆಕೆಯ ಮಾಹಿತಿಯಂತೆ ಸುಮಾರು 4 ಲಕ್ಷ ವೌಲ್ಯದ ಉಂಗುರಗಳನ್ನು ವಶಪಡಿಸಿ ಕೊಳ್ಳುವುದರಲ್ಲಿ ಇನ್‌್ಸ ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
