Friday, November 22, 2024
Homeರಾಜ್ಯ"ನಾನೂ ಶೂದ್ರ-ನೀವೂ ಶೂದ್ರರು ಯಾಕ್ರೀ ಇದೆಲ್ಲಾ.."

“ನಾನೂ ಶೂದ್ರ-ನೀವೂ ಶೂದ್ರರು ಯಾಕ್ರೀ ಇದೆಲ್ಲಾ..”

ಬೆಂಗಳೂರು,ಫೆ.21- ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು. ಹೀಗಿದ್ದೂ ಯಾಕ್ರೀ ಇದೆಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಶ್ರೀನಿವಾಸ್ ಪೂಜಾರಿ ಮತ್ತು ರವಿಕುಮಾರ್ ಅವರನ್ನು ಪ್ರಶ್ನಿಸಿದರು. ವಿಧಾನಪರಿಷತ್‍ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ , ಸಂವಿಧಾನ ಜಾರಿಯ ಮುನ್ನಾ ದಿನ ಅಂಬೇಡ್ಕರ್‍ರವರು ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ವಿವರವಾಗಿ ಮಾತನಾಡುತ್ತಿದ್ದರು.

ಈ ವೇಳೆ ತಮ್ಮ ಮಾತಿಗೆ ಮಧ್ಯ ಪ್ರವೇಶಿಸಿದ ಪೂಜಾರ್ ಮತ್ತು ರವಿಕುಮಾರ್ ಅವರಿಗೆ ನಾವೂ ಶೂದ್ರರು, ನೀವೂ ಶೂದ್ರರು ಎನ್ನುವುದನ್ನು ನೆನಪಿಸಿದರು. ಪ್ರಬಲ ವಿರೋಧ ಪಕ್ಷ ಪ್ರಜಾಪ್ರಭುತ್ವಕ್ಕೆ ಪೂರಕ. ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮಾತನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಸದಸ್ಯ ಬೋಜೇಗೌಡರು ಕುವೆಂಪು ಅವರ ಮಾತು ಮುಂದುವರೆಸಿದರು.

ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಬ್ರೇಕ್

ಈ ವೇಳೆ ಮುಖ್ಯಮಂತ್ರಿಗಳು, ಕುವೆಂಪು ಆಶಯ ಇಟ್ಟುಕೊಂಡು ಇನ್ನೂ ಬಿಜೆಪಿ-ಜೆಡಿಎಸ್ ಜತೆಗಿದ್ದೀರಿ ಏಕೆ ಎಂದು ಪ್ರಶ್ನಿಸಿದರು. ಜತೆಗೆ ಈಗ ನಿಮ್ಮದು ಜೆಡಿಎಸ್ ಅಲ್ಲ ಈಗ ಜೆಡಿಸಿ ಆಗಿದೆ ಅಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಅ ಫಾರ್ ಕಮ್ಯುನಲ್ ಎಂದು ಟೇಬಲ್ ಬಡಿದರು.

ಈ ಮಧ್ಯೆ ಬಿಜೆಪಿಯ ರವಿಕುಮಾರ್ ಅವರು ಪರಿಷತ್ ವಿರೋಧ ಪಕ್ಷದ ನಾಯಕ ಪೂಜಾರಿ ಅವರಿಗೆ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರವಿಕುಮಾರ್ ಅವರೇ ಆರ್‍ಎಸ್‍ಎಸ್ ಹೇಳಿಕೊಟ್ಟಿದ್ದನ್ನೆಲ್ಲಾ ನೀವು ಆಮೇಲೆ ಹೇಳಿಕೊಡಿ. ನಾನು ಮಾತು ಮುಗಿಸಲು ಬಿಡಿ ಎಂದು ಹೇಳಿದರು.

RELATED ARTICLES

Latest News