Homeಜಿಲ್ಲಾ ಸುದ್ದಿಗಳುಪೆಟ್ರೋಲ್‌ ಬಂಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಜಾಗ್ವಾರ್‌ ಕಾರು

ಪೆಟ್ರೋಲ್‌ ಬಂಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಜಾಗ್ವಾರ್‌ ಕಾರು

ಆನೇಕಲ್‌, ಅ. 8- ಅತ್ತಿಬೆಲೆ ಗಡಿ ಗೋಪುರದ ಸಮೀಪದಲ್ಲಿರುವ ಎಚ್‌ಪಿ ಪೆಟ್ರೋಲ್‌ ಬಂಕ್‌ನ ಪೆಟ್ರೋಲ್‌ ಪಂಪ್‌ಗೆ ಜಾಗ್ವಾರ್‌ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಪೆಟ್ರೋಲ್‌ ಬಂಕ್‌ನ ಮೇಲ್ಛಾವಣಿ ಬೆಂಕಿಗಾಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.

ರಾತ್ರಿ 11.15ರ ಸುಮಾರಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಜಾಗ್ವಾರ್‌ ಕಾರು ಬಂಕ್‌ಗೆ ಬಂದಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಪೆಟ್ರೋಲ್‌ ಹಾಕುವ ಯಂತ್ರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಂಕ್‌ನಲ್ಲಿದ್ದ ಯಂತ್ರದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಆಳೆತ್ತರಕ್ಕೆ ಉರಿದಿದೆ. ಬಂಕ್‌ನ ಸಿಬ್ಬಂದಿ ತಕ್ಷಣವೇ ಪೆಟ್ರೋಲ್‌ ಪೂರೈಕೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಆದರೆ, ಜಾಗ್ವಾರ್‌ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆಯಲ್ಲಿ ಬಂಕ್‌ನ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES
spot_img

Latest News