Friday, June 21, 2024
Homeಕ್ರೀಡಾ ಸುದ್ದಿಶಾರುಖ್‌ಖಾನ್‌ಗಿಂತಲೂ 4 ಪಟ್ಟು ಹೆಚ್ಚು ಶ್ರೀಮಂತೆ ಕಾವ್ಯ ಮಾರನ್‌

ಶಾರುಖ್‌ಖಾನ್‌ಗಿಂತಲೂ 4 ಪಟ್ಟು ಹೆಚ್ಚು ಶ್ರೀಮಂತೆ ಕಾವ್ಯ ಮಾರನ್‌

ನವದೆಹಲಿ, ಮೇ 28- ಬಾಲಿವುಡ್‌ನ ಕಿಂಗ್‌ಖಾನ್ ಶಾರುಖ್‌ಖಾನ್‌ಗಿಂತಲೂ ಸನ್‌ರೈಸರ್‌ ಹೈದ್ರಾಬಾದ್‌ ಐಪಿಎಲ್‌ ಕ್ರಿಕೆಟ್‌ ತಂಡದ ನಾಯಕಿ ಕಾವ್ಯ ಮಾರನ್‌ ನಾಲ್ಕು ಪಟ್ಟು ಹೆಚ್ಚು ಶ್ರೀಮಂತೆಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ ಪಂದ್ಯಾವಳಿಯಲ್ಲಿ ಶಾರುಖ್‌ ಖಾನ್‌ ಸಹಮಾಲೀಕತ್ವ ಇರುವ ಕೋಲ್ಕತ್ತಾ ನೈಟ್‌ರೈಡರ್‌ರ‍ಸ ತಂಡ 2024 ರ ಐಪಿಎಲ್‌ ಸರಣಿಯನ್ನು ಗೆದ್ದುಕೊಂಡಿದೆ.

ಸನ್‌ರೈಸ್‌‍ ಹೈದ್ರಾಬಾದ್‌ ರನ್ನರ್‌ ಅಪ್‌ ಆಗಿದೆ. ಈ ತಂಡದ ನಾಯಕಿ ಕಾವ್ಯ ಮಾರನ್‌ ಬಗ್ಗೆ ಈಗ ವ್ಯಾಪಕ ಚರ್ಚೆಗಳು ಶುರುವಾಗಿವೆ. 1992 ರ ಆಗಸ್ಟ್‌ನಲ್ಲಿ ಜನಿಸಿದ ಕಾವ್ಯ ಮಾರನ್‌ ತಮಿಳುನಾಡಿನ ಕಲಾನಿಧಿ ಮಾರನ್‌ ಅವರ ಪುತ್ರಿ. ಆಕೆ ಚೆನ್ನೈನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಲಂಡನ್‌ನಲ್ಲಿ ಎಂಬಿಎ ಓದಿದ್ದು, ಸದ್ಯಕ್ಕೆ ಸನ್‌ಗ್ರೂಪ್‌ನ ಹಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಕಲಾನಿಧಿ ಮಾರನ್‌ರವರು ಸನ್‌ ನೆಟ್‌ವರ್ಕ್‌ನಲ್ಲಿ ಹಲವು ಚಾನಲ್‌ಗಳನ್ನು, ಪತ್ರಿಕೆಗಳನ್ನು, ರೇಡಿಯೋ ಸ್ಟೇಟ್‌ಮೆಂಟ್‌ಗಳನ್ನು ಹೊಂದಿರುವುದಲ್ಲದೆ, ಚಿತ್ರದ ನಿರ್ಮಾಣದಲ್ಲೂ ಪ್ರಮುಖ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸ್ಪೈಸ್‌‍ ಜೆಟ್‌ ವಿಮಾನಸೇವೆಯನ್ನು ಹೊಂದಿದ್ದಾರೆ. ಅವರ ಏಕೈಕ ಪುತ್ರಿ ಕಾವ್ಯ ಮಾರನ್‌ ಅಷ್ಟೂ ಆಸ್ತಿಗಳಿಗೆ ಒಡತಿಯಾಗಿದ್ದಾರೆ.

ಹೈದ್ರಾಬಾದ್‌ನ ಸನ್‌ರೈಸರ್‌ ಸಂಸ್ಥೆ ಮೂಲಕ ಕಾವ್ಯ ಮಾರನ್‌ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. ಆಕೆಗಿಂತಲೂ ಹೆಚ್ಚು ಜನಪ್ರಿಯತೆ ಹೊಂದಿರುವ ಶಾರುಖ್‌ಖಾನ್‌ ಆಸ್ತಿಯ ಒಟ್ಟು ಮೌಲ್ಯ 6 ಸಾವಿರ ಕೋಟಿ ರೂ. ಶಾರುಖ್‌ ಖಾನ್‌ ಕೂಡ ಚಲನಚಿತ್ರ ನಿರ್ಮಾಣ, ವಿಎಫ್‌ಎಕ್‌್ಸ ಸ್ಟುಡಿಯೋ ಸೇರಿದಂತೆ ಹಲವು ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಕಾವ್ಯ ಮಾರನ್‌ 24 ಸಾವಿರ ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದ್ದು, ದೇಶದ ಶ್ರೀಮಂತರ ಪಟ್ಟಿಯಲ್ಲಿ 82ನೇ ಸ್ಥಾನ ಪಡೆದಿದ್ದಾರೆ.

RELATED ARTICLES

Latest News