Homeಇದೀಗ ಬಂದ ಸುದ್ದಿಸ್ಟಿಂಗ್‌ ಕಾರ್ಯಾಚರಣೆ ಹಿಂದೆ ಕೇರಳ ವ್ಯಕ್ತಿ ನಂಟು ಬಯಲು

ಸ್ಟಿಂಗ್‌ ಕಾರ್ಯಾಚರಣೆ ಹಿಂದೆ ಕೇರಳ ವ್ಯಕ್ತಿ ನಂಟು ಬಯಲು

ಬೆಂಗಳೂರು,ನ.28- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಕೇರಳ ವ್ಯಕ್ತಿಯ ಪಾತ್ರವಿರುವುದು ಸೈಬರ್‌ ಪೊಲೀಸರ ತನಿಖೆ ವೇಳೆ ಕಂಡು ಬಂದಿದೆ. ಈ ಪ್ರಕರಣಕ್ಕೆ ನೆರೆ ರಾಜ್ಯದ ನಂಟು ಕಂಡು ಬಂದಿದ್ದು, ಕೇರಳ ಮೂಲದ ವ್ಯಕ್ತಿಗೆ ಎರಡು ಬಾರಿ ನೋಟೀಸ್‌‍ ನೀಡಿದರೂ ಆತ ವಿಚಾರಣೆಗೆ ಹಾಜರಾಗಿಲ್ಲ. ಈಗ ನೋಟೀಸ್‌‍ ಕೊಡಲಾಗಿದೆ.

ಈ ವ್ಯಕ್ತಿ ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ಎಂಬುವುದು ತನಿಖೆಯಿಂದ ತಿಳಿದು ಬಂದಿದ್ದು, ಈ ವ್ಯಕ್ತಿ ಮೂಲಕವೇ ಸ್ಟಿಂಗ್‌ ಆಪರೇಷನ್‌ನಲ್ಲಿದ್ದ ಮಹಿಳೆ ಕೃಪಾಆಳ್ವಾ ಅವರನ್ನು ಸಂಪರ್ಕಿಸಿದ್ದಳು ಎಂಬುವುದು ಗೊತ್ತಾಗಿದೆ.
ಕೃಪಾ ಆಳ್ವಾ ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಅವರ ಕಚೇರಿಯಲ್ಲಿ ಕೇರಳದ ವ್ಯಕ್ತಿ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಆದರೆ ಈ ವ್ಯಕ್ತಿಗೂ ಸ್ಟಿಂಗ್‌ನಲ್ಲಿದ್ದ ಮಹಿಳೆ ಸಂಪರ್ಕವಿತ್ತೇ ಎಂಬುವುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಕೃಪಾಆಳ್ವಾ ಅವರ ಬಳಿ ಸ್ಟಿಂಗ್‌ನಲ್ಲಿದ್ದ ಮಹಿಳೆಯನ್ನು ಕರೆತಂದಿದ್ದು, ಈ ಕೇರಳದ ವ್ಯಕ್ತಿಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Latest News