ಬೆಂಗಳೂರು,ಜೂ.8- ಕಳೆದ ಹತ್ತು ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿ ದರಗಳು ಸತತ ಇಳಿಮುಖವಾಗಿವೆ. ಮೇ ತಿಂಗಳಿನಲ್ಲಿ ಪದೇ ಪದೇ ಏರಳಿತವಾಗುತ್ತಿದ್ದ ಚಿನ್ನ-ಬೆಳ್ಳಿ ದರಗಳು ಜೂನ್ ತಿಂಗಳಿನಲ್ಲಿ ನಿರಂತರ ಇಳಿಕೆಯಾಗಿವೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು ಕೂಡ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತವಾಗಿದೆ. 24 ಕ್ಯಾರೆಟ್ನ ಚಿನ್ನವು 1 ಗ್ರಾಂಗೆ 104 ರೂ.ನಷ್ಟು ಕಡಿಮೆಯಾಗಿದ್ದು 15,169 ರೂ.ನಷ್ಟಿದೆ. 22 ಕ್ಯಾರೆಟ್ನ 1 ಗ್ರಾಂ ಚಿನ್ನವು 95 ರೂ.ನಷ್ಟು ಇಳಿಕೆಯಾಗಿದ್ದು, 13,905 ರೂ.ಗೆ ತಲುಪಿದೆ. 18 ಕ್ಯಾರೆಟ್ನ ಚಿನ್ನವು 78 ರೂ. ಇಳಿಕೆಯಾಗಿದ್ದು, 11,377 ರೂ.ನಷ್ಟಿದೆ.
ಪ್ಲಾಟಿನಮ್ನಲ್ಲಿ 10 ಗ್ರಾಂ.ಗೆ 300 ರೂ. ಕಡಿಮೆಯಾಗಿದ್ದು, 54,100 ರೂ.ನಷ್ಟಿದೆ. ಇಂದು 1 ಕೆಜಿ ಬೆಳ್ಳಿಗೆ 5 ಸಾವಿರ ರೂ.ನಷ್ಟು ಕಡಿಮೆಯಾಗಿದ್ದು, 2,60,000 ರೂ.ನಷ್ಟಿದೆ.
ಮೇ 29ರಿಂದಲೂ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆಯಾಗುತ್ತಿದ್ದು, ಗ್ರಾಹಕರಿಗೆ ಸಮಾಧಾನವಾಗಿದ್ದರೆ ವರ್ತಕರಿಗೆ ಆತಂಕ ಎದುರಾಗಿದೆ.
