Tuesday, April 21, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2026)

Today's Horoscope

ನಿತ್ಯ ನೀತಿ : ಪ್ರತಿ ವಸ್ತುವಿಗೂ ಬೆಲೆ ಕಟ್ಟುವಷ್ಟು ಸಿರಿವಂತನಾಗು! ಆದರೆ ಪ್ರತಿಯೊಬ್ಬರ ಭಾವನೆ ಗಳಿಗೆ ಬೆಲೆ ಕೊಡದಷ್ಟು ಬಡವನಾಗಬೇಡ.

ಪಂಚಾಂಗ : ಗುರುವಾರ , 26-02-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಮೃಗಶಿರಾ / ಯೋಗ: ಪ್ರೀತಿ / ಕರಣ: ತೈತಿಲ
ಸೂರ್ಯೋದಯ – 06.39
ಸೂರ್ಯಾಸ್ತ – 6.29
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :

ಮೇಷ: ಕೆಲಸ-ಕಾರ್ಯಗಳಲ್ಲಿ ತಾಳೆ ಅಗತ್ಯ. ವಿವಾದಗಳಿಂದ ದೂರವಿರುವುದು ಒಳಿತು.
ವೃಷಭ: ಬಹಳ ದಿನಗಳ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ.
ಮಿಥುನ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.

ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.
ಸಿಂಹ: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.
ಕನ್ಯಾ: ಮಿತ್ರರಲ್ಲಿರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.

ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತಿರಾಗಿರುವಿರಿ.
ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
ಧನುಸ್ಸು: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸಿ. ಅನಗತ್ಯ ಚರ್ಚೆ ಬೇಡ.

ಮಕರ: ಮಗಳ ಮದುವೆಯ ಕಾರ್ಯಕಲಾಪಗಳು ಸುಗವಾಗಿ ಸಾಗುವುದರಿಂದ ನೆಮದಿ ಇರಲಿದೆ.
ಕುಂಭ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ: ನೀವು ಯೋಚಿಸಿದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.

RELATED ARTICLES

Latest News