Thursday, April 3, 2025
Homeರಾಷ್ಟ್ರೀಯ | Nationalಹೆಚ್ಚು ಮೊಬೈಲ್‌ ಬಳಸಬೇಡ ಎಂದ ಅಣ್ಣನನ್ನು ಕೊಚ್ಚಿ ಕೊಂದ ತಂಗಿ

ಹೆಚ್ಚು ಮೊಬೈಲ್‌ ಬಳಸಬೇಡ ಎಂದ ಅಣ್ಣನನ್ನು ಕೊಚ್ಚಿ ಕೊಂದ ತಂಗಿ

ರಾಜ್‌ನಂದಗಾಂವ್‌, ಮೇ 5-ಮೊಬೈಲ್‌ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದೀಯ ಎಂದು ನಿಂದಿಸಿದ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ತಂಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ಚುಯಿಖಾಡನ್‌ನಲ್ಲಿ ನಡೆದಿದೆ.

ಕೊಲೆ ಸಂಬಂದ 14 ವರ್ಷದ ಬಾಲಕಿಯನ್ನು ಚುಯಿಖಾಡನ್‌ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕುಟುಂಬ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಈ ದುತಂತ ಸಂಭವಿಸಿದೆ.ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ತಂಗಿ ಮೊಬೈಲ್‌ ಫೋನ್‌ನಲ್ಲಿ ಹುಡುಗರೊಂದಿಗೆ ಮಾತನಾಡುತ್ತಿದ್ದಳು ಇದರಿಂದ ಆಕೆಯ ಸಹೋದರ ಕೋಪಗೊಂಡಿದ್ದ ಆಕೆಗೆ ಬುದ್ದಿವಾದ ಹೇಳಿದ್ದ .

ಇನ್ನು ಮುಂದೆ ಫೋನ್‌ ಬಳಸದಂತೆ ಎಚ್ಚರಿಸಿದ್ದ ಇದರಿಂದ ಕೋಪಗೊಂಡ ಬಾಲಕಿ ತನ್ನ ಸಹೋದರ ನಿದ್ರೆಗೆ ಜಾರಿದಾಗ ಆತನ ಕುತ್ತಿಗೆಗೆ ಕೊಡಲಿಯಿಂದ ಹೊಡೆದಿದ್ದಾಳೆ,ಇದರಿಂದ ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಬಾಲಕಿ ಸ್ನಾನ ಮಾಡಿ ತನ್ನ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ತನ್ನ ಸಹೋದರನನ್ನು ಕೊಲೆ ಮಾಡಲಾಗಿದೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾಳೆ.

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಅನುಮಾನಗೊಂಡು ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.ಹೀಗೂ ಉಂಟೆ ಎಂದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಪೋಷಕರ,ಸಂಬಂಧಿಕರ ಆಕ್ರಂದನ ಮುಗಿಲುಮಟ್ಟಿದೆ.

RELATED ARTICLES

Latest News