ನವದೆಹಲಿ, ಮಾ.24- ಧುರಂಧರ್ 3 ಚಿತ್ರ ನಿರ್ಮಿಸುವ ಬಗ್ಗೆ ಚಿಂತಿಸಿಲ್ಲ ಎಂದು ಧುರಂಧರ್ 2 ಚಿತ್ರದ ಕ್ಯಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಸ್ಪಷ್ಟಪಡಿಸಿದ್ದಾರೆ .ಮಾ.19 ರಂದು ಬಿಡುಗಡೆಯಾಗಿರುವ ಧುರಂಧರ್ 2 ದೇಶದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಈಗಾಗಲೇ 500 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ. ಈ ಸಂದರ್ಭದಲ್ಲೇ ಧುರಂಧರ್ 3 ಚಿತ್ರ ಬರಲಿದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಊಹಾಪೋಹಗಳ ಬಗ್ಗೆ ಮಾತನಾಡಿರುವ ಛಾಬ್ರಾ ಅವರು ನಾವು ಧುರಂಧರ್ 3 ನಿರ್ಮಿಸುವ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಐಸಾ ಕುಚ್ ನಹಿ ಹೋನೆ ವಾಲಾ. ಬೋಹೋತ್ ಸಾರೆ ವದಂತಿಗಳು ಹೈ. (ಅಂತಹದ್ದೇನೂ ಆಗುವುದಿಲ್ಲ. ಬಹಳಷ್ಟು ವದಂತಿಗಳಿವೆ.) ಒಂದು ವೇಳೆ ಧುರಂಧರ್ 3 ನಿರ್ಮಿಸುವುದಾದರೆ ಅದನ್ನು ನೇರವಾಗಿ ಎಕ್‌್ಸನಲ್ಲಿ ತಿಳಿಸುವುದಾಗಿ ಛಾಬ್ರಾ ಹೇಳಿದರು.
ಧುರಂಧರ್ 2 ಬಾಕ್‌್ಸ ಆಫೀಸ್ ನ್ನ ಮೊದಲ ಸೋಮವಾರದಂದು 20,382 ಪ್ರದರ್ಶನಗಳಿಂದ 65 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಭಾರತದಲ್ಲಿ 500 ಕೋಟಿ ರೂ.ಗಳನ್ನು ಆರಾಮವಾಗಿ ದಾಟಿತು. ಐದು ದಿನಗಳ ನಂತರ, ದೇಶೀಯ ಕಲೆಕ್ಷನ್ ರೂ. 519.12 ಕೋಟಿ (ನಿವ್ವಳ) ಆಗಿದ್ದು, ವಿಶ್ವಾದ್ಯಂತ ಗಳಿಕೆ ರೂ. 829.76 ಕೋಟಿಗೆ ಏರಿದೆ ಎಂದು ಸ್ಯಾಕ್ನಿಲ್‌್ಕ ತಿಳಿಸಿದೆ.
ಧುರಂಧರ್; ದಿ ರಿವೆಂಜ್ ತನ್ನ ಮೊದಲ ಸೋಮವಾರ ಹಿಂದಿಯಲ್ಲಿ ರೂ. 60 ಕೋಟಿ ಗಳಿಸಿತು.ತೆಲುಗು ಆವೃತ್ತಿ ರೂ. 3.50 ಕೋಟಿ ಕೊಡುಗೆ ನೀಡಿದರೆ, ಕನ್ನಡ, ಮಲಯಾಳಂ ಮತ್ತು ತಮಿಳು ಆವೃತ್ತಿಗಳು ಕ್ರಮವಾಗಿ ರೂ. 0.15 ಕೋಟಿ, ರೂ. 0.15 ಕೋಟಿ ಮತ್ತು ರೂ. 1.20 ಕೋಟಿ ಗಳಿಸಿವೆ.
ವಿಸ್ತೃತ ವಾರಾಂತ್ಯದ ಸಂಪೂರ್ಣ ಲಾಭವನ್ನು ಪಡೆದುಕೊಂಡು, ಚಿತ್ರವು ಮಾರ್ಚ್ 19 ರಂದು 102.55 ಕೋಟಿ ರೂ.ಗಳೊಂದಿಗೆ ತನ್ನ ಬಾಕ್ಸ್ ಆಫೀಸ್ ಓಟವನ್ನು ಪ್ರಾರಂಭಿಸಿತು. ಇದರ ನಂತರ ಮಾರ್ಚ್ 20 ರಂದು 80.72 ಕೋಟಿ ರೂ. ಮತ್ತು ಮಾರ್ಚ್ 21 ರಂದು 113 ಕೋಟಿ ರೂ.ಗಳ ಸಂಗ್ರಹವಾಯಿತು.ಮಾರ್ಚ್ 19 ರಂದು, ಧುರಂಧರ್; ದಿ ರಿವೆಂಜ್ ಭಾರತದಾದ್ಯಂತ 21,633 ಪ್ರದರ್ಶನಗಳನ್ನು ನೀಡಿತು ಮತ್ತು ದೇಶೀಯವಾಗಿ 114.85 ಕೋಟಿ ರೂ.ಗಳನ್ನು ಗಳಿಸಿದೆ.
