Homeಇದೀಗ ಬಂದ ಸುದ್ದಿಮಳೆ ಹಾನಿ ಪರಿಹಾರಕ್ಕೆ ಆಸ್ತ್ರಂ ಆ್ಯಪ್‌ ಬಳಕೆ

ಮಳೆ ಹಾನಿ ಪರಿಹಾರಕ್ಕೆ ಆಸ್ತ್ರಂ ಆ್ಯಪ್‌ ಬಳಕೆ

ಬೆಂಗಳೂರು,ಜೂ.19- ನಗರದಲ್ಲಿ ರಸ್ತೆ ಗುಂಡಿಗಳು, ಮಳೆ ಹಾನಿ ಹಾಗೂ ಮಳೆ-ಗಾಳಿಗೆ ಬಿದ್ದ ಮರಗಳ ತೆರವಿನಂತಹ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಆಸ್ತ್ರಂ ಆ್ಯಪ್‌ ಬಳಕೆಗೆ ಮುಂದಾಗಿದ್ದಾರೆ. ಪಾಲಿಕೆಯ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರು ಸಂಚಾರ ಪೊಲೀಸ್‌‍ ಬಳಸುತ್ತಿರುವ ಅಸ್ತ್ರಂ ಆ್ಯಪ್‌ನ ತಾಂತ್ರಿಕ ತಂಡ ಅಭಿಯಂತರರಿಗೆ ಆ್ಯಪ್‌ ಕಾರ್ಯವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿತು.

ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರು ದಾಖಲಿಸುವ ದೂರುಗಳನ್ನು ಆಧರಿಸಿ ಸಮಸ್ಯೆಯ ಸ್ಥಳವನ್ನು ಗುರುತಿಸಿ, ತಕ್ಷಣ ದುರಸ್ತಿ ಹಾಗೂ ತೆರವು ಕಾರ್ಯ ಕೈಗೊಳ್ಳುವ ಕುರಿತು ಮಾಹಿತಿ ನೀಡಲಾಯಿತು.ಮುಖ್ಯ ಅಭಿಯಂತರ ಬಸವರಾಜ್‌ ಕಬಾಡೆ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಹಾಗೂ ಸಾರ್ವಜನಿಕ ದೂರುಗಳ ತ್ವರಿತ ಪರಿಹಾರಕ್ಕೆ ಅಸ್ತ್ರಂ ಆ್ಯಪ್‌ ಪರಿಣಾಮಕಾರಿ ಸಾಧನವಾಗಿದ್ದು, ಎಲ್ಲಾ ಅಭಿಯಂತರರು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವಂತೆ ಸೂಚನೆ ನೀಡಿದರು.

ಆ್ಯಪ್‌ ಮೂಲಕ ಬರುವ ದೂರುಗಳ ಸ್ಥಳಕ್ಕೆ ಪಾಲಿಕೆ ಅಭಿಯಂತರರು ಮತ್ತು ಅವರ ತಂಡ ಕೂಡಲೇ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಶೀಘ್ರ ಸೇವೆ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

RELATED ARTICLES
spot_img

Latest News