Saturday, April 18, 2026
Homeಮನರಂಜನೆಪ್ರೇಕ್ಷಕರನ್ನು 'ಸೀಟ್ ಎಡ್ಜ್'ನಲ್ಲಿ ಕೂರಿಸುವ ದೆವ್ವದ ಚಿತ್ರ

ಪ್ರೇಕ್ಷಕರನ್ನು ‘ಸೀಟ್ ಎಡ್ಜ್’ನಲ್ಲಿ ಕೂರಿಸುವ ದೆವ್ವದ ಚಿತ್ರ

Seat Edge Kannada Movie Review

ದೆವ್ವದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ಮಾಡ್ತಾರೆ. ಒಬ್ರು ಇದೆ ಅಂದ್ರೆ ಇನ್ನೊಂದಷ್ಟು ಜನ ದೆವ್ವ ಎಲ್ಲಾ ಸುಳ್ಳು ಅಂತಾರೆ. ಈಗ ಸಿದ್ದು ಮೂಲಿಮನಿ ದೆವ್ವದ ಹಿಂದೆ ಬಿದ್ದಿದ್ದಾರೆ. ಸೀಟ್ ಎಡ್ಜ್ ಸಿನಿಮಾ ರಿಲೀಸ್ ಆಗಿ ಒಳ್ಳೆ ಟಾಕ್ ಕ್ರಿಯೇಟ್ ಮಾಡಿದೆ. ಚೇತನ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಐಟಿ ಕೆಲಸ ಮಾಡುತ್ತಿದ್ದ ನಾಯಕ ಕೆಲಸ ಬಿಟ್ಟು ವ್ಲಾಗರ್ ಆಗುತ್ತಾನೆ.

ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಹೊಂದಿರುತ್ತಾನೆ. ನನ್ನೋಡಿ ಎನ್ನುವ ಯೂಟ್ಯೂಬ್ ಚಾನಲ್ ಮಾಡಿ ತರಹೇವಾರಿ ವೀಡಿಯೋಗಳನ್ನು ಮಾಡಿ ಸಿದ್ದು ಜನಪ್ರಿಯತೆ ಗಳಿಸುತ್ತಾನೆ. ಮುಂದೆ ಘೋಸ್ಟ್ ಹಂಟಿಂಗ್ ಕುರಿತು ವಿಡಿಯೋ ಮಾಡಿ ‘ಸೀಟ್ ಎಡ್ಜ್’ ಎಂಬ ಹೊಸ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡುತ್ತಾನೆ.

ಮುಂದೆ ಘೋಸ್ಟ್ ಟೌನ್ ಎಂಬ ಜಾಗಕ್ಕೆ ಹೋಗಿ ಒಂದು ರಾತ್ರಿ ಆ ಭೂತ ಬಂಗಲೆಯಲ್ಲಿ ಕಳೆದು, ಅಲ್ಲಿನ ವಿಚಿತ್ರ ಸಂಗತಿಗಳನ್ನು ವಿಡಿಯೋ ಮಾಡುವ ಸಾಹಸಕ್ಕೆ ಮುಂದಾಗುತ್ತಾನೆ. ಮುಂದೇನಾಗುತ್ತೆ ಅಂತ ಸಿನಿಮಾ ನೋಡಿದ್ರೆ ಕ್ಲಾರಿಟಿ ಸಿಗುತ್ತೆ.

ಫಸ್ಟ್ ಹಾಫ್ ಗಿಂತ ಸೆಕೆಂಡ್ ಹಾಫ್ ಸಿನಿಮಾ ತುಂಬಾ ಚೆನ್ನಾಗಿದೆ. ತಮಾಷೆಯಾಗಿ ಶುರುವಾಗುವ ಸಿನಿಮಾ ಹೋಗ್ತಾ ಹೋಗ್ತಾ ಗಂಭೀರತೆಯನ್ನು ಪಡೆದುಕೊಳ್ಳುತ್ತದೆ. ದೀಪಕ್ ಕುಮಾರ್ ಜೆ.ಕೆ. ಅವರ ಛಾಯಾಗ್ರಹಣಕ್ಕೂ ಮೆಚ್ಚುಗೆ ಸಲ್ಲುತ್ತದೆ. ನಾಯಕಿ ರವೀಕ್ಷಾ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಯಾವುದೇ ವಿಚಾರದಲ್ಲಿ ರಾಜಿಯಾಗದೇ ನಿರ್ಮಾಪಕ ಗಿರಿಧರ್ ಟಿ ವಸಂತಪುರ ‘ಸೀಟ್ ಎಡ್ಜ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚೇತನ್ ಶೆಟ್ಟಿ ಒಂದೊಳ್ಳೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು ಛಾಯಾಗ್ರಹಣ, ಸಂಗೀತ ಎಲ್ಲದರ ಸಾಥ್ ಸಿಕ್ಕಿದೆ.

RELATED ARTICLES

Latest News