Saturday, May 18, 2024
Homeಕ್ರೀಡಾ ಸುದ್ದಿಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ : ಐತಿಹಾಸಿಕ ಸಾಧನೆಯತ್ತ ಭಾರತದ ಗುಕೇಶ್

ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ : ಐತಿಹಾಸಿಕ ಸಾಧನೆಯತ್ತ ಭಾರತದ ಗುಕೇಶ್

ಟೊರೊಂಟೋ,ಏ.21- ಭಾರತದ ಹದಿಹರೆಯದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರು ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯ 13ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‍ನ ಫಿರೌಝಾ ಅಲಿರೆಝಾ ಅವರನ್ನು ಪರಾಭವಗೊಳಿಸಿ ಒಬ್ಬರೇ ಅಗ್ರಸ್ಥಾನಕ್ಕೇರಿದ್ದಾರೆ.ತನ್ಮೂಲಕ ವಿಶ್ವ ಚಾಂಪಿಯನ್‍ಶಿಪ್‍ಗಾಗಿ ಸ್ಪರ್ಧಿಸಲಿರುವ ಅತ್ಯಂತ ಕಿರಿಯ ಸ್ಪರ್ಧಿ ಎನ್ನುವ ಶ್ರೇಯದೆಡೆಗೆ ಮುನ್ನಡೆದಿದ್ದಾರೆ.

ಚೆನ್ನೈ ಮೂಲದ 17ರ ಹರೆಯದ ಗುಕೇಶ್ ಒಂದು ವೇಳೆ ಇಲ್ಲಿ ಚಾಂಪಿಯನ್ ಆದರೆ ಅವರು ಚೀನಾದ ಡಿಂಗ್ ಲಿರೆನ್ ಅವರ ವಿರುದ್ಧ ವಿಶ್ವ ಚೆಸ್ ಕಿರೀಟಕ್ಕಾಗಿ ಸೆಣಸಲಿದ್ದಾರೆ.ಮಹಿಳಾ ಸ್ರ್ಪಧಿಗಳ ಪೈಕಿ ಭಾರತದ ಕೊನೆರುಹಂಪಿ ಅವರು ಅನ್ನಾ ಮಝಿಚೆಕ್ ಅವರ ವಿರುದ್ಧ ಡ್ರಾ ಸಾಧಿಸಿದರೆ ವೈಶಾಲಿ ರಮೇಶ್ ಬಾಬು ಅವರು ಲೀ ಟಿಂಗ್ಜೀ ಅವರ ಸವಾಲನ್ನು ಮೀರಿ ನಿಂತರು. 22 ವರ್ಷ ವಯಸ್ಸಿನ ವೈಶಾಲಿ ತಮ್ಮ ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ನಾಲ್ಕನೇ ಗೆಲುವು ಸಂಪಾದಿಸಿದರು.

ಪಂದ್ಯದಲ್ಲಿ ಮುನ್ನಡೆಯಲು ಗೆಲುವಿನ ಅಗತ್ಯವಿದ್ದು, ರಷ್ಯಾದ ಇಯಾನ್ ನೆಪೊಮ್ನಿಯಾಟ್ಚಿ ಹಾಗೂ ಅಮೆರಿಕದ ಹಿಡರು ನಕಮುರಾ ಅವರು ಕ್ಷಿಪ್ರ ಡ್ರಾ ಮಾಡಿಕೊಂಡರೆ ಕಷ್ಟಕರ ಸನ್ನಿವೇಶದಲ್ಲಿ ಅಲಿರೆಝಾ ಎಸಗಿದ ಪ್ರಮಾದದ ಲಾಭ ಪಡೆದ ಗುಕೇಶ್ ಗೆಲುವಿನ ಮುನ್ನಡೆ ಪಡೆದರು.

ಗುಕೇಶ್ ಅವರು ಸಂಭವನೀಂಯ 13 ಪಾಯಿಂಟ್‍ಗಳ ಪೈಕಿ ತಮ್ಮ ಅಂಕ ಗಳಿಕೆಯನ್ನು 8.5ಕ್ಕೆ ಒಯ್ದಿದ್ದಾರೆ. ನೆಪೊಮ್ನಿಯಾಟ್ಚಿ, ನಕಮುರಾ ಮತ್ತು ಅಮೆರಿಕದ ಷೆಬಿಲಿಯಾನೇ ಕರುವಾನಾ ಅವರಿಗಿಂತ ಅರ್ಧ ಅಂಕ ಮುರಿದಿದ್ದಾರೆ.

ಭಾರತದ ಆರ್ ಪ್ರಜ್ಞಾನಂದ ಮತ್ತು ವಿದಿತ್ ಗುಜರಾತಿ 6 ಅಂಕಗಳೊಂದಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಫಿರೌಜಾ 4.5 ಮತ್ತು ಅಬೇಸೇವ್ 3.5 ಅಂಕ ಗಳಿಸಿದ್ದಾರೆ. ಕರುವಾನ ಅವರು ಪ್ರಜ್ಞಾನಂದರನ್ನು ತೀವ್ರ ಪೈಪೋಟಿಯ ಪಂದ್ಯದಲ್ಲಿ ಪರಾಭವಗೊಳಿಸಿದರೆ ವಿದಿತ ಗುಜರಾತಿ ಅಜರ್‍ಬೈಜಾನ್‍ನ ನಿಜಾತ್ ಅಬಸೋವ್ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಗುಕೇಶ್ ಅವರು ಅಂತಿಮ ಪಂದ್ಯದಲ್ಲಿ ಬಿಳಿಕಾಯಿಗಳೊಂದಿಗೆ ಆಡಲಿರುವ ನಡಮುರಾ ಅವರನ್ನು ಎದುರಿಸಲಿದ್ದಾರೆ. ಕರುವಾನ ಅವರು ನೆಪೊಮ್ನಿಯಾಟ್ಚಿ ವಿರುದ್ಧ ತಮ್ಮಗಿಷ್ಟ ಬಂದ ಕಾಯಿಗಳೊಂದಿಗೆ ಆಡುವ ಅವಕಾಶ ಪಡೆದಿದ್ದಾರೆ.

RELATED ARTICLES

Latest News