Tuesday, July 23, 2024
Homeರಾಜ್ಯಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

ಬೆಳಗಾವಿ,ಅ.27- ಹುಲಿ ಉಗುರಿನ ಪ್ರಕರಣಗಳು ದಿನಕ್ಕೊಂದರಂತೆ ಹೊರ ಬರುತ್ತಿದ್ದು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮನೆಯ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಸಚಿವೆಯ ಪುತ್ರ ಮೃಣಾಲ್ ಪುತ್ರ ಹುಲಿಉಗುರಿನ ಮಾದರಿಯ ಪೆಂಟೆಂಡ್ ಸರವನ್ನು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಕುರಿತು ಇಂದು ಬೆಳಗ್ಗೆ ಅರಣ್ಯ ಇಲಾಖೆಯ ಡಿಎಫ್‍ಓ ಶಂಕರ್ ಕಲ್ಲೋಳಿಕರ್, ಎಸಿಎಫ್ ಸುರೇಶ್ ತೇಲಿ ಸೇರಿ, 15 ರಿಂದ 20 ಅಧಿಕಾರಿಗಳು ಬೆಳಗಾವಿಯ ಕುವೆಂಪು ನಗರದಲ್ಲಿರುವ ಮೃಣಾಲ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೂರವಾಣಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಶೀಲನೆ ನಡೆಸಿ ನ್ಯಾಯ ರೀತಿ ಕ್ರಮಗಳನ್ನು ಮುಂದುವರೆಸುವಂತೆ ಸಲಹೆ ನೀಡಿದರು ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ಹುಲಿ ಪೆಂಡೆಂಟ್ ಎಲ್ಲಿಂದ ಬಂತು, ಯಾರು ನೀಡಿದ್ದಾರೆಂದು ಅರಣ್ಯ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಎಷ್ಟು ವರ್ಷದಿಂದ ಪೆಂಡೆಂಟ್ ಧರಿಸಿದ್ದೀರಿ ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿರುವ ಮೃಣಾಲ್ ನನ್ನ ಮದುವೆಯಲ್ಲಿ ಸಂಬಂಧಿಕರು ಉಡುಗೊರೆ ನೀಡಿದ್ದು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಪ್ಲಾಸ್ಟಿಕ್‍ದು ಎಂಬ ಕಾರಣಕ್ಕೆ ಹಾಕಿಕೊಳ್ತಿದ್ದೆ ಎಂದಿದ್ದಾರೆ ಎಂದು ತಿಳಿಸಲಾಗಿದೆ.

ಟಿಎಂಸಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಬಂಧನ

ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಅಧಿಕಾರಿ, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮೃಣಾಲ್ ಧರಿಸಿರುವ ಪೆಟೆಂಟ್ ಅನ್ನು ಪರಿಶೀಲಿಸಿದ್ದೇವೆ. ಅದರ ಉದ್ದ, ಅಗಲ, ತೂಕ ಲೆಕ್ಕ ಹಾಕಲಾಗಿದೆ. ಅದರೊಂದಿಗಿನ ಬಂಗಾರದ ಸರವನ್ನು ಬೇರ್ಪಡಿಸಿದ ಬಳಿಕ ಎಫ್‍ಎಸ್‍ಎಲ್ ಗೆ ಕಳುಹಿಸುತ್ತೇವೆ. ಅಲ್ಲಿಂದ ವರದಿ ನಂತ ಅಧಿಕೃತ ಪ್ರತಿಕ್ರಿಯೆ ನೀಡಲಾಗುವುದು ಎಂದಿದ್ದಾರೆ.

ನಿನ್ನೆ ಮಾಧ್ಯಮದಲ್ಲಿ ತೋರಿಸಿರುವ ಪೆಟೆಂಟ್ ಮೃಣಾಳ್ ಅವರ ತೋಳಿನಲ್ಲಿರುವುದು ಗಮನಕ್ಕೆ ಬಂದಿದೆ. ಅದರ ಬಗ್ಗೆ ಹೇಳಿಕೆ ಪಡೆದಿದ್ದೇವೆ. ಸಚಿವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ. ಯಾವ ರೀತಿಯ ತನಿಖೆ ಅಗತ್ಯವೂ ಅದನ್ನು ಮುಂದುವರೆಸುವಂತೆ ಸಲಹೆ ನೀಡಿದ್ದಾರೆ. ಇಂದು ಸಚಿವರು ಮನೆಯಲ್ಲಿ ಇಲ್ಲ. ವಿಚಾರಣೆಗೆ ಪುತ್ರನೊಂದಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.

