Saturday, April 27, 2024
Homeಬೆಂಗಳೂರುಚಿಕ್ಕಮ್ಮನನ್ನು ಕೊಲ್ಲಲೆತ್ನಿಸಿದ ಸಾಕು ಮಗಳು, ಅಳಿಯನ ಬಂಧನ

ಚಿಕ್ಕಮ್ಮನನ್ನು ಕೊಲ್ಲಲೆತ್ನಿಸಿದ ಸಾಕು ಮಗಳು, ಅಳಿಯನ ಬಂಧನ

ಬೆಂಗಳೂರು, ಮಾ.29- ಹಣ ಮತ್ತು ಆಸ್ತಿಗೋಸ್ಕರ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಲು ಯತ್ನಿಸಿದ ಸಾಕು ಮಗಳು ಮತ್ತು ಅಳಿಯನನ್ನು ಆರ್ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿ, 8.7 ಲಕ್ಷ ಮೌಲ್ಯದ ಚಿನ್ನಾಭರಣ, 130 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 4.12 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮ್ಮನ ಬಳಿ ಇರುವ ಹಣ, ಆಭರಣಕ್ಕಾಗಿ ಆಸೆ ಪಟ್ಟು ಗಂಡನ ಜೊತೆ ಸೇರಿಕೊಂಡು ಹೇಗಾದರೂ ಮಾಡಿ ಅದನ್ನು ತೆಗೆದುಕೊಳ್ಳಬೇಕೆಂದು ಸಾಕು ಮಗಳು ಸಂಚು ರೂಪಿಸಿದ್ದಾಳೆ.

ಅದರಂತೆ ಮಾ.18 ರಂದು ರಾತ್ರಿ 9.30 ರ ಸುಮಾರಿನಲ್ಲಿ ತನಗೆ ಸಂಬಳ ಕೊಡಿಸುವಂತೆ ಚಿಕ್ಕಮ್ಮ ಅಣ್ಣಯಮ್ಮ (56) ರನ್ನು ಕರೆದುಕೊಂಡು ಸಾಕು ಮಗಳು ತನ್ನ ಗಂಡನೊಂದಿಗೆ ಎಪಿಎಂಸಿ ಯಾರ್ಡ್ ಹತ್ತಿರ ಹೋಗಿ ಅವರನ್ನು ಬಿಟ್ಟು ಒಬ್ಬಳೇ ವಾಪಸ್ ಮನೆಗೆ ಬಂದಿದ್ದಾಳೆ.

ಆ ಸಂದರ್ಭದಲ್ಲಿ ಅಳಿಯ ಏಕಾಏಕಿ ಹಿಂಬದಿಯಿಂದ ಬಂದು ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿ, ಗಾಯಗೊಳಿಸಿದ್ದು ಆ ವೇಳೆ ಅವರು ಸಹಾಯಕ್ಕಾಗಿ ಕಿರುಚಿಕೊಳ್ಳುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.ತಕ್ಷಣ ಅವರು ಮನೆಗೆ ವಾಪಾಸ್ ಆದಾಗ, ಬೀರುವಿನಲ್ಲಿದ್ದ ಹಣ, ಆಭರಣ ಕಳ್ಳತನ ವಾಗಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಅಣ್ಣಯಮ್ಮ ಅವರು ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕೊಲೆ ಯತ್ನ ಮತ್ತು ಮನೆಗಳವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಾಕು ಮಗಳು ಸುಮಿತ್ರಾ ಮತ್ತು ಅಳಿಯ ಮುನಿರಾಜುನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿ 8.7 ಲಕ್ಷ ಮೌಲ್ಯದ ಚಿನ್ನಾಭರಣ, 130 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 4.12 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಒಂದು ಟೈಟಾನ್ ವಾಚ್ ವಶಕ್ಕೆ ಪಡೆದಿದ್ದಾರೆ.

ಆರೋಪಿ ದಂಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ. ಚಿಕ್ಕಮ್ಮನಿಗೆ ಮಕ್ಕಳಿದ್ದಲ ಕಾರಣ ತನ್ನ ಅಕ್ಕನ ಮಗಳನ್ನು ತಮ್ಮ ಮನೆಯಲ್ಲಿಟ್ಟುಕೊಮಡು ಸಾಕಿ ಮದುವೆ ಮಾಡಿಕೊಟ್ಟಿದ್ದರು.ಚಿಕ್ಕಮ್ಮನಿಗೆ ಯಶವಂತಪುರದಲ್ಲಿ ಸ್ವಂತ ಮನೆಯಿದ್ದು, ಬಾಡಿಗೆ ಬರುತ್ತಿದೆ. ಸಾಕು ಮಗಳು ಕೆಲವು ದಿನಗಳ ಹಿಂದೆ ಪತಿಯೊಂದಿಗೆ ಚಿಕ್ಕಮ್ಮನ ಮನೆಗೆ ಬಂದು ಸೇರಿಕೊಂಡಿದ್ದರು.

ಚಿಕ್ಕಮ್ಮನ ಬಳಿ ಹಣ, ಆಭರಣ ಇರುವುದು ಗಮನಿಸಿ ಅವರ ಕೊಲೆಗೆ ಯತ್ನಿಸಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್, ಎಸಿಪಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡ ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News