Friday, October 11, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಬಂಗಾರದ ಆಸೆ ತೋರಿಸಿ 5 ಲಕ್ಷ ಹಣದೊಂದಿಗೆ ವಂಚಕರು ಪರಾರಿ

ಬಂಗಾರದ ಆಸೆ ತೋರಿಸಿ 5 ಲಕ್ಷ ಹಣದೊಂದಿಗೆ ವಂಚಕರು ಪರಾರಿ

Fraudsters escaped with 5 lakhs Money

ಕೊರಟಗೆರೆ, ಸೆ.1- ಮನೆ ಪಾಯ ಅಗಿಯುವಾಗ ಬಂಗಾರ ಸಿಕ್ಕಿದ್ದು, ಕಡಿಮೆ ದರಕ್ಕೆ ಕೆಜಿಗಟ್ಟಲೆ ಬಂಗಾರ ನೀಡುತ್ತೇವೆ ಎಂದು ನಂಬಿಸಿ 5 ಲಕ್ಷ ಹಣ ಪಡೆದು ಕ್ಷಣಾರ್ಧದಲ್ಲಿ ಸಿನಿಮೀಯ ರೀತಿಯಲ್ಲಿ ವಂಚಕರು ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಹೂಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಟಗೆರೆ ಗಡಿ ಭಾಗದ ಅಕ್ಕಿ ಪಿಕ್ಕಿ ಕಾಲೋನಿಯ ನಾಲ್ಕು ಜನ ಖತರ್ನಾಕ್‌ ಆರೋಪಿಗಳು ಆಂಧ್ರ ಮೂಲದ ಗುತ್ತಿ ಗ್ರಾಮದ ಶಾಶಾವಲಿ ಎಂಬುವನಿನಿಂದ 5 ಲಕ್ಷ ಪಡೆದು ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಅಕ್ಕಿ ಪಿಕ್ಕಿ ಕಾಲೋನಿಯ ಆರೋಪಿಗಳಾದ ಯುವರಾಜ್‌ ನಾಯಕ್‌, ಕನ್ನೇಶ್‌, ರಾಜು ಮತ್ತು ಸಂದಿಲ್‌ ಸೇರಿಕೊಂಡು ಆಂಧ್ರ ಮೂಲದ ಗುತ್ತಿಯ ವಾಸಿ ಶಾಶಾವಲಿ ಎಂಬುವನನ್ನು ಬಂಗಾರ ನೀಡುವುದಾಗಿ ನಂಬಿಸಿ 8 ಲಕ್ಷ ಹಣ ತಂದರೆ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಂಗಾರ ನೀಡುವುದಾಗಿ ಆಮಿಷವೊಡ್ಡಿದ್ದಾರೆ.

ಇವರ ಮಾತನ್ನು ನಂಬಿದ ಶಾಶಾವಲಿ ಅವರು ತಾಲೂಕಿನ ಜಿ ನಾಗೇನಹಳ್ಳಿ ಬಳಿ ಬಂದು ತನ್ನ ಬಳಿ 5 ಲಕ್ಷ ಮಾತ್ರ ಇದೆ ಎಂದಾಗ ಅಷ್ಟನ್ನೇ ಕೊಡಿ ಎಂದು ಹಣ ಪಡೆದು ಯಾವುದೇ ಒಡವೆ ನೀಡದೆ ದ್ವಿಚಕ್ರ ವಾಹನದಲ್ಲಿ ಸಿನಿಮಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕೊರಟಗೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್‌‍ ವರಿಷ್ಠಾಧಿಕಾರಿ ಅಶೋಕ್‌ ಕೆ ವೆಂಕಟ್‌ ಮತ್ತು ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ಮರಿಯಪ್ಪ, ಅಬ್ದುಲ್‌ ಖಾದರ್‌, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರ ಮಾರ್ಗದರ್ಶನದಂತೆ ಕೊರಟಗೆರೆ ಸಿಪಿಐ ಅನಿಲ್‌ ಹಾಗೂ ಪಿ ಎಸ್‌‍ ಐ ಚೇತನ್‌ ಗೌಡ ತಂಡ ಕಾರ್ಯಾಚರಣೆ ಕೈಗೊಂಡು ಮಿಂಚಿನ ಕಾರ್ಯಚರಣೆ ನಡೆಸಿ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ 5.50 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಹೋಂಡಾ ಶೈನ್‌ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಗ್ಗಿಲ್ಲದೆ ನಡೆಯುತ್ತಿದೆ ದಂಧೆ
ಅಕ್ಕಿ ಪಿಕ್ಕಿ ಕಾಲೋನಿ ಕೊರಟಗೆರೆ ಗಡಿಭಾಗವಾದರೂ ರಾಜ್ಯ-ಹೊರರಾಜ್ಯದಲ್ಲೂ ಕುಖ್ಯಾತಿಯಾಗಿದೆ, ಇಲ್ಲಿ ನಡೆಯದ ದಂದೆಗಳಿಲ್ಲ, ಹತ್ತಾರು ವರ್ಷಗಳಿಂದ ರಾಜ್ಯದ ವಿವಿಧ ಮೂಲೆಗಳ ಜನರಿಗೆ ಯಾಮಾರಿಸಿದ್ದು, ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಲಾಗಿದೆ. ಇವರ ಕಳ್ಳಾಟಗಳಿಗೆ ಅಂತ್ಯ ಆಡಬೇಕು ಎಂದು ಕೆಲವು ಪ್ರಜ್ಞಾವಂತರ ವಾದವಾಗಿದೆ.

RELATED ARTICLES

Latest News