Tuesday, May 21, 2024
Homeರಾಷ್ಟ್ರೀಯಮತದಾನ ಹೆಚ್ಚಳಕ್ಕೆ ಬಿಜೆಪಿ ಪ್ಲಾನ್‌

ಮತದಾನ ಹೆಚ್ಚಳಕ್ಕೆ ಬಿಜೆಪಿ ಪ್ಲಾನ್‌

ನವದೆಹಲಿ,ಏ.29- ಮೊದಲನೇ ಮತ್ತು ಎರಡನೇ ಹಂತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗದ ಹಿನ್ನೆಲೆ, ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಮುಂಬರುವ ಹಂತಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸಲು ಪ್ರೇರೇಪಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದೆ.

ನಮ್ಮ ನಿರೀಕ್ಷೆಗೆ ತಕ್ಕಂತೆ ಮೊದಲನೇ ಮತ್ತು 2ನೇ ಹಂತದಲ್ಲಿ ಶೇಕಡವಾರು ಮತದಾನವಾಗಿಲ್ಲ. ಆಡಳಿತ ವಿರೋಧಿ ಅಲೆ ಇಲ್ಲ ಎಂದು ಕೈಕಟ್ಟಿ ಕೂರುವ ಬದಲು ಮತಗಟ್ಟೆಗೆ ಮತದಾರರನ್ನು ಕರೆತಂದು ಮತ ಚಲಾಯಿಸುವಂತೆ ಪ್ರೇರಿಪಿಸಲು ಮುಂದಾಗಬೇಕೆಂದು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಏಳು ಹಂತದ ಲೋಕಸಭೆ ಚುನಾವಣೆಗಳಲ್ಲಿ ಮೊದಲೆರಡು ಚುನಾವಣೆಗಳಲ್ಲಿ ಮತದಾರರ ಸಂಖ್ಯೆಯಲ್ಲಿನ ಕುಸಿತದಿಂದ ಬಿಜೆಪಿ ಕಳವಳಗೊಂಡಿದೆ ಎಂದು ತಿಳಿದುಬಂದಿದೆ. ಪಕ್ಷದ ಪ್ರಮುಖರು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮತದಾರರನ್ನು ಪ್ರೀರೇಪಿಸುವ ಕಾರ್ಯವನ್ನು ತೀವ್ರಗೊಳಿಸಬೇಕೆಂದು ಸೂಚಿಸಿದ್ದಾರೆ.

ಒಂದೆಡೆ, ಪಕ್ಷವು ಅದರ ವಿರುದ್ಧ ಯಾವುದೇ ಆಡಳಿತ ವಿರೋಧಿ ಇಲ್ಲ ಎಂದು ಹೇಳುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ. ಆದರೆ ಮತ್ತೊಂದೆಡೆ, 543 ಸದಸ್ಯರ ಲೋಕಸಭೆಯಲ್ಲಿ 400 ಪ್ಲಸ್‌ ಸೀಟುಗಳನ್ನು ಗೆಲ್ಲುವ ಮತ್ತು ಮತದ ಪ್ರಮಾಣವನ್ನು ಶೇ.50ರಷ್ಟು ಹೆಚ್ಚಿಸುವ ಗುರಿಯ ಮೇಲೆ ಮತದಾರರ ಮತದಾನದ ಕುಸಿತವು ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಚಾರದಲ್ಲಿ ಯಾವುದೇ ಸಡಿಲಿಕೆ ಇಲ್ಲ ಮತ್ತು ಬೂತ್‌ ಕಾರ್ಯಕರ್ತರನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಸುವ ಬದಲು ಮತಗಟ್ಟೆಗೆ ಕರೆತರಬೇಕು, ಮತ ಪ್ರಮಾಣ ಹೆಚ್ಚಾದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಹೇಳಿದೆ.

RELATED ARTICLES

Latest News