ಬೆಂಗಳೂರು,ಸೆ.13–ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದಾಳಿ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ನಿರ್ದೇಶಕ ರಾಹುಲ್ ನವೀನ್ ಬೆಂಗಳೂರಿಗೆ ಆಗಮಿಸಿ ವಿಶೇಷ ನಿರ್ದೇಶಕರ ಸಮುಖದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಾರಿ ಮುಖ್ಯಸ್ಥರ ಮಟ್ಟದಲ್ಲಿ ಪ್ರಕರಣದ ದಾಖಲೆಗಳ ಪರಿಶೀಲನೆ ನಡೆಯುವ ಹಂತಕ್ಕೆ ಪ್ರಕರಣ ತಲುಪಿದರೆ, ಮುಂದಿನ ತನಿಖೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.ತನಿಖೆಯಲ್ಲಿ ಅಗತ್ಯವೆಂದು ಕಂಡುಬಂದರೆ ಸತೀಶ್ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿತ ವ್‌ಯವಹಾರಗಳೊಂದಿಗೆ ಸಂಪರ್ಕ ಹೊಂದಿರುವ ವ್‌ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.ಆದರೆ ಯಾರಿಗೆ ನೋಟಿಸ್ ನೀಡಲಾಗುತ್ತದೆ, ಯಾವಾಗ ವಿಚಾರಣೆ ನಡೆಯುತ್ತದೆ ಎಂಬುದು ಉಈಯ ಅಧಿಕೃತ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಸತೀಶ್ ಜಾರಕಿಹೊಳಿ ಅವರಿಗೆ ನಿಜವಾದ ಕಂಟಕವಾಗುವುದು ವಿದೇಶಿ ಹೂಡಿಕೆ ಹೊಂದಿರುವುದಷ್ಟೇ ಅಲ್ಲ. ಆ ಹೂಡಿಕೆಯ ಹಣದ ಮೂಲ, ಘೋಷಣೆ, ಊಉಅ ನಿಯಮಗಳ ಪಾಲನೆ ಮತ್ತು ಭಾರತದಲ್ಲಿನ ಯಾವುದೇ ಅಕ್ರಮ ಹಣದೊಂದಿಗೆ ಅದರ ಸಂಪರ್ಕವನ್ನು ಉಈ ತನಿಖೆಯಿಂದ ಸಾಬೀತುಪಡಿಸಬಹುದೇ ಎಂಬುದರ ಮೇಲೆ ಮುಂದಿನ ಬೆಳವಣಿಗೆ ಅವಲಂಬಿತವಾಗಿದೆ.
ಈ ಹಂತದಲ್ಲಿ ಇಡಿ ವಶಪಡಿಸಿಕೊಂಡ ನಗದು, ವಿದೇಶಿ ಕರೆನ್ಸಿ, ದಾಖಲೆಗಳು ಹಾಗೂ ಆಫ್ರಿಕಾದ ಗಣಿಗಾರಿಕಾ ಕಂಪನಿಗಳ ಹೂಡಿಕೆ ವಿವರಗಳು ತನಿಖೆಯ ಪ್ರಮುಖ ಕೊಂಡಿಗಳಾಗಿವೆ.
ಹೀಗಾಗಿ ಸತೀಶ್ ಜಾರಕಿಹೊಳಿ ಅವರಿಗೆ ವಿದೇಶಿ ಹೂಡಿಕೆ ಕಂಟಕವಾಗಲಿದೆಯೇ? ಎಂಬ ಪ್ರಶ್ನೆಗೆ ಈಗಲೇ ಅಂತಿಮ ಉತ್ತರ ಸಾಧ್ಯವಿಲ್ಲ.
ಆದರೆ ಉಈ ತನಿಖೆಯ ದಿಕ್ಕು ಸ್ಪಷ್ಟವಾಗಿ ವಿದೇಶಿ ಆಸ್ತಿ ಮತ್ತು ಹಣದ ಮೂಲದತ್ತ ಸಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಸಂಭವನೀಯ ವಿಚಾರಣೆ ಈ ಪ್ರಕರಣಕ್ಕೆ ನಿರ್ಣಾಯಕ ತಿರುವು ನೀಡುವ ಸಾಧ್ಯತೆ ಇದೆ. ಬೆಂಗಳೂರು, ಬೆಳಗಾವಿ, ಚಿಕ್ಕೋಡಿ ಮಾತ್ರವಲ್ಲದೆ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು 18 ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದ್ದರು.
ಈ ತನಿಖೆಯ ವೇಳೆ ಸಚಿವರ ಕುಟುಂಬದ ಬೃಹತ್ ಪ್ರಮಾಣದ ಆರ್ಥಿಕ ವ್ಯವಹಾರಗಳು ಮತ್ತು ವಿದೇಶಿ ನಂಟಿನ ಬಗ್ಗೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ವಿದೇಶಿ ಹೂಡಿಕೆ ದಾಖಲೆಗಳು: ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದ್ದು, ಸುಮಾರು 3.5 ಲಕ್ಷಕ್ಕೂ ಅಧಿಕ ವಿದೇಶಿ ಹೂಡಿಕೆ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 3.3 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಅದನ್ನು ಜತ್ತುಪಡಿಸಿಕೊಳ್ಳಲಾಗಿದೆ.
ಪ್ರಮುಖ ಡೈರಿಗಳು: ಹಣಕಾಸಿನ ವ್ಯವಹಾರದ ವಿವರಗಳನ್ನೊಳಗೊಂಡ 5 ಮಹತ್ವದ ಡೈರಿಗಳು ಇಡಿ ಬಲೆಗೆ ಬಿದ್ದಿವೆ.ಆಫ್ರಿಕಾ ದೇಶಗಳಲ್ಲಿ ನಡೆಸಲಾಗಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಹಾಗೂ ಅಲ್ಲಿ ಮಾಡಲಾಗಿರುವ ಬಂಡವಾಳ ಹೂಡಿಕೆಯೇ ಸತೀಶ್ ಜಾರಕಿಹೊಳಿ ಅವರಿಗೆ ಪ್ರಮುಖ ಕಂಟಕವಾಗಿ ಪರಿಣಮಿಸಿದೆ. ವಿದೇಶಿ ಮೂಲಗಳಿಂದ ಹರಿದು ಬಂದಿರುವ ಹಣದ ಹರಿವು ಹಾಗೂ ಇದರ ಹಿಂದಿನ ಜಾಲವನ್ನು ಭೇದಿಸಲು ಇಡಿ ಅಧಿಕಾರಿಗಳು ಈಗ ವಿದೇಶಿ ಮೂಲಗಳನ್ನು ಕೆದಕುತ್ತಿದ್ದಾರೆ.
ಈ ವಿದೇಶಿ ಹೂಡಿಕೆ ಪ್ರಕರಣವು ಸಚಿವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿರುವ Magnitude Star SARL ಎಂಬ ಚಿನ್ನದ ಗಣಿಗಾರಿಕಾ ಸಂಸ್ಥೆಯಲ್ಲಿ ಸುಮಾರು ಶೇ.40ರಷ್ಟು ಪಾಲು ಹೊಂದಿದ್ದಾರೆ ಎಂಬುದು ಉಈ ಆರೋಪವಾಗಿದೆ. ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಸೇರಿದಂತೆ ಕುಟುಂಬದ ಇತರ ಸದಸ್ಯರ ಹೆಸರುಗಳು ಕಾಂಗೋ ಮತ್ತು ಜಾಂಬಿಯಾದ ಕೆಲವು ವಿದೇಶಿ ಕಂಪನಿಗಳ ಹೂಡಿಕೆ ದಾಖಲೆಗಳಲ್ಲಿ ಕಾಣಿಸಿಕೊಂಡಿವೆ ಎಂದು ಇಡಿ ಹೇಳಿದೆ.
ಈ ಹೂಡಿಕೆಗಳಿಗೆ ಹಣ ಎಲ್ಲಿಂದ ಬಂತು? : ಭಾರತದಿಂದ ವಿದೇಶಕ್ಕೆ ಹಣ ವರ್ಗಾವಣೆಯಾಗಿದ್ದರೆ ಅದರ ಕಾನೂನುಬದ್ಧ ಮಾರ್ಗ ಯಾವುದು? ಹೂಡಿಕೆಗಳನ್ನು ಆದಾಯ ತೆರಿಗೆ ಮತ್ತು ವಿದೇಶಿ ವಿನಿಮಯ ನಿಯಮಗಳಡಿ ಸರಿಯಾಗಿ ಘೋಷಿಸಲಾಗಿತ್ತೇ?ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಇಡಿ ತನಿಖೆಯ ಪ್ರಮುಖ ಭಾಗವಾಗುವ ಸಾಧ್ಯತೆ ಇದೆ.
ಇಡಿ ತನಿಖೆಯಲ್ಲಿ ಮತ್ತೊಂದು ಗಂಭೀರ ಆರೋಪವೂ ಮುನ್ನೆಲೆಗೆ ಬಂದಿದೆ. ಸಿವಿಲ್ ಗುತ್ತಿಗೆದಾರರಿಂದ ಸಂಗ್ರಹಿಸಲಾದ ಕಿಕ್‌ಬ್ಯಾಕ್ ಹಣವನ್ನು ವಿವಿಧ ಮಾರ್ಗಗಳ ಮೂಲಕ ವಿದೇಶಿ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಅನುಮಾನವನ್ನು ತನಿಖಾ ಸಂಸ್ಥೆ ವ್ಯಕ್ತಪಡಿಸಿದೆ. ಈ ಆರೋಪವನ್ನು ಸಾಬೀತುಪಡಿಸಲು ದಾಖಲೆಗಳು, ಬ್ಯಾಂಕ್ ವ್‌ಯವಹಾರಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ವಿದೇಶಿ ಕಂಪನಿಗಳ ಮಾಲೀಕತ್ವದ ಸರಪಳಿಯನ್ನು ಉಈ ಪರಿಶೀಲಿಸುವ ಸಾಧ್ಯತೆ ಇದೆ.
ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳ ಪರಿಶೀಲನೆ ಮುಂದಿನ ಹಂತದಲ್ಲಿ ನಿರ್ಣಾಯಕವಾಗಬಹುದು. ವಿದೇಶಿ ಕಂಪನಿಗಳ ಷೇರುಪಾಲು, ಬ್ಯಾಂಕ್ ಖಾತೆಗಳು, ಹಣ ವರ್ಗಾವಣೆ, ಹೂಡಿಕೆ ಒಪ್ಪಂದಗಳು, ಕಂಪನಿ ಮಾಲೀಕತ್ವದ ದಾಖಲೆಗಳು ಹಾಗೂ ಭಾರತದಲ್ಲಿನ ಆದಾಯದೊಂದಿಗೆ ವಿದೇಶಿ ಆಸ್ತಿಗಳ ಹೊಂದಾಣಿಕೆ ಇತ್ಯಾದಿಗಳನ್ನು ಅಧಿಕಾರಿಗಳು ಹೋಲಿಕೆ ಮಾಡುವ ಸಾಧ್ಯತೆ ಇದೆ. ಈ ಪರಿಶೀಲನೆಯಲ್ಲಿ ಹಣದ ಮೂಲ ಮತ್ತು ವಿದೇಶಿ ಹೂಡಿಕೆಯ ನಡುವಿನ ನೇರ ಅಥವಾ ಪರೋಕ್ಷ ಸಂಪರ್ಕ ಸಿಕ್ಕರೆ, ಪ್ರಕರಣದ ಗಂಭೀರತೆ ಮತ್ತಷ್ಟು ಹೆಚ್ಚಾಗಬಹುದು.