ಈ ನಡುವೆ ಬೇರೆ ಕಡೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ್ ಬಳಿ ಇರುವುದು ನಿಜವಾದ ಹುಲಿ ಉಗುರಲ್ಲ. ಮದುವೆ ಸಂದರ್ಭದಲ್ಲಿ ಸಂದರ್ಭದಲ್ಲಿ ಸಂಬಂಧಿಕರು ಆ ಡಾಲರ್ ಅನ್ನು ಉಡುಗೊರೆ ನೀಡಿದ್ದರು. ಅದು ಪ್ಲಾಸ್ಟಿಕ್‍ನದು ಎಂದರು.

ನಾನು ಶುದ್ಧ ಸಸ್ಯಹಾರಿ, ಪ್ರಾಣಿ ಹತ್ಯೆಯನ್ನು ವಿರೋಧಿಸುತ್ತೇನೆ. ಇನ್ನೂ ಹುಲಿ ಉಗುರು ಧರಿಸುವುದನ್ನು ಹೇಗೆ ಸಹಿಸಲಿ. ಇಷ್ಟಕ್ಕೂ ಈಗಿನ ಕಾಲದಲ್ಲಿ ನಿಜವಾದ ಹುಲಿ ಉಗುರು ಎಲ್ಲಿ ದೊರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಈ ಮಧ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯನೂ ಆಗಿರುವ ಹುಬ್ಬಳ್ಳಿಯ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೂಡ ಮೃಣಾಲ್ ಮಾದರಿಯ ಪೆಟೆಂಟ್ ಧರಿಸಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ರಜತ್, ಮದುವೆ ಸಂದರ್ಭದಲ್ಲಿ ಫೋಟೋ ಶೂಟ್‍ಗಾಗಿ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲಾಗಿತ್ತು. ಅವರು ಕಾಸ್ಟೊಮ್ ವಿನ್ಯಾಸಗೊಳಿಸುವಾಗ ಸಿಂಥೆಟಿಕ್‍ನ ಹುಲಿ ಉಗುರಿನ ಮಾದರಿಯನ್ನು ನೀಡಿದ್ದರು. ಅದು ಈಗಲೂ ನನ್ನ ಬಳಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಳಿದರೆ ಹಾಜರು ಪಡಿಸುತ್ತೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಗುಣಗಾನ ಮಾಡಿದ ಕಾಂಗ್ರೆಸ್

ನನ್ನ ಮತ್ತು ಮೃಣಾಲ್ ಅವರ ಮದುವೆ 10 ರಿಂದ 12 ದಿನಗಳ ಅಂತರದಲ್ಲಿ ನಡೆದಿತ್ತು. ಇಬ್ಬರಿಗೂ ಒಂದೇ ಸಂಸ್ಥೆಯವರು ಆ ಸರ ನೀಡಿದ್ದರು. ಬಹುಶಃ ಮೃಣಾಲ್ ಬಳಿ ಇರುವುದು ಸಿಂಥೆಟಿಕ್ ಸ್ವರೂಪದ್ದಾಗಿರಬಹುದು. ವನ್ಯ ಜೀವಿ ಕಾಯ್ದೆ 1972ರಲ್ಲಿ ಬಂದಿದೆ. ಆಗಿನನ್ನೂ ನಾವು ಹುಟ್ಟೆ ಇರಲಿಲ್ಲ. ನಮಗೆ ಪ್ರಾಣಿಗಳ ಮೇಲೆ ಪ್ರೀತಿ ಇದೆ. ಗೋತ್ತಿದ್ದೋ ಗೋತ್ತಿಲ್ಲದೆಯೋ ಹುಲಿ ಉಗುರಿನ ಮಾದರಿಯನ್ನು ಧರಿಸಿ ತಪ್ಪು ಮಾಡಿದ್ದೇವೆ. ಅರಣ್ಯ ಇಲಾಖೆ ಅಕಾರಿಗಳು ಸೂಚನೆ ನೀಡಿದರೆ ಅದನ್ನು ಹಾಜರು ಪಡಿಸುತ್ತೇವೆ. ರಾಜಕೀಯ ಕಾರಣಕ್ಕೆ ಇತ್ತೀಚೆಗೆ ಇದು ವ್ಯಾಪಕ ಚರ್ಚೆಯಾಗುತ್ತಿದೆ ಎಂದರು.

RELATED ARTICLES

Latest News