ನವದೆಹಲಿ,ಫೆ.1- ಸರಿಸುಮಾರು 14 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾವನೆಯೊಂದಿಗೆ ಒಟ್ಟು 50.65 ಲಕ್ಷ ಕೋಟಿ ರೂ. ಗಾತ್ರದ 2025-26ನೇ ಸಾಲಿನ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್‌ನಲ್ಲಿ ಮಂಡಿಸಿದರು.
ಹಲವಾರು ಹೊಸ ಯೋಜನೆಗಳ ಪ್ರಸ್ತಾವನೆಯ ಜೊತೆಗೆ ಮಂಡಿಸಲಾದ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಶೇ.4.4 ಎಂದು ಪ್ರಸ್ತಾಪಿಸಲಾಗಿದೆ.2024-25ನೇ ಸಾಲಿನಲ್ಲಿ ಸಾಲ, ತೆರಿಗೆ ಹಾಗೂ ಇತರ ಮೂಲಗಳ ಮೂಲಕ ಒಟ್ಟು 31.47 ಲಕ್ಷ ಕೋಟಿ ರೂ.ಗಳ ಸ್ವೀಕೃತಿಯೊಂದಿಗೆ 47.16 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಲಾಗಿತ್ತು. ಅದರಲ್ಲಿ ಬಂಡವಾಳ ವೆಚ್ಚ 10.18 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿತ್ತು. ವಿತ್ತೀಯ ಕೊರತೆ ಶೇ.4.8 ಎಂದು ಗ್ರಹಿಸಲಾಗಿತ್ತು.
2025-26ನೇ ಸಾಲಿನ ಬಜೆಟ್‌ನಲ್ಲಿ ಕಳೆದ ವರ್ಷಕ್ಕಿಂತಲೂ 0.4 ರಷ್ಟು ವಿತ್ತೀಯ ಕೊರತೆ ತಗ್ಗಿದೆ. ಪ್ರಸಕ್ತ ಬಜೆಟ್‌ನಲ್ಲಿ 28.37 ಲಕ್ಷ ಕೋಟಿ ತೆರಿಗೆ ಸಂಪನೂಲವನ್ನು ಅಂದಾಜಿಸಲಾಗಿದೆ.
ಸಾಲ ಹಾಗೂ ಇತರ ಸ್ವೀಕೃತಿಗಳ ಮೂಲಕ 34.96 ಲಕ್ಷ ಕೋಟಿ ರೂ.ಗಳ ಸಂಪನೂಲವನ್ನು ನಿರೀಕ್ಷಿಸಲಾಗಿದ್ದು, ವೆಚ್ಚವನ್ನು 50.65 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿದೆ.
ಮಾರುಕಟ್ಟೆ ಸಾಲವನ್ನು ಭದ್ರತಾ ದಸ್ತಾವೇಜುಗಳಿಂದ 11.54 ಲಕ್ಷ ಕೋಟಿ ಸೇರಿ ಒಟ್ಟು 14.82 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಸಾಲವನ್ನು ಅಂದಾಜಿಸಲಾಗಿದೆ.