ಬೆಂಗಳೂರು. ಮಾ, 20 : ಸಾಮಾನ್ಯವಾಗಿ ಸಿಲಿಕಾನ್ ಸಿಟಿಯಲ್ಲಿ ನೀರು, ಕಸ, ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕ ಪಕ್ಕದ ಮನೆಯವರ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆಗೆ ದೂರು ಕೊಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದಿಂದ ಭಾರಿ ಕಿರಿ ಕಿರಿ ಯಾಗುತ್ತಿದೆ ಎಂದು ವಿಚಿತ್ರ ದೂರು ನೀಡಿರುವ ಘಟನೆ ವರದಿಯಾಗಿದೆ,
ಆವಲಹಳ್ಳಿಯ ಬಿಡಿಎ ಲೇಔಟ್ನಲ್ಲಿ 44 ವರ್ಷದ ಮಹಿಳೆಯೊಬ್ಬರು ವಾಸವಾಗಿದ್ದು ಇವರ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್ರೂಮ್ ಇದ್ದು ಆಮನೆಯಲ್ಲಿ ವಾಸವಾಗಿರುವ ದಂಪತಿ ಬೆಡ್ ರೂಮ್ನ ಕಿಟಕಿಯನ್ನೂ ಸಹ ಹಾಕದೆ ದಂಪತಿ ಸರಸ ಸಲ್ಲಾಪದಲ್ಲಿ ತೊಡಗಿರುತ್ತಾರೆ ಇದರಿಂದ ನಮಗೆ ಬಹಳ ಮುಜುಗರ ವಾಗುತ್ತಿದೆ ಎಂದು ಗಿರಿನಗರ ಠಾಣೆಗೆ ದೂರು ದಾಖಲಿಸಿದ್ದಾರೆ.
ನಿಮ್ಮ ಬೆಡ್ರೂಂ ಕಿಟಕಿಯನ್ನು ಬಂದ್ ಮಾಡಿಕೊಳ್ಳಿ ನಿಮ್ಮ ಅಸಹ್ಯ ಮನಸ್ಥಿತಿಯಿಂದ ನಮಗೆ ಕಿರಿ ಕಿರಿ ಆಗುತ್ತಿದೆ ಎಂದು ಹಲವಾರು ಭಾರಿ ಮಹಿಳೆ ದಂಪತಿಗೆ ತಿಳಿಸಿದ್ದಾರೆ ಇದಕ್ಕೆ ದಂಪತಿ ಅವಾಚ್ಯ ಶಬ್ಡಗಳಿಂದ ನಿಂದಿಸಿ ಬೆದರಿಕೆ ಕೂಡ ಹಾಕಿದ್ದಾನೆ. ಜೊತೆಗೆ ಮನೆಯ ಮಾಲೀಕ ಹಾಗೂ ಅವರ ಪುತ್ರ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಇದರಿಂದ ನಮಗೆ ಬಹಳ ತೊಂದರೆ ಆಗುತ್ತಿದೆ ಇವರಿಂದ ಸೂಕ್ತ ರಕ್ಷಣೆ ನೀಡಿ ಇವರ ಮೇಲೆ ಸೂಕ್ತ ಕ್ರಮ ಕೈ ಗೊಳ್ಳುವಂತೆ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.ಪಕ್ಕದ ಮನೆಯವರು ಸಹ ಈ ಮಹಿಳೆ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಎರಡು ದೂರುಗಳನ್ನು ದಾಖಲಿಸಿರುವ ಗಿರಿನಗರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.