Monday, February 26, 2024
Homeರಾಜ್ಯಹೊಟ್ಟೆಪಾಡಿನ ವಿಚಾರಗಳನ್ನು ಚರ್ಚೆ ಮಾಡಲಿ : ಡಿಕೆಶಿ ತಿರುಗೇಟು

ಹೊಟ್ಟೆಪಾಡಿನ ವಿಚಾರಗಳನ್ನು ಚರ್ಚೆ ಮಾಡಲಿ : ಡಿಕೆಶಿ ತಿರುಗೇಟು

ಕಲ್ಬುರ್ಗಿ,ಫೆ.3- ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ಕುಂಕುಮ ಇಡಲಿಲ್ಲ, ಮಂಗಳಾರತಿ ತೆಗೆದುಕೊಂಡರು… ಇಂತಹ ವಿಚಾರಗಳನ್ನು ಬಿಟ್ಟು ಹೊಟ್ಟೆಪಾಡಿನ ವಿಚಾರಗಳನ್ನು ಚರ್ಚೆ ಮಾಡಲಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಕಲ್ಬುರ್ಗಿಯಲ್ಲಿಂದು ಜಿಲ್ಲಾ ಪ್ರವಾಸದಲ್ಲಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಕೊಳ್ಳುವುದಿಲ್ಲ ಎಂಬುದು ಅಸತ್ಯವಾದ ಮಾತು. ಹೆಂಗಸರಂತೆ ಹಣೆಗೆ ಅಗಲದ ಬೊಟ್ಟು ಇಟ್ಟುಕೊಳ್ಳುವುದಿಲ್ಲ. ಸರಳವಾಗಿ ಅಗತ್ಯವಾದ ಸಂದರ್ಭದಲ್ಲಿ ಕುಂಕುಮ ಹಚ್ಚಿಕೊಳ್ಳುತ್ತಾರೆ ಎಂದರು.

ಕೆಲವರಿಗೆ ನಾನಾ ರೀತಿಯ ಅಲರ್ಜಿಗಳಿರುತ್ತವೆ. ನನಗೆ ಸುಗಂಧರಾಜ ಹೂವಿನ ಅಲರ್ಜಿಯಿದೆ. ಹೀಗಾಗಿ ಆ ರೀತಿಯ ಹೂವಿನ ಹಾರವನ್ನು ಹಾಕಬೇಡಿ ಎಂದು ಎಲ್ಲರಿಗೂ ಪತ್ರವನ್ನೇ ಬರೆದಿದ್ದೇನೆ. ವೈಯಕ್ತಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಚರ್ಚಿಸುವ ಬದಲಾಗಿ ಜನರ ಹೊಟ್ಟೆಪಾಡಿನ ವಿಚಾರವಾಗಿ ಮಾತನಾಡಬೇಕು ಎಂದು ಹೇಳಿದರು.

ಪಾಕ್ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದ ಹಿಂದೂಗಳು

ಚಿತ್ರದುರ್ಗದ ಮಠಾೀಧಿಶರೊಬ್ಬರು ತಮ್ಮ ವಿರುದ್ಧವಾಗಿ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆಯಾಗಿದೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಆ ರೀತಿಯ ಆಚರಣೆಗಳಿಲ್ಲ. ಎಲ್ಲಾ ಧರ್ಮೀಯರಿಗೂ ದೇವಸ್ಥಾನಗಳಿಗೆ ಪ್ರವೇಶವಿದೆ. ನಾವೆಲ್ಲಾ ಗೌರವ, ಮಾನವೀಯತೆಯಿಂದ ಬದುಕುತ್ತಿದ್ದೇವೆ. ಆದಾಗ್ಯೂ ಶ್ರೀಗಳ ಹೇಳಿಕೆಯ ಬಗ್ಗೆ ಮುಜರಾಯಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಬಜೆಟ್ ಹಾಗೂ ಇತರ ಆರ್ಥಿಕ ತಾರತಮ್ಯಗಳ ಕುರಿತಂತೆ ಇದೇ ಫೆ.7 ರಂದು ದೆಹಲಿಯಲ್ಲಿ ರಾಜ್ಯದ ಶಾಸಕರು, ಸಚಿವರು, ವಿಧಾನಪರಿಷತ್ ಹಾಗೂ ರಾಜ್ಯಸಭಾ ಸದಸ್ಯರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಜೆಪಿಯವರು ರಾಜ್ಯದಲ್ಲಿ ಪ್ರತಿಭಟನೆ ಮಾಡುವ ಬದಲಾಗಿ ಕೇಂದ್ರದಿಂದ ಅನುದಾನ ತರುವ ವಿಚಾರದಲ್ಲಿ ಎಲ್ಲಿ ವಿಫಲವಾಗಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾನ, ಮರ್ಯಾದೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.

RELATED ARTICLES

Latest News