Homeರಾಜ್ಯನಾಳೆಯಿಂದ ಜಂಟಿ ಅಧಿವೇಶನ : ಕುತೂಹಲ ಕೆರಳಿಸಿರುವ ಗವರ್ನರ್ ಭಾಷಣ

ನಾಳೆಯಿಂದ ಜಂಟಿ ಅಧಿವೇಶನ : ಕುತೂಹಲ ಕೆರಳಿಸಿರುವ ಗವರ್ನರ್ ಭಾಷಣ

ಬೆಂಗಳೂರು,ಜ.21- ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿವೆ. ಏಕೆಂದರೆ ನಾಳೆಯಿಂದ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಸಂಪ್ರದಾಯದಂತೆ ರಾಜ್ಯಪಾಲರು ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಾಮಾನ್ಯವಾಗಿ ರಾಜ್ಯಪಾಲರು ತಮ ಭಾಷಣದಲ್ಲಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳು, ಇದರಿಂದ ಜನರಿಗೆ ಆಗಿರುವ ಅನುಕೂಲ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ರಾಜ್ಯ ಸರ್ಕಾರ ಸಿದ್ದಪಡಿಸಿದ ಭಾಷಣವನ್ನು ಸಾಮಾನ್ಯವಾಗಿ ರಾಜ್ಯಪಾಲರು ಓದುವುದು ಶಿಷ್ಟಾಚಾರ. ಅದರಲ್ಲಿ ಏನಾದರೂ ಅಪ್ಪಿತಪ್ಪಿ ಕೆಲವು ವಿವಾದಾತಕ ಅಂಶಗಳಿದ್ದರೆ ಮಾತ್ರ ರಾಜ್ಯ ರ‍್ಕಾರದ ಮುಖ್ಯ ಕರ‍್ಯರ‍್ಶಿಯವರ ಜೊತೆ ಲೋಕಭವನದ ಅಧಿಕಾರಿಗಳು ರಚಿಸಿದ ವಿವರಣೆ ಪಡೆಯುತ್ತಾರೆ.

ನಿಯಮಗಳ ಪ್ರಕಾರ ರಾಜ್ಯಪಾಲರು ಸರ್ಕಾರದ ಭಾಷಣವನ್ನೇ ಯಥಾವತ್ತಾಗಿ ಓದಬೇಕೆಂಬ ನಿಯಮವಿಲ್ಲ. ರಾಜ್ಯಪಾಲರಿಗೆ ಯಾವುದಾದರೂ ವಿಷಯದ ಬಗ್ಗೆ ಸಂದೇಹ ಅಥವಾ ವಿವಾದಾತಕ ಅಂಶಗಳಿದ್ದರೆ ಅದನ್ನು ತೆಗೆದು ಹಾಕಲು ಸರ್ಕಾರರಕ್ಕೆ ಸೂಚನೆಯನ್ನು ಕೊಡಬಹುದು. ಇಲ್ಲದಿದ್ದರೆ ಆ ಭಾಷಣದ ಪುಟವನ್ನು ಓದಬಹುದು ಇಲ್ಲವೇ ಓದದೇ ಇರಬಹುದು. ಅದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ತರ‍್ಮಾನ. ಹೀಗೆ ಓದಬೇಕೆಂದು ಅವರ ಮೇಲೆ ಒತ್ತಡ ಹೇರುವಂತಿಲ್ಲ.

ಈಗ ಕೇಂದ್ರ ಸರ್ಕಾರರ ಕಳೆದ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ಯುಪಿಎ ಸರ್ಕಾರರ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ವಿಬಿ ಜಿ ರಾಮ್‌ ಜಿ ಎಂದು ಮರು ನಾಮಕರಣ ಮಾಡಿದೆ. ಕೇಂದ್ರ ರ‍್ಕಾರದ ಉದ್ದೇಶಿತ ಈ ತಿದ್ದುಪಡಿಗೆ ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿ ರಾಷ್ಟ್ರಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದೆ.

