Friday, April 17, 2026
Homeಜಿಲ್ಲಾ ಸುದ್ದಿಗಳುಒಂಟಿ ಸಲಗ ದಾಳಿಯಿಂದ ಕೂದಲೆಳೆ ಅಂತರದಿಂದ ಪಾರಾದ ತಂದೆ-ಮಗ

ಒಂಟಿ ಸಲಗ ದಾಳಿಯಿಂದ ಕೂದಲೆಳೆ ಅಂತರದಿಂದ ಪಾರಾದ ತಂದೆ-ಮಗ

Father and son narrowly escape attack by Elephant

ಬೇಲೂರು,ಫೆ.3- ತೋಟದ ಕೆಲಸ ಮುಗಿಸಿ ಮನೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತಿದ್ದ ಸಂದರ್ಭದಲ್ಲಿ ಬೈಕ್‌ ಸವಾರನನ್ನು ಒಂಟಿ ಸಲಗವೊಂದು ಅಟ್ಟಾಡಿಸಿದ್ದು, ತಂದೆ-ಮಗ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಬಿಕ್ಕೋಡು ಸಮೀಪದ ಹುಸ್ಕೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಕ್ರವಳ್ಳಿ ಗ್ರಾಮದ ನಿವಾಸಿಗಳಾದ ನಾಗರಾಜು ಹಾಗೂ ಅವರ ಪುತ್ರ ವೇದರಾಜು ಎಂಬುವವರು ಸಮೀಪದ ನೇರಲಮನೆ ಚನ್ನಪ್ಪ ಎಂಬುವವರ ತೋಟದ ಸಮೀಪ ತಮ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಹುಸ್ಕೂರು ಗ್ರಾಮದ ಸಮೀಪ ಬರುತಿದ್ದ ಸಂದರ್ಭದಲ್ಲಿ ಗುಂಪಿನಿಂದ ಬೇರಾದ ಒಂಟಿ ಸಲಗ ತೋಟದ ಬೇಲಿ ಮರೆಯಿಂದ ಕೇವಲ 10 ಅಡಿ ಅಂತರದಲ್ಲಿ ಏಕಾಏಕಿ ಬೈಕ್‌ ಮುಂದೆ ಬಂದು ದಾಳಿಗೆ ಯತ್ನಿಸಿದೆ.

ಆದರೆ ಅಪಾಯ ಅರಿತ ನಾಗರಾಜು ಹಾಗೂ ಪುತ್ರ ವೇದರಾಜು ಧೃತಿಗೆಡದೆ ತಕ್ಷಣವೇ ಬೈಕನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಸ್ಥಳದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಕಾಡಾನೆಯೂ ಸಹ ಅದೇ ವೇಗದಲ್ಲಿ ಬೈಕ್‌ ಸವಾರರನ್ನು ಅಟ್ಟಾಡಿಸಿಕೊಂಡು ಹಿಂಬಾಲಿಸಿ ಸುಮಾರು 100 ಮೀಟರ್‌ದೂರದವರೆಗೆ ಓಡಿ ಬಂದಿದೆ.

ಸಲಗ ಬರುವುದನ್ನು ಗಮನಿಸಿದ ಅವರು ಬೈಕ್‌ ನಿಲ್ಲಸದೆ ಮುಂದೆ ಹೋಗಿದ್ದರಿಂದ ಆನೆ ಹಿಂದಕ್ಕೆ ಹೋಗಿದೆ.ಅದೃಷ್ಠವಶಾತ್‌ತಂದೆ ನಾಗರಾಜು ಮತ್ತು ಮಗ ವೇದರಾಜು ಕಾಡಾನೆ ದಾಳಿಗೆ ಸಿಲುಕದೆ ಯಾವುದೇ ಅಪಾಯವಿಲ್ಲದೆ ದೊಡ್ಡ ಅನಾಹುತದಿಂದ ತಂದೆ ಮಗ ಪಾರಾಗುವ ಮೂಲಕ ಮರು ಜನ ಪಡೆದಂತಾಗಿದೆ.

ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಜನರ ಮೇಲೆ ದಾಳಿಗೆ ಮುಂದಾಗುತ್ತಿರುವ ಕಾಡಾನೆಯಿಂದ ಯಾವುದೇ ಅಪಾಯ ಸಂಭವಿಸುವ ಮುನ್ನವೇ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದರಿಂದ ಈ ಭಾಗದ ಜನರು ನೆಮದಿ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

RELATED ARTICLES

Latest News