ಬೆಂಗಳೂರು, ಡಿ. 27- ಏಕದಿನ ವಿಶ್ವಕಪ್‍ನ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಕ್ಷೇತ್ರರಕ್ಷಣೆ ವೇಳೆ ಪಾದದ ಗಾಯದ ಸಮಸ್ಯೆ ಎದುರಿಸುತ್ತಿರುವ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಅವರು ಅಫಘಾನಿಸ್ತಾನ ವಿರುದ್ಧದ ಟಿ 20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾ ವಿರ್ಧುದ 3ನೇ ಟಿ 20 ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ವೇಳೆ ಹಂಗಾಮಿ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಅವರು ಕೂಡ ಪಾದದ ಸಮಸ್ಯೆಗೆ ಒಳಗಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿ ಮೂಲಕ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು.
ರಾಜ್ಯದಲ್ಲಿ ತೀವ್ರ ಬರ, ಮೇವು ಮತ್ತು ನೀರಿಗೆ ಸಂಕಷ್ಟ
ಆದರೆ ಹಾರ್ದಿಕ್ ಪಾಂಡ್ಯ ಅವರ ಪಾದದ ಗಾಯದ ಸಮಸ್ಯೆ ಇನ್ನೂ ಗಂಭೀರವಾಗಿರುವುದರಿಂದ ಅವರು ಅಫ್ಘಾನಿಸ್ತಾನದ ಸರಣಿಯ ವೇಳೆ ಚೇತರಿಸಿಕೊಳ್ಳುವುದು ಅನುಮಾನ ಆಗಿದೆ. ಇವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರೇ ತಂಡವನ್ನು ಮುನ್ನಡೆಸುತ್ತಾರೋ, ರೋಹಿತ್ ಶರ್ಮಾರನ್ನು ಸರಣಿಗೆ ನಾಯಕರಾಗಿ ಆಯ್ಕೆ ಆಗುತ್ತಾರೋ ಎಂಬುದು ಕುತೂಹಲವಾಗಿದೆ.