Homeಬೆಂಗಳೂರುಪಿಜಿಯಲ್ಲಿ ಸಿಲೆಂಡರ್‌ ಸ್ಫೋಟ : ಹಲವರಿಗೆ ಹೆಚ್ಚು ಮಂದಿಗೆ ಗಾಯ

ಪಿಜಿಯಲ್ಲಿ ಸಿಲೆಂಡರ್‌ ಸ್ಫೋಟ : ಹಲವರಿಗೆ ಹೆಚ್ಚು ಮಂದಿಗೆ ಗಾಯ

Cylinder explosion in PG: More than 9 injured

ಆನೇಕಲ್‌,ಜು.23- ಪಿಜಿಯೊಂದರಲ್ಲಿ ಸಿಲಿಂಡರ್‌ ಅನಿಲ ಸೋರಿಕೆಯಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸುಮಾರು 9 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಬೊಮಸಂದ್ರ ಗ್ರಾಮದ ಪಿಜಿಯೊಂದರಲ್ಲಿ ವಾಸವಾಗಿದ್ದರು.ರಾತ್ರಿ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಾಗಿದ್ದು ಗಮನಕ್ಕೆ ಬಾರದೇ ಇಂದು ಬೆಳಿಗ್ಗೆ ಕೊಠಡಿಯ ಲೈಟ್‌ ಆನ್‌ ಮಾಡುತ್ತಿದ್ದಂತೆ ಅನಿಲ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಮಲಗಿದ್ದ 9 ಕಾರ್ಮಿಕರು ಗಂಭೀರವಾಗಿ ಗಾಯೊಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸ್ಫೋಟದಿಂದ ಪಿಜಿಯ ಬಾಗಿಲು, ಕಿಟಕಿ ಪುಡಿಪುಡಿಯಾಗಿದ್ದು, ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News