Friday, June 14, 2024
Homeಕ್ರೀಡಾ ಸುದ್ದಿಬುಮ್ರಾ ಸಾಹಸದಿಂದ ಪಾಕ್‌ ಬಗ್ಗುಬಡೆದ ರೋಹಿತ್‌ ಪಡೆ

ಬುಮ್ರಾ ಸಾಹಸದಿಂದ ಪಾಕ್‌ ಬಗ್ಗುಬಡೆದ ರೋಹಿತ್‌ ಪಡೆ

ನ್ಯೂಯಾರ್ಕ್‌, ಜೂ.10( ಪಿಟಿಐ) – ಜಸ್‌‍ಪ್ರೀತ್‌ ಬುಮ್ರಾ ಅವರ ಪ್ರಯತ್ನದಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸೋಲಿಸಲು ಕಾರಣವಾಯಿತು ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಏನು ಮಾಡಬಹುದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವನ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ.

ವಿಶ್ವಕಪ್‌ನಾದ್ಯಂತ ಅವರು ಆ ಮನಸ್ಥಿತಿಯಲ್ಲಿರಬೇಕೆಂದು ನಾವು ಬಯಸುತ್ತೇವೆ. ಅವರು ಮೇಧಾವಿ, ಅದು ನಮಗೆಲ್ಲರಿಗೂ ತಿಳಿದಿದೆ, ಪಿಚ್‌ ಬ್ಯಾಟಿಂಗ್‌ಗೆ ಅನುಕೂಲಕರವಾಗಿಲ್ಲದ ಕಾರಣ ಪಂದ್ಯ ಗೆಲ್ಲುತ್ತೇವೆ ಎಂಬ ನಂಬಿಕೆ ಭಾರತಕ್ಕಿತ್ತು ಎಂದು ರೋಹಿತ್‌ ಹೇಳಿದ್ದಾರೆ.
ಆದಾಗ್ಯೂ, ಒಂದು ಹಂತದಲ್ಲಿ 3 ವಿಕೆಟ್‌ಗೆ 89 ರನ್‌ ಗಳಿಸಿದ ನಂತರ ನಾವು ಉತ್ತಮವಾಗಿ ಬ್ಯಾಟಿಂಗ್‌ ಮಾಡಬೇಕಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಇದೀಗ ಬ್ಯಾಕ್‌-ಟು-ಬ್ಯಾಕ್‌ ವ್ಯಾನ್‌ ಆಫ್‌ ದಿ ವ್ಯಾಚ್‌ ಪ್ರಶಸ್ತಿಗಳನ್ನು ಗೆದ್ದಿರುವ ಬುವ್ರಾ ಅವರೊಂದಿಗೆ ಇಡ ಬೌಲಿಂಗ್‌ ಘಟಕ ತನ್ನ ಪ್ರಯತ್ನದಲ್ಲಿ ಬಹಳ ಶಿಸ್ತುಬದ್ಧವಾಗಿತ್ತು ಎಂದು ಅವರು ಹೇಳಿದರು.ರೋಹಿತ್‌ ಮತ್ತು ಬುವ್ರಾ ಇಬ್ಬರೂ ನಸ್ಸೌ ಕ್ರಿಕೆಟ್‌ ಕೌಂಟಿ ಮೈದಾನದಲ್ಲಿ ತಮಗೆ ದೊರೆತ ಅಬ್ಬರದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ನಾವು ಭಾರತದಲ್ಲಿ ಆಡುತ್ತಿರುವಂತೆ ಭಾಸವಾಯಿತು, ಬೆಂಬಲದಿಂದ ನಿಜವಾಗಿಯೂ ಸಂತೋಷವಾಗಿದೆ ಮತ್ತು ಇದು ಮೈದಾನದಲ್ಲಿ ನಮಗೆ ಶಕ್ತಿಯನ್ನು ನೀಡುತ್ತದೆ. ನಾವು ಈಗ ಗಮನಹರಿಸುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.

RELATED ARTICLES

Latest News