Homeಜಿಲ್ಲಾ ಸುದ್ದಿಗಳುಹೊಸಕೋಟೆ : ಶೆಡ್‌ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಅನುಮಾನಾಸ್ಪ ಸಾವು

ಹೊಸಕೋಟೆ : ಶೆಡ್‌ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಅನುಮಾನಾಸ್ಪ ಸಾವು

: Four workers from Assam found dead under suspicious circumstances

ಹೊಸಕೋಟೆ, ಜ.31- ಕೆಲಸ ಮುಗಿಸಿಕೊಂಡು ಲೇಬರ್‌ ಶೆಡ್‌ನಲ್ಲಿ ಮಲಗಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೂಲಿಬೆಲೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಜಯಂತ್‌ ಸಿಂಧೆ (25), ನೀರೇಂದ್ರನಾಥ್‌ (24), ಡಾಕ್ಟರ್‌ ಟೈಡ್‌ (25) ಹಾಗೂ ಧನಂಜಯ್‌ ಟೈಡ್‌ (20) ಎಂದು ಗುರುತಿಸಲಾಗಿದೆ.ಕೋಕಾಕೋಲಾ ವೇರ್‌ಹೌಸ್‌‍ನಲ್ಲಿ ಕೆಲಸ ಮಾಡುತ್ತಿದ್ದ ಈ ನಾಲ್ವರು ಕಾರ್ಮಿಕರು ಲೇಬರ್‌ಶೆಡ್‌ನಲ್ಲಿ ವಾಸವಾಗಿದ್ದರು.

ನಿನ್ನೆ ಕೂಡ ಎಂದಿನಂತೆ ಕೆಲಸ ಮುಗಿಸಿಕೊಂಡು ಶೆಡ್‌ಗೆ ಬಂದು ಶೆಡ್‌ನ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿ ಅಡುಗೆ ಮಾಡಿದ್ದು, ನಂತರ ಊಟ ಮಾಡಿ ಮಲಗಿದ್ದಾರೆ. ಬೆಳಗಾಗುವಷ್ಟರಲ್ಲಿ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸೂಲಿಬೆಲೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ನಾಲ್ವರ ಸಾವಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

RELATED ARTICLES
spot_img

Latest News