ಅದರಲ್ಲೂ ಕಾಂಗ್ರೆಸ್‌‍ ಆಡಳಿತ ಇರುವ ರ‍್ನಾಟಕದಲ್ಲಿ ತಿದ್ದುಪಡಿಗೆ ವಿರೋಧ ವ್ಯಕ್ತವಾಗಿದ್ದು, ಇದಕ್ಕಾಗಿಯೇ ರಚಿಸಲು ಎರಡು ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ರಾಜ್ಯಪಾಲರು ತಮ ಭಾಷಣದಲ್ಲಿ ಕೇಂದ್ರ ರ‍್ಕಾರ ತಿದ್ದುಪಡಿ ಮಾಡಿರುವ ವಿಬಿ ಜಿ ರಾಮ್‌ ಜಿ ಯೋಜನೆಯನ್ನು ಖಂಡಿಸಿ, ಇದರಿಂದ ಜನರ ಮೇಲಾಗುವ ದುಷ್ಪರಿಣಾಮ, ಅನನುಕೂಲತೆ ಬಗ್ಗೆ ರ‍್ಕಾರ ಭಾಷಣದಲ್ಲಿ ಸರ‍್ಪಡೆ ಮಾಡಿದೆ ಎಂದು ತಿಳಿದುಬಂದಿದೆ.

ಆದರೆ ರಾಜ್ಯಪಾಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಉದ್ದೇಶಿತ ವಿಬಿ ಜಿ ರಾಮ್‌ ಜಿ ತಿದ್ದುಪಡಿಗೆ ಖಂಡನಾ ನರ‍್ಣಯ ಪದ ಸರ‍್ಪಡೆಯಾದರೆ ಓದುವುದಿಲ್ಲ ಎಂದು ಮೌಖಿಕವಾಗಿ ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಒಂದು ವೇಳೆ ರ‍್ಕಾರ ಸಿದ್ಧಪಡಿಸಿರುವ ಈ ಭಾಷಣದ ಅಂಶವನ್ನು ತೆಗೆದು ಹಾಕದಿದ್ದರೆ ಆ ಪುಟವನ್ನೇ ತಾವು ಓದುವುದಿಲ್ಲ ಎಂದು ತಮ ನರ‍್ಧಾರವನ್ನು ಅಧಿಕಾರಿಗಳ ಮೂಲಕ ತಿಳಿಸಿರುವುದಾಗಿ ತಿಳಿದುಬಂದಿದೆ.

ಹಾಗೊಂದು ವೇಳೆ ಸರ್ಕಾರರ ರಾಜ್ಯಪಾಲರ ಸೂಚನೆಯನ್ನು ಮೀರಿ ಯಥಾವತ್ತಾಗಿ ಭಾಷಣದ ಪ್ರತಿ ನೀಡಿದರೆ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ನರ‍್ಧಾರ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ತಮಿಳುನಾಡಿನಲ್ಲಿ ಮೊದಲು ನಾಡಗೀತೆ ಹಾಡಿದ ನಂತರ ರಾಷ್ಟ್ರಗೀತೆಗೆ ಅಪಮಾನ ಮಾಡಲಾಗಿದೆ ಎಂದು ಅಲ್ಲಿನ ರಾಜ್ಯಪಾಲರು ಭಾಷಣವನ್ನು ಸರ್ಕಾರಕ್ಕೆ ಮೊಟಕುಗೊಳಿಸಿ ಸದನದಿಂದ ಹೊರ ನಡೆದಿದ್ದರು.

ಈಗ ಥಾವರ್‌ ಚಂದ್‌ ಗೆಹ್ಲೋಟ್‌ ಕೇಂದ್ರ ರ‍್ಕಾರದ ವಿರುದ್ಧವಾಗಿ ಖಂಡನಾ ನರ‍್ಣಯದ ಅಂಶವನ್ನು ಉಲ್ಲೇಖ ಮಾಡಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರರ ಸಿದ್ದಪಡಿಸಿರುವ ಭಾಷಣದಲ್ಲಿ ವಿಬಿ ಜಿ ರಾಮ್‌ ಜಿ ವಿರುದ್ಧದ ಅಂಶಗಳು ಇರಲಿವೆ ಎಂಬ ಮಾಹಿತಿ ಇದೆ. ಮನ್ರೇಗಾವನ್ನು ರದ್ದುಪಡಿಸಿದ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಜನರು ಯಾವ ರೀತಿಯ ಸಮಸ್ಯೆ ಅನುಭವಿಸಲಿದ್ದಾರೆ ಎಂಬ ಅಂಶಗಳೂ ಉಲ್ಲೇಖ ಆಗಿರುವ ಸಾಧ್ಯತೆ ಇದೆ. ಜೊತೆಗೆ ಒಕ್ಕೂಟ ರ‍್ಕಾರಕ್ಕೆ ಕೇಂದ್ರದ ನಡೆ ಯಾವ ರೀತಿಯಲ್ಲಿ ಪೂರಕವಾಗಿಲ್ಲ ಎಂಬ ಅಂಶಗಳು ಭಾಷಣದಲ್ಲಿ ವ್ಯಕ್ತವಾಗುವ ಸಾಧ್ಯತೆ ದಟ್ಟವಾಗಿದೆ.

ಗೆಹ್ಲೋಟ್‌ ಅವರು ಕೇರಳ ಮತ್ತು ತಮಿಳುನಾಡು ರಾಜ್ಯಪಾಲರ ಹೆಜ್ಜೆಯನ್ನೇ ಇಡುತ್ತಾರಾ ಅಥವಾ ರ‍್ಕಾರದ ಭಾಷಣವನ್ನು ಪರ‍್ತಿಯಾಗಿ ಓದುವ ಮೂಲಕ ವಿವಾದಕ್ಕೆ ಅವಕಾಶ ನೀಡದೆ ಇರುತ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಕೇರಳದ ವಿಧಾನಸಭೆಯಲ್ಲೂ ಇಂತಹ ಪ್ರಸಂಗ ನಡದಿದೆ. ಕೇರಳದ ರಾಜ್ಯಪಾಲ ರಾಜೇಂದ್ರ ರ‍್ಲೇಕರ್‌ ಅವರು ಅಧಿವೇಶನದಲ್ಲಿ ಮಾಡಿದ ಭಾಷಣದ ಸಂರ‍್ಭದಲ್ಲಿ ಕೇಂದ್ರ ರ‍್ಕಾರದ ವಿರುದ್ಧದ ಅಂಶಗಳನ್ನು ಕೈಬಿಟ್ಟಿದ್ದಾರೆ ಎಂಬ ಆರೋಪ ಇದೆ. ಸ್ವತಃ ಕೇರಳದ ಸಿಎಂ ಪಿಣರಾಯಿ ವಿಜಯನ್‌ ಈ ಆರೋಪ ಮಾಡಿದ್ದಾರೆ.

ಸಂವಿಧಾನದ 176ನೇ ವಿಧಿಯ ಪ್ರಕಾರ ರಾಜ್ಯ ರ‍್ಕಾರದ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಪರ‍್ತಿಯಾಗಿ ಓದುವುದು ಕಡ್ಡಾಯವಾಗಿದೆ. ಈ ಸಂರ‍್ಭದಲ್ಲಿ ವೈಯಕ್ತಿಕ ಅಂಶಗಳನ್ನು ಓದಲು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲ. ಹಾಗಾಗಿ ರಾಜ್ಯಪಾಲರ ನಡೆ ಸಂವಿಧಾನದ ವಿರುದ್ಧವಾಗಿದೆ ಎಂಬುವುದು ಡಿಎಂಕೆ ವಾದವಾಗಿದೆ.

RELATED ARTICLES

Latest News