Friday, November 22, 2024
Homeರಾಜ್ಯರಾಜಕಾರಣದಲ್ಲಿ ಮಾತು, ಸಂಘರ್ಷ ಸಹಜ: ಎಚ್.ವಿಶ್ವನಾಥ್

ರಾಜಕಾರಣದಲ್ಲಿ ಮಾತು, ಸಂಘರ್ಷ ಸಹಜ: ಎಚ್.ವಿಶ್ವನಾಥ್

ಮೈಸೂರು,ಏ.7- ರಾಜಕಾರಣದಲ್ಲಿ ಮಾತು, ಸಂಘರ್ಷ ಸಹಜ, ಅದನ್ನು ಸರಿ ಮಾಡಿಕೊಂಡು ಹೋಗುವುದು ಅನಿವಾರ್ಯ ಎಂದು ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು. ಹೆಚ್.ಡಿ.ಕುಮಾರಸ್ವಾಮಿ ನಮ್ಮೂರಿಗೆ ಬಂದಿದ್ದಾರೆ ಇದು ವಿಶೇಷ ಸಂದರ್ಭ, ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಸಂದರ್ಭ ಎಂದು ಬಣ್ಣಿಸಿದರು.

ಈ ನೆಲದಿಂದ ಗೆದ್ದು ಭಾರತದ ಪ್ರಧಾನಿಯಾಗುವುದು ಸುಲಭ ಸಾಧನೆ ಅಲ್ಲ, ಕಷ್ಟದ ಸಂದರ್ಭದಲ್ಲಿ ನನ್ನ ಜತೆಗಿದ್ದಾರೆ, ನಮ್ಮ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟದವರೆಗೂ ಹೋಗಿತ್ತು, ರಾಜಕೀಯ ಧ್ರುವೀಕರಣದ ಸಂದರ್ಭದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದೇ ಸವಾಲು ಎಂದು ಹೇಳಿದರು. ಬಿಜೆಪಿ- ಜೆಡಿಎಸ್ ಒಂದಕ್ಕೊಂದು ಮಿಳಿತವಾಗಿ ಮೋದಿ ಪ್ರಧಾನಿ ಮಾಡಲು ಸಜ್ಜಾಗಿವೆ, ನಾನು ವಿಷಯಾಧಾರಿತವಾಗಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೇನೆ.

ಅದೆಲ್ಲವನ್ನೂ ಮರೆತು ಕುಮಾರಸ್ವಾಮಿ ಮನೆಗೆ ಬಂದಿರುವುದು ಖುಷಿ ನೀಡಿದೆ, ರಾಜವಂಶದ ಕುಡಿ ಯದುವೀರ್ ಪ್ರಜಾಪ್ರಭುತ್ವದಲ್ಲಿ ಪ್ರತಿಧಿನಿಯಾಗಲು ಸ್ಪರ್ಧೆ ಮಾಡಿದ್ದಾರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇಬ್ಬರೂ ಗೆಲ್ಲಬೇಕು ಎಂದು ವಿಶ್ವನಾಥ್ ತಿಳಿಸಿದರು.

ಕುಮಾರಸ್ವಾಮಿ ಅವರ ಬಗ್ಗೆ ಆಡಳಿತಾತ್ಮಕವಾಗಿ ಟೀಕೆ ಮಾಡಿ, ಆದರೆ ಎಚ್.ಡಿ.ದೇವೇಗೌಡರ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು, ಅಂತಹ ನೈತಿಕತೆ ಯಾರಿಗೂ ಇಲ್ಲ, ಸಿದ್ದರಾಮಯ್ಯ ಅವರೇ, ಮೈಸೂರಲ್ಲಿ ನಿಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ದೀರಿ, ನನ್ನ ಹೆಸರೂ ಇತ್ತು, ಸಮೀಕ್ಷೆ ವರದಿ ಬಂದ ಮೇಲೆ ಪಾಪ ಲಕ್ಷ್ಮಣ್‍ಗೆ ಟಿಕೆಟ್ ಕೊಟ್ಟು ನಿಲ್ಲಿಸಿಕೊಂಡಿದ್ದೀರಿ, ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದೀರಿ ಎಂದು ವಿಶ್ವನಾಥ್ ಹೇಳಿದರು.

RELATED ARTICLES

Latest News