ತುರುವೇಕೆರೆ, ಡಿ.3– ಜೀಮೊಫಾಯ್ ಎಲೆಕ್ಟಿಕ್ ದ್ವಿಚಕ್ರ ವಾಹನದ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ವಾಹನಗಳು ಸುಟ್ಟು ಕರಕಲಾದ ಘಟನೆ ಪಟ್ಟಣದಲ್ಲಿ ರಾತ್ರಿ ನಡೆದಿದೆ.
ಪಟ್ಟಣದ ವೈಟಿ ರಸ್ತೆಯಲ್ಲಿರುವ ಅರಳೀಕೆರೆ ಗ್ರಾಮದ ಮೋಹನ್ ಎಂಬುವರಿಗೆ ಸೇರಿದ ಜೀಮೊಫಾಯ್ ಎಲೆಕ್ಟಿಕ್ ದ್ವಿಚಕ್ರ ವಾಹನದ ಶೋರೂಮ್‌ನಲ್ಲಿ ನಿನ್ನೆ ರಾತ್ರಿ ಚಾರ್ಜಿಗೆ ಹಾಕಿದ್ದ ಬ್ಯಾಟರಿ ಸಿಡಿದ ಕಾರಣ ಆಕಸಿಕ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ದ್ವಿಚಕ್ರ ವಾಹನಗಳು ಹೊತ್ತಿ ಉರಿದಿದೆ.
ಹೊಗೆಯಿಂದ ಗಾಬರಿಗೊಂಡ ಅಕ್ಕಪಕ್ಕದ ಅಂಗಡಿಯವರು ಅಗ್ನಿಶಾಮಕ ಠಾಣೆಗೆ ಕರೆಮಾಡಿ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಠಾಣಾ ಸಿಬ್ಬಂದಿಗಳು ಶೋರೂಮ್ ನ ಶೆಟರ್ ತೆರೆದು ಬೆಂಕಿ ನಂದಿಸಿದ್ದಾರೆ.
ಅಷ್ಟರೊಳಗೆ ಅಂಗಡಿಯಲ್ಲಿದ್ದ ಸುಮಾರು ದ್ವಿಚಕ್ರ ವಾಹನಗಳ ಪೈಕಿ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಂಗಡಿ ಶೆಟರ್ ಗ್ಲಾಸ್ ಒಡೆದು ಹೋಗಿವೆ. ಕಂಪ್ಯೂಟರ್ ಹಾನಿಗೊಳಗಾಗಿದೆ. ಬೆಂಕಿಯ ರಭಸಕ್ಕೆ ಎಲ್ಲ ದ್ವಿಚಕ್ರ ವಾಹನಗಳಿಗೂ ಬೆಂಕಿತಾಗಿದ್ದು, ಭಾರೀ ನಷ್ಟ ಉಂಟಾಗಿದೆ.
ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಾದ ನವೀನ್ ಕುಮಾರ್, ಸುನಿಲ್ ಹಿರೇಮಠ್, ಶಿವಕುಮಾರ್, ರಾಹುಲ್, ತೌಸಿಫ್ ಭಾಗವಾನ್ ಅವರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.