ಬೆಂಗಳೂರು, ಜ.21- ಆರ್‌ಎಸ್‌ಎಸ್ ಧ್ವಜ ಎತ್ತಿ ಹಿಡಿದಿದ್ದ ಉಡುಪಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ ಅವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಹಿಂದುತ್ವ ವಿರೋಧಿ ಎಂಬ ಟೀಕೆಗಳು ಮತ್ತಷ್ಟು ತೀವ್ರವಾಗಿವೆ. ಕಳೆದ ಭಾನುವಾರ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ನಡೆಯಿತು. ಅಂದು ಮುಂಜಾನೆ 3 ಗಂಟೆ ಸುಮಾರಿಗೆ ಉಡುಪಿ ನಗರದ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ರ‍್ಯಾಯ ಮೆರವಣಿಗೆ ನಡೆದಿದೆ. ಪರ್ಯಾಯ ಆರಂಭಕ್ಕೂ ಮೊದಲು ಉಡುಪಿ ಶಾಸಕರಾದ ಯಶಪಾಲ್ ಆರ್‌ಎಸ್‌ಎಸ್ ಧ್ವಜವನ್ನು ಜಿಲ್ಲಾಧಿಕಾರಿಯವರ ಕೈಗೆ ಹಸ್ತಾಂತರಿಸಿದ್ದರು.
ನಂತರ ಜಿಲ್ಲಾಧಿಕಾರಿಯವರು ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ ಎಂದು ಉಡುಪಿ ಜಿಲ್ಲೆಯ ಕಾಂಗ್ರೆಸ್‌ನ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ನಡೆ ಅತ್ಯಂತ ಆಕ್ಷೇಪರ‍್ಹ ಮತ್ತು ರ‍್ಮ ನಿರಪೇಕ್ಷತೆಯ ತತ್ವಗಳಿಗೆ ವಿರುದ್ಧವಾಗಿದೆ. ಸರ್ಕಾರಿ ಸೇವಾ ನಿಯಮಗಳ ಅನುಸಾರ ಜಿಲ್ಲಾಧಿಕಾರಿವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹರೀಶ್ ಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರಿದ ಮುಖ್ಯಕರ‍್ಯರ‍್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರ ಕರಾವಳಿಯಲ್ಲಿ ಮತ್ತೆ ಕಾವೇರಿದ ರ‍್ಚೆಗೆ ಆಸ್ಪದ ನೀಡಿದೆ. ರ‍್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಹಿಂದುತ್ವದ ಸಂಕೇತವಾಗಿರುವ ಕೇಸರಿ ಧ್ವಜ ಹಿಡಿದಿರುವುದನ್ನು ಟೀಕಿಸುವ ಕಾಂಗ್ರೆಸಿಗರ ಉದ್ದೇಶವೇನು, ಜಿಲ್ಲಾಧಿಕಾರಿಯವರು ಪಾಕಿಸ್ತಾನದ ಧ್ವಜ ಹಿಡಿಯಬೇಕಿತ್ತೇ ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜ್ಯ ರ‍್ಕಾರ ಕೆಲ ತಿಂಗಳ ಹಿಂದೆ ರ‍್ಕಾರಿ ಆಸ್ತಿಗಳಲ್ಲಿ ಯಾವುದೇ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳು ನಡೆಯಬಾರದು ಎಂದು ನಿಷೇಧಿಸುವ ಸುತ್ತೋಲೆ ಹೊರಡಿಸಿತ್ತು. ಸದರಿ ಆದೇಶ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನರ‍್ಬಂಧಿಸುವ ಸಲುವಾಗಿಯೇ ರೂಪಿಸಲಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಟೀಕಿಸಿದ್ದವು. ವಾದ-ಪ್ರತಿವಾದಗಳು ಜೋರಾಗಿದ್ದವು. ಈ ನಡುವೆ ಹೈಕರ‍್ಟ್ ರಾಜ್ಯ ರ‍್ಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿತ್ತು. ರಾಜ್ಯ ರ‍್ಕಾರ ಹಿಂದು ಸಂಘ ಸಂಸ್ಥೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂರ‍್ಭದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಪ್ರಚೋದಿತ ಗಲಭೆಗಳು ತೀವ್ರವಾಗಿದ್ದವು. ಕೆಲ ಹತ್ಯೆಗಳು ನಡೆದಿದ್ದವು. ಈ ಸಂರ‍್ಭದಲ್ಲಿ ರಾಜ್ಯ ರ‍್ಕಾರ ಅಲ್ಲಿನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳನ್ನು ಬದಲಾವಣೆ ಮಾಡಿತ್ತು ಹಾಗೂ ಕೋಮು ಪ್ರಚೋದಿತ ಗಲಭೆಗಳನ್ನು ತಡೆಯಲು ವಿಶೇಷ ಕರ‍್ಯಪಡೆಯನ್ನು ರಚಿಸಿತ್ತು. ಅಲ್ಲಿಂದ ಕರಾವಳಿ ಮತ್ತು ಮಲೆನಾಡು ಭಾಗ ಹಿಂಸೆ ರಹಿತವಾಗಿ ಶಾಂತವಾಗಿದೆ. ಆದರೆ ಈಗ ಜಿಲ್ಲಾಧಿಕಾರಿಗಳು ಕೆಸರಿ ಧ್ವಜ ಹಿಡಿದಿದ್ದನ್ನು ಪ್ರಶ್ನಿಸಿರುವ ಕಾಂಗ್ರೆಸಿಗರ ನಡವಳಿಕೆಗೆ ಟೀಕೆಗಳು ಕೇಳಿ ಬಂದಿವೆ.
