ಬೆಂಗಳೂರು, ಡಿ.20- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆ ಮುಗಿದಿದ್ದರೂ ಟ್ರೇಡ್ ಮಾಡಿಕೊಳ್ಳಲು ಇನ್ನೂ ಅವಕಾಶಗಳಿದ್ದು, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಅವರು ಟ್ರೇಡ್ ವಿಂಡೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‍ಗೆ ಹೋಗುತ್ತಾರೆ ಎಂಬ ಸುದ್ದಿಗಳು ಹರಡಿದ್ದು ಇದಕ್ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟೀಕರಣ ನೀಡಿದ್ದಾರೆ.
2024ರ ಐಪಿಎಲ್ ಟೂರ್ನಿಯ ಅಂಗವಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್‍ನಿಂದ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ವಿಂಡೋ ಮೂಲಕ ತಂಡಕ್ಕೆ ತೆಗೆದುಕೊಂಡು ನಾಯಕತ್ವದ ಜವಾಬ್ದಾರಿ ನೀಡಿದೆ. ಇದರಿಂದ ಬೇಸತ್ತಿದ್ದ ಮುಂಬೈ ಇಂಡಿಯನ್ಸ್‍ನ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದೇ ಶೈಲಿಯಲ್ಲಿ ಬೇಸರ ವ್ಯಕ್ತಪಡಿಸಿದ್ದರೆ, ರೋಹಿತ್ ಶರ್ಮಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಸತ್‍ನ ಭದ್ರತಾ ಲೋಪದ ವಾಸ್ತವಾಂಶವನ್ನು ಬಹಿರಂಗಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ
ಈ ನಡುವೆ 5 ಬಾರಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ, ಸೂರ್ಯಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರು ಟ್ರೆಂಡ್ ವಿಂಡೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು ತಂಡದ ಸಿಇಒ ಸ್ಪಷ್ಟೀಕರಣ ನೀಡಿದ್ದಾರೆ. `ನಾವು ನಮ್ಮ ತಂಡದ ಸಿದ್ಧಾಂತಗಳನ್ನು ಬದಿಗಿಟ್ಟು ಯಾವುದೇ ತಂಡದಿಂದ ಆಟಗಾರರನ್ನು ಟ್ರೇಡ್ ವಿಂಡೋ ಮೂಲಕ ನಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಹಾಗೂ ನಮ್ಮ ತಂಡದ ಆಟಗಾರರನ್ನು ಯಾವುದೇ ತಂಡಕ್ಕೂ ಬಿಟ್ಟುಕೊಡುವುದಿಲ್ಲ’ ಎಂದು ಕಾಶಿ ವಿಶ್ವನಾಥನ್ ಅವರು ಸ್ಪಷ್ಟಪಡಿಸಿದ್ದಾರೆ.
ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆದ 2024ರ ಮಿನಿ ಹರಾಜಿನಲ್ಲಿ ಸಿಎಸ್‍ಕೆ ಫ್ರಾಂಚೈಸಿ ಶಾರ್ದುಲ್ ಠಾಕೂರ್ (4 ಕೋಟಿ), ಡೇರಿಲ್ ಮಿಚೆಲ್ (14 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ), ರಚಿನ್ ರವೀಂದ್ರ (1.80 ಕೋಟಿ) ಸೇರಿದಂತೆ ಇತರ 6 ಆಟಗಾರರನ್ನು ಖರೀದಿ ಮಾಡಿದೆ.
2023ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿ 5ನೇ ಬಾರಿ ಟ್ರೋಫಿ ಜಯಿಸಿದ್ದು, 2024ರಲ್ಲೂ ಎಂಎಸ್‍ಡಿ ಸಾರಥ್ಯದಲ್ಲೇ ತಂಡ ಅಖಾಡಕ್ಕಿಳಿಯಲಿದೆ.