ಬೆಂಗಳೂರು,ಜ.21- ದೇವದುರ್ಗದ ಶಾಸಕರಾದ ಕರೆಮ್ಮ ಜಿ. ನಾಯಕ ಅವರಿಗೆ ಬೆದರಿಕೆ ಹಾಕಿರುವ ಮರಳು ಮಾಫಿಯಾ ದಂಧೆಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು, ಕರೆಮ ಅವರಿಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಬೆದರಿಕೆ ಹಾಕಿದವರನ್ನು ಬಂಧಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಹೇಳಿದ ಅವರು, ಕರೆಮ್ಮ ಅವರ ಮನೆಗೆ ಬಂದು ಪೊಲೀಸರ ಸಮುಖದಲ್ಲೇ ಬೆದರಿಕೆ ಹಾಕಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಎಸ್ಪಿ ಅವರಿಗೂ ಮನವಿ ಮಾಡಿದ್ದರೂ ಕೇವಲ ಎಫ್‌ಐಆರ್ ಮಾತ್ರ ದಾಖಲಿಸಲಾಗಿದೆ. ಬೆದರಿಕೆ ಹಾಕಿದವರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಮೈಸೂರಿನಲ್ಲೂ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಸಲಾಗಿದೆ. ಸರ್ಕಾರದಿಂದ ಯಾವುದೇ ಕ್ರಮ ಇಲ್ಲ. ಮಹಿಳಾ ಆಯೋಗವು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಶಾಸಕಿ ಕರೆಮ್ಮ ಅವರ ರಕ್ಷಣೆಗೆ ಮುಂದಾಗದಿದ್ದರೆ ಹೋರಾಟ ಮಾಡುವುದು ಅನಿವರ‍್ಯವಾಗಲಿದೆ ಎಂದು ಹೇಳಿದರು.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ ಮಾತನಾಡಿ, ಕೃಷ್ಣಾ ನದಿಯಲ್ಲಿ ಮರಳು ದಂಧೆ ನಿಲ್ಲಿಸಲು ಹೇಳಿದ್ದ ನಮ ಪಕ್ಷದ ಶಾಸಕರಾದ ಕರೆಮ್ಮ ಅವರಿಗೆ ಪೊಲೀಸರ ಸಮುಖದಲ್ಲೇ ಬೆದರಿಕೆ ಹಾಕಿದ್ದಾರೆ. ದಾಖಲೆಸಹಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರೆಮ ಮತ್ತು ಅವರ ಕುಟುಂಬದವರ ಮೇಲೆ ಕೇಸು ದಾಖಲಿಸಲಿದ್ದಾರೆ. ಬೆದರಿಕೆ ಹಾಕಿದವರಿಗೆ ಬಂಧಿಸಿ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೋ ಪ್ರರ‍್ಶಿಸಿದ ಅವರು, ಕರೆಮ್ಮ ಅವರಿಗೆ ಏನಾದರೂ ತೊಂದರೆಯಾದರೆ ಸರ್ಕಾರವೇ ಹೊಣೆಯಾಗುತ್ತದೆ. ಬೆದರಿಕೆ ಹಾಕಿರುವ ಬಗ್ಗೆ ಕರೆಮ ಅವರು ಸದನದಲ್ಲೇ ಈಗಾಗಲೇ ಪ್ರಸ್ತಾಪಿಸಿದ್ದಾರೆ. ಆದರೂ ಸೂಕ್ತ ರಕ್ಷಣೆಯಿಲ್ಲ. ಬೆದರಿಕೆ ಹಾಕಿದವರನ್ನು ಬಂಧಿಸದಿದ್ದರೆ ದೇವದರ‍್ಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು . ಈ ಬಗ್ಗೆ ಕೇಂದ್ರ ಮಹಿಳಾ ಆಯೋಗಕ್ಕೂ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ವಿಧಾನಸಭಾ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಮಹಿಳೆಯರಿಗೆ ರ‍್ಕಾರದಲ್ಲಿ ರಕ್ಷಣೆ ಇಲ್ಲದೆ ಗೂಂಡಾ ರಾಜ್ಯವಾಗಿದೆ. ಶಾಸಕಿ ಕರೆಮ ಅವರಿಗೆ ರಕ್ಷಣೆ ನೀಡಿಲ್ಲ. ಅವರಿಗೆ ಬೆದರಿಕೆ ಹಾಕಿರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು.
ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ರ‍್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಮುಖಂಡರಾದ ಕನ್ಯಾಕುಮಾರಿ, ಸೀತಾಲಕ್ಷ್ಮಿ, ಪ್ರಶಾಂತಿ ಸುಭಾಶ್, ಶೈಲಜಾ ರಾವ್, ಮಂಗಳಾ ಜಿ. ರಾಜು, ಕವಿತಾ ರೆಡ್ಡಿ ಉಪಸ್ಥಿತರಿದ್ದರು.
