Friday, October 11, 2024
Homeರಾಷ್ಟ್ರೀಯ | Nationalಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನ

ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನ

ನವದೆಹಲಿ,ಜ.31- ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತಿರುವ ಪರಿಣಾಮ ಭ್ರಷ್ಟಾಚಾರ ಅನಿಯಂತ್ರಿತವಾಗಿದೆ ಎಂದು ಟ್ರಾನ್‍ಸ್ಪರೆನ್ಸಿ ಇಂಟರ್‍ನ್ಯಾಷನಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದು, 2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತವು 180 ದೇಶಗಳಲ್ಲಿ 93ನೇ ಸ್ಥಾನದಲ್ಲಿದೆ.180 ದೇಶಗಳ ಭ್ರಷ್ಟಾಚಾರ ಶ್ರೇಯಾಂಕವೂ ಪ್ರಕಟವಾಗಿದ್ದು, ಭಾರತ 93ನೇ ಸ್ಥಾನದಲ್ಲಿದ್ದು ಹಿಂದಿಗಿಂತ ಹೆಚ್ಚಿನ ಬದಲಾವಣೆ ಇಲ್ಲ ಎಂದು ಹೇಳಿದೆ.

2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ)ದಂತೆ ಜಗತ್ತಿನ ಹಲವು ದೇಶಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಸಮರಗಳು ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಬಿಡುಗಡೆಯಾದ 2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಅಥವಾ ಸಿಪಿಐ ಡೇಟಾ ಅಂತಹ ಸೂಚನೆ ನೀಡಿದೆ.

ಈ ಪಟ್ಟಿಯಲ್ಲಿರುವ ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ. ಸಿಪಿಐ 180 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡೆನ್ಮಾರ್ಕ್ ಸತತ 6ನೇ ವರ್ಷವೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಇಲ್ಲಿ ಕಡಿಮೆ ಭ್ರಷ್ಟಾಚಾರ ಕಂಡುಬಂದಿದೆ. ಆದರೆ ಸೋಮಾಲಿಯಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಹೆಚ್ಚಿನ ದೇಶಗಳು ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಸ್ವಲ್ಪ ಅಥವಾ ಯಾವುದೇ ಪ್ರಗತಿಯನ್ನು ಸಾಸಿಲ್ಲ ಮತ್ತು ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದು, ಭ್ರಷ್ಟಾಚಾರಕ್ಕೆ ಸಂಬಂಸಿದಂತೆ ಗಂಭೀರ ಸಮಸ್ಯೆಗಳನ್ನು ತೋರುತ್ತಿವೆ ಎಂದು ಹೇಳಿದೆ.

ಹನುಮ ಧ್ವಜ ಇಳಿಸಿದಂತೆ ಹಿಂದೂಗಳು ನಿಮ್ಮನ್ನೂ ಕುರ್ಚಿಯಿಂದ ಇಳಿಸುತ್ತಾರೆ : ಆರ್.ಅಶೋಕ್

ನ್ಯಾಯ ವ್ಯವಸ್ಥೆಗಳು ಇಂತಹ ತಪ್ಪನ್ನು ಶಿಕ್ಷಿಸುವವರೆಗೆ ಮತ್ತು ಸರ್ಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವರೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಟ್ರಾನ್ಸ್‍ಪರೆನ್ಸಿ ಇಂಟರ್ನ್ಯಾಶನಲ್‍ನ ಅಧ್ಯಕ್ಷ ಫ್ರಾಂಕೋಯಿಸ್ ವಲೇರಿಯನ್ ಅಭಿಪ್ರಾಯಪಟ್ಟಿದ್ದಾರೆ.

ತಜ್ಞರು ಮತ್ತು ವ್ಯಾಪಾರಸ್ಥರ ಪ್ರಕಾರ ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯ ಮಟ್ಟಗಳ ಮೂಲಕ 180 ದೇಶಗಳು ಮತ್ತು ಪ್ರಾಂತ್ಯಗಳ ಶ್ರೇಣಿಯನ್ನು ನಿರ್ಧರಿಸಲಾಗಿದೆ. ಶೂನ್ಯ 0 ಶ್ರೇಣಿ ಹೊಂದಿರುವ ದೇಶಗಳು ಅತಿ ಹೆಚ್ಚು ಭ್ರಷ್ಟವಾಗಿದ್ದರೆ, 100ನೇ ಸ್ಥಾನ ಹೊಂದಿರುವ ದೇಶಗಳು ಭ್ರಷ್ಟಾಚಾರದ ವಿಷಯದಲ್ಲಿ ಸ್ವಚ್ಛವಾಗಿದೆ. ಭಾರತದ ಒಟ್ಟಾರೆ ಅಂಕ 39 ಇದ್ದು, 2022 ರಲ್ಲಿ 40 ಅಂಕಗಳೊಂದಿಗೆ 85 ಶ್ರೇಯಾಂಕ ಹೊಂದಿತ್ತು. ಭಾರತದ ಸ್ಕೋರ್ ಏರಿಳಿತಗಳನ್ನು ಹೊಂದಿದ್ದು, 85ರಿಂದ 93ಕ್ಕೆ ಸುಧಾರಣೆ ಕಂಡಿದೆ ಎಂದು ವರದಿ ಹೇಳಿದೆ.

ದಕ್ಷಿಣ ಏಷ್ಯಾದಲ್ಲಿ, ಪಾಕಿಸ್ತಾನ (133) ಮತ್ತು ಶ್ರೀಲಂಕಾ (115) ಎರಡೂ ತಮ್ಮ ಸಾಲದ ಹೊರೆಗಳನ್ನು ಮತ್ತು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ಎರಡು ದೇಶಗಳು ಬಲವಾದ ನ್ಯಾಯಾಂಗ ಮೇಲ್ವಿಚಾರಣೆಯನ್ನು ಹೊಂದಿವೆ. ಇದು ಸರ್ಕಾರವನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತಿದೆ ಎಂದು ವರದಿ ಹೇಳಿದೆ.

ಇವುಗಳಲ್ಲಿ ಅರ್ಜೆಂಟೀನಾ, ಆಸ್ಟ್ರೀಯಾ, ಪೋಲೆಂಡ್, ಟರ್ಕಿ ಹಾಗೂ ಯುನೈಟೆಡ್ ಕಿಂಗ್‍ಡಮ್‍ನಂತಹ ಕೆಲವು ಮಧ್ಯಮ ಮತ್ತು ಉನ್ನತ ಆದಾಯದ ದೇಶಗಳು ಸೇರಿವೆ. ಆದರೆ ಈ ಅವಯಲ್ಲಿ 8 ದೇಶಗಳ ಸಿಪಿಐ ಸ್ಕೋರ್ ಸುಧಾರಿಸಿರುವುದು ಜಗತ್ತಿಗೆ ಸಾಮಾಧಾನದ ಸುದ್ದಿಯಾಗಿದೆ. ಇವುಗಳಲ್ಲಿ ