ಬಾಗೇಪಲ್ಲಿ, ಜು.11-ತಾಲ್ಲೂಕಿನ ದಾಸಗಾರೆಪಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ಫರ್ಹಾನಾಜ್ ಮತ್ತು ಆಕೆಯ ಪುತ್ರ ಮೊಹಮದ್ ಫರ್ದಿನ್ ಖಾನ್ ಎಂದು ಗುರುತಿಸಲಾಗಿದೆ.
ಇವರ ಬಳಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಕೂಡ ಪತ್ತೆಯಾಗಿದೆ. ಪ್ರಸ್ತುತ ಆಯೂಬ್ಖಾನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇವರು ಪಾಕಿಸ್ತಾನದ ಫರ್ಹಾನಾಜ್ಳನ್ನು ಹಲವು ವರ್ಷಗಳ ಹಿಂದೆ ಯುಎಇಯಲ್ಲಿ ಮದುವೆಯಾಗಿದ್ದ, ನಂತರ ಆಕೆಯನ್ನು ಭಾರತಕ್ಕೆ ಕರೆತಂದು ಅಕ್ರಮವಾಗಿ ನೆಲೆಸಿದ್ದರು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇವರಿಗೆ ಈಗ ನಾಲ್ಕು ಮಕ್ಕಳಿದ್ದು, ಒಬ್ಬನನ್ನು ಮಾತ್ರ ಈಗ ಬಂಧಿಸಲಾಗಿದೆ. ಘಟನೆ ಕುರಿತಂತೆ ಕೇಂದ್ರ ಗೃಹ ಖಾತೆಯನ್ನು ಕೂಡ ಸಂಪರ್ಕಿಸಲಾಗಿದ್ದು, ಬಾಗೇಪಲ್ಲಿ ತಹಶೀಲ್ದಾರ್ ಅವರ ದೂರಿನ ಸಂಬಂಧ ಈಗ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಆಯೂಬ್ಖಾನ್ ಪಾಕಿಸ್ತಾನ ಮೂಲದ ಮದುವೆಯಾದ ನಂತರ ಬೆಂಗಳೂರಿಗೆ ವಾಸಸ್ಥಾನವನ್ನು ಬದಲಾಯಿಸಿದ್ದು, ಒಬ್ಬ ಪುತ್ರ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ ಮತ್ತು ಪಿಯುಸಿ ಮತ್ತು ಬಿಎ ಪದವಿಯನ್ನು ಬಾಗೇಪಲ್ಲಿಯಲ್ಲಿ ಪೂರೈಸಿದ್ದಾನೆ.
ಪ್ರಸ್ತುತ ಚಿಕ್ಕಬಳ್ಳಾಪುರ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಇವರಿಗೆ ಯಾವ ಆಧಾರದ ಮೇಲೆ ರೇಷನ್ ಕಾರ್ಡ್ ಆಧಾರ್ ಮತ್ತು ಸರ್ಕಾರಿ ಗುರುತಿನ ಚೀಟಿಯನ್ನು ನೀಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಕೇಳಿ ನಂತರ ಅವುಗಳನ್ನು ಈಗ ರದ್ದು ಮಾಡಲಾಗಿದೆ.
ಆಪರೇಷನ್ ಸಿಂಧೂರ್ ನಂತರ ಕೇಂದ್ರ ಗೃಹ ಸಚಿವಾಲಯ ದೀರ್ಘಕಾಲದ ವೀಸಾ ಪಡೆದು ದೇಶದಲ್ಲಿ ವಾಸಿಸುತ್ತಿರುವವರ ಬಗ್ಗೆ ಮಾಹಿತಿ ನೀಡಿವಂತೆ ಸೂಚನೆ ನೀಡಲಾಗಿತ್ತು. ನಂತರ ಇದರ ಬಗ್ಗೆ ಕೂಲಂಕುಷ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ತಿಳಿಸಲಾಗಿತ್ತು.ನಂತರ ಇದನ್ನು ಪರಿಶೀಲಿಸುವ ವೇಳೆ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ಪಾಕ್ ಮೂಲದವರು ವಾಸಿಸುತ್ತಿರುವವರ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಪ್ರಸ್ತುತ ಫರ್ಹಾನಾಜ್ ಮತ್ತು ಆಕೆಯ ಪುತ್ರ ಮೊಹಮದ್ ಫರ್ದಿನ್ಖಾನ್ ಪಾಕಿಸ್ತಾನ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ.
