Homeಬೆಂಗಳೂರುಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ : ಜಿಬಿಎ ಚಳಿ ಬಿಡಿಸಿದ ಸಾರ್ವಜನಿಕರು

ಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ : ಜಿಬಿಎ ಚಳಿ ಬಿಡಿಸಿದ ಸಾರ್ವಜನಿಕರು

Fix your house first: Public Troll GBA

ಬೆಂಗಳೂರು, ಜು.11- ಊರಿನ ಫುಟ್‌ಪಾತ್‌ ಒತ್ತುವರಿ ತೆರವು ಮಾಡಲು ಮುಂದಾಗಿರುವ ಜಿಬಿಎ ಕೇಂದ್ರ ಕಚೇರಿಯೇ ಗುಜರಿ ವಾಹನಗಳ ತಾಣವಾಗಿ ಮಾರ್ಪಟ್ಟಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜಿಬಿಎ ಕೇಂದ್ರ ಕಚೇರಿ ಆವರಣ ಹಾಗೂ ಕೌನ್ಸಿಲ್‌ ಕಟ್ಟಡದ ಹಿಂಭಾಗದಲ್ಲಿ ನಗರಪಾಲಿಕೆಗೆ ಸೇರಿದ ಹಳೆಯ ವಾಹನಗಳು ಮತ್ತು ಅನಾಥ ವಾಹನಗಳು ಕಳೆದ ಹಲವು ವರ್ಷಗಳಿಂದ ತುಕ್ಕು ಹಿಡಿದು ನಿಂತಿವೆ.

ಕೆಟ್ಟು ನಿಂತಿರುವ ವಾಹನಗಳ ನಿರ್ವಹಣೆ ಇಲ್ಲದ ಈ ವಾಹನಗಳು ಗುಜರಿ ವಾಹನಗಳಂತೆ ಕಾಣುತ್ತಿದ್ದು, ಕಚೇರಿಯ ಅಂದಕ್ಕೆ ಕಪ್ಪುಚುಕ್ಕೆಯಂತೆ ಮಾರ್ಪಟ್ಟಿವೆ.ಈ ವಾಹನಗಳಿಂದ ಜಿಬಿಎ ಕೇಂದ್ರ ಕಚೇರಿಗೆ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಹಲವು ಬಾರಿ ವಾಹನಗಳನ್ನು ತೆರವುಗೊಳಿಸುವಂತೆ ದೂರುಗಳು ಬಂದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೆಡೆ ನಗರಾದ್ಯಂತ ಅನಾಥ ವಾಹನಗಳು ಹಾಗೂ ಟ್‌ಪಾತ್‌ ಒತ್ತುವರಿಗಳನ್ನು ತೆರವುಗೊಳಿಸುತ್ತಿರುವ ಜಿಬಿಎ, ಮತ್ತೊಂದೆಡೆ ತನ್ನದೇ ಆವರಣದಲ್ಲಿರುವ ತುಕ್ಕು ಹಿಡಿದ ವಾಹನಗಳನ್ನು ತೆರವುಗೊಳಿಸದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಮೊದಲು ಜಿಬಿಎ ತನ್ನ ಕೇಂದ್ರ ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಿ. ನಂತರ ನಗರದ ಟ್‌ಪಾತ್‌ ಒತ್ತುವರಿ ತೆರವಿನ ಬಗ್ಗೆ ಮಾತನಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED ARTICLES

Latest News