ಬೆಂಗಳೂರು, ಆ. 23- ನಟ ಭಯಂಕರ, ಡಾಲಿ ಧನಂಜಯ್ ಅವರು ಇಂದು ತಮ 40ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಲವು ವರ್ಷಗಳಿಂದ ಧನಂಜಯ್ ಅವರು ತಮ ಜನದಿನವನ್ನು ಅಭಿಮಾನಿ ಗಳೊಂದಿಗೆ ಆಚರಿಸಿಕೊಂಡಿರಲಿಲ್ಲ, ಆದರೆ ತಮ 40ನೇ ಹುಟ್ಟುಹಬ್ಬದ ಅಂಗವಾಗಿ ಧನಂಜಯ್ ವಿಶೇಷವಾಗಿ ಫ್ಯಾನ್ಸ್ ಮೀಟ್ ಹಮಿಕೊಂಡು ಗಮನ ಸೆಳೆದರು.
ಡಾಲಿ ಧನಂಜಯ್ ಅವರು ತಮ ಅಧಿಕೃತ ಸಾಮಾಜಿಕ ಜಾಲ ತಾಣದೊಂದಿಗೆ ಅಭಿಮಾನಿಗಳಿಗೆ ವಿಶೇಷ ಆಹ್ವಾನ ನೀಡಿದ್ದು, ಅದರಂತೆ ಜಯನಗರ 5ನೇ ಬ್ಲಾಕ್ನಲ್ಲಿರುವ ಎಂಇಎಸ್ ಗ್ರೌಂಡ್ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.
ಧನಂಜಯ್ ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಎಂಇಎಸ್ ಗ್ರೌಂಡ್ನಲ್ಲಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಹಮಿಕೊಳ್ಳುವ ಮೂಲಕ ತಮ ನೆಚ್ಚಿನ ನಟನ ಜನದಿನವನ್ನು ಸರಣೀಯವಾಗಿಸಿದ್ದಾರೆ.
2023ರಲ್ಲಿ ಧನಂಜಯ್ ಅವರು ತಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿ ಕೊಂಡಿದ್ದರು, ನಂತರದ ಹುಟ್ಟುಹಬ್ಬಗಳಲ್ಲಿ ನಟ ಭಯಂಕರನನ್ನು ಭೇಟಿ ಆಗುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಆದರೆ ಧನಂಜಯ್ ಈ ಬಾರಿ ತಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿ ಕೊಂಡಿದ್ದಾರೆ.
ಟಗರು ಸಿನಿಮಾ ನಂತರ ಅಭಿಮಾನಿಗಳ ನೆಚ್ಚಿನ ಡಾಲಿ ಆಗಿರುವ ಧನಂಜಯ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಜಿಂಗೋ ಹಾಗೂ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡದಿಂದ ಯಾವುದಾದರೂ ವಿಶೇಷ ಟೀಸರ್, ಪೋಸ್ಟರ್ ಬಿಡುಗಡೆ ಆಗುವುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
