Saturday, July 27, 2024
Homeಜಿಲ್ಲಾ ಸುದ್ದಿಗಳುಷೇರು ವಹಿವಾಟು ಹೆಸರಿನಲ್ಲಿ ವೃದ್ಧನಿಗೆ 21 ಲಕ್ಷ ಪಂಗನಾಮ

ಷೇರು ವಹಿವಾಟು ಹೆಸರಿನಲ್ಲಿ ವೃದ್ಧನಿಗೆ 21 ಲಕ್ಷ ಪಂಗನಾಮ

ಮೈಸೂರು, ಮೇ 28- ಶೇರು ವಹಿವಾಟಿನಲ್ಲಿ ಲಕ್ಷಾಂತರ ರೂ. ಲಾಭ ಬಂದಿದೆ ಎಂದು ನಂಬಿಸಿ ವೃದ್ಧರೊಬ್ಬರಿಗೆ 21,74,773 ರೂ. ವಂಚನೆ ಮಾಡಿರುವ ಪ್ರಕರಣ ಮೈಸೂರಿನ ಸೆನ್‌ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದೆ.

ಮೈಸೂರಿನ ಜೆಪಿ ನಗರ ನವಾಸಿ ವೆಂಕಟೇಶ್‌ ಎಂಬುವರೇ ವಂಚನೆಗೆ ಒಳಗಾದವರು.ವಾಟ್ಸ್‌‍ ಅಪ್‌ ಗ್ರೂಪ್‌ ಒಂದರಲ್ಲಿ ಜಾಯಿನ್‌ ಆದ ವೆಂಕಟೇಶ್‌ ವಂಚಕರು ನೀಡಿದ ಸಲಹೆ ಮೇಲೆ ಹಂತ ಹಂತವಾಗಿ ಲಕ್ಷಾಂತರ ಹಣ ತಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ.

ಲಾಭದ ಹಣವನ್ನ ವಿತ್‌ ಡ್ರಾ ಮಾಡಲು ಮುಂದಾದಾಗ ಶೇ. 30 ಕಮೀಷನ್‌ ಕೇಳಿದ್ದಾರೆ. ಈ ಹಂತದಲ್ಲೂ 3 ಲಕ್ಷ ಹಣವನ್ನ ಕಮೀಷನ್‌ ಆಗಿ ನೀಡಿದ್ದಾರೆ. ಪ್ರಾಫಿಟ್‌ ಹಣ ಡ್ರಾ ಮಾಡಲು ಯತ್ನಿಸಿದಾಗ ಮತ್ತೆ ಎರಡು ಲಕ್ಷ ಕೇಳಿದ್ದಾರೆ. ಆಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ.ಒಟ್ಟು 21,74,773 ರೂ ಕಳೆದುಕೊಂಡ ವೆಂಕಟೇಶ್‌ ಸೆನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News