Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಚಿಕ್ಕಬಳ್ಳಾಪುರ : 5 ಲಕ್ಷ ಮೌಲ್ಯದ ಸೈಲೆನ್ಸರ್‌ಗಳನ್ನು ನಾಶಪಡಿಸಿದ ಪೊಲೀಸರು

ಚಿಕ್ಕಬಳ್ಳಾಪುರ : 5 ಲಕ್ಷ ಮೌಲ್ಯದ ಸೈಲೆನ್ಸರ್‌ಗಳನ್ನು ನಾಶಪಡಿಸಿದ ಪೊಲೀಸರು

Bike Silencers

ಚಿಕ್ಕಬಳ್ಳಾಪುರ, ಆ.29– ಕರ್ಕಶ ಶಬ್ದ ಉಂಟುಮಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಕ್ರಮ ಕೈಗೊಂಡು ವಶಪಡಿಸಿಕೊಳ್ಳಲಾದ ಸುಮಾರು 5 ಲಕ್ಷ ಮೌಲ್ಯದ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕುಶಲ್‌ ಚೌಕ್ಸೆ ನೇತೃತ್ವದಲ್ಲಿ ನಾಶ ಮಾಡಲಾಯಿತು.

ಈ ವೇಳೆ ಎಸ್ಪಿ ಕುಶಾಲ್‌ ಚೌಕ್ಸೆ ಮಾತನಾಡಿ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೆಲ ಯುವಕರು ಕರ್ಕಶ ಧ್ವನಿಯ ಮೂಲಕ ಸಾರ್ವಜನಿಕರಿಗೆ, ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿರುವುದು ಕಂಡುಬಂದಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿ ಕಳೆದ 15 ದಿನಗಳಿಂದ ಸುಮಾರು 150 ದ್ವಿಚಕ್ರ ವಾಹನಗಳನ್ನು ತಪಾಸಣೆ ನಡೆಸಿ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದರು.

ಇದು ಯವಕರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದ ಅವರು, ಮೋಜು, ಮಸ್ತಿ, ರೀಲ್‌್ಸಗಳ ಹುಚ್ಚಿನಿಂದ ಯುವಜನತೆ ಈ ರೀತಿಯ ಸೈಲೆನ್ಸರ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದ್ದ ಹಿನ್ನೆಲೆ ಇಲಾಖೆ ವತಿಯಿಂದ ಕ್ರಮ ವಹಿಸಲಾಗಿದೆ. ಒಂದೊಂದು ಸೈಲೆನ್ಸರ್‌ಗಳು ದುಬಾರಿ ಬೆಲೆಯದ್ದಾಗಿದ್ದು, 10 ಸಾವಿರದಿಂದ 50 ಸಾವಿರದವರೆಗೆ ಬೆಲೆ ಬಾಳುತ್ತವೆ. ಒಟ್ಟಾರೆಯಾಗಿ 5 ಲಕ್ಷ ಮೌಲ್ಯದ 150 ಸೈಲೆನ್ಸರ್‌ಗಳನ್ನು ಇದೀಗ ನಾಶಪಡಿಸಲಾಗಿದೆ ಎಂದರು.

ಇದಷ್ಟೇ ಅಲ್ಲದೆ ಸೈಲೆನ್ಸರ್‌ ತಯಾರಿಸುವ ಗ್ಯಾರೇಜ್‌ ಹಾಗೂ ಅಂಗಡಿ ಮಾಲೀಕರಿಗೂ ಸಹ ಇಲಾಖೆ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಜತೆಗೆ ತೀಕ್ಷ್ಣ ಸ್ವರೂಪದ ಎಲ್‌‍.ಇ.ಡಿ ಬಲ್ಬ್‌‍ ಅಳವಡಿಸುವ ಸವಾರರಿಗೂ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಬಳಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲ್‌‍.ಇ.ಡಿ ಬಲ್ಬ್ ಗಳನ್ನೂ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಗಸ್ತು ವಾಹನಗಳನ್ನು ಚಲಾಯಿಸುವ ಮೂಲಕ ಎಸ್ಪಿ ಕುಶಾಲ್‌ ಚೌಕ್ಸೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ವೇಳೆ ಎಎಸ್ಪಿ ರಾಜಾ ಖಾಸೀಂ, ಸಂಚಾರಿ ಪೊಲೀಸ್‌‍ ಠಾಣೆ ಸಬ್‌ ಇನ್‌್ಸಪೆಕ್ಟರ್‌ ಮಂಜುಳ, ನಗರ ಪೊಲೀಸ್‌‍ ಸಬ್‌ ಇನ್‌್ಸಪೆಕ್ಟರ್‌ ನಂಜುಡಯ್ಯ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

RELATED ARTICLES

Latest News