Saturday, July 27, 2024
Homeರಾಷ್ಟ್ರೀಯಕಾಂಗ್ರೆಸ್‌‍ 50 ಸ್ಥಾನಗಳನ್ನೂ ಗೆಲ್ಲಲ್ಲ : ಪ್ರಧಾನಿ ಮೋದಿ

ಕಾಂಗ್ರೆಸ್‌‍ 50 ಸ್ಥಾನಗಳನ್ನೂ ಗೆಲ್ಲಲ್ಲ : ಪ್ರಧಾನಿ ಮೋದಿ

ನವದೆಹಲಿ, ಮೇ 11- ಮತ್ತೆ ಕಾಂಗ್ರೆಸ್‌‍ ಪ್ರತಿಪಕ್ಷದ ಸ್ಥಾನದ ಅರ್ಹತೆ ಪಡೆಯುವುದಿಲ್ಲ. 50 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಗುಡುಗಿದ್ದಾರೆ. ಒಡಿಶಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಜನತೆ ಈಗಾಗಲೇ ಬಿಜೆಪಿಯ ಅಭಿವೃದ್ಧಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌‍ನ ಯಾವುದೇ ಪೊಳ್ಳು ಆಶ್ವಾಸನೆಗಳಿಗೆ ಕಿವಿಗೊಡದೆ ದೇಶ ಕಟ್ಟುವ ಕಾಯಕಕ್ಕೆ ಕೈ ಜೋಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ. ತುಷ್ಟೀಕರಣ ರಾಜಕಾರಣದಿಂದ ಮತ್ತು ದೇಶ ಒಡೆಯುವ ಕಾಯಕದಲ್ಲಿ ಈಗ ವಿರೋಧ ಪಕ್ಷಗಳು ಹುನ್ನಾರ ನಡೆಸುತ್ತಿವೆ.ಮೋದಿಯನ್ನು ಹೇಗಾದರೂ ಮಾಡಿ ಮಣಿಸಬೇಕು ಎಂಬ ತವಕದಲ್ಲಿ ಏನೆಲ್ಲಾ ಮಾಡಬೇಕೋ ಅದನ್ನು ನಡೆಸುತ್ತಿದೆ. ಆದರೆ, ದೇಶದ ಜನತೆ ನನ್ನ ಪರವಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಶಕ್ತಿಯನ್ನು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೋಕ್ರಾನ್‌ ಅಣು ಪರೀಕ್ಷೆ ನಡೆಸುವ ಮೂಲಕ ಸಾಬೀತುಪಡಿಸಿದ್ದರು. ಅದಕ್ಕೆ ಈಗ 26 ವರ್ಷ ಘಟಿಸಿದೆ. 500 ವರ್ಷಗಳ ಕಾಲ ಕಾದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಇದು ಬಹಳಷ್ಟು ಭಾರತೀಯರ ಕನಸನ್ನು ನನಸು ಮಾಡಿದೆ ಎಂದು ತಿಳಿಸಿದರು.

ಒಡಿಶಾದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಬಲ್‌ ಇಂಜಿನ್‌ ಸರ್ಕಾರ ಅಸ್ತಿತ್ವದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಹೇಳಿದರು.

RELATED ARTICLES

Latest News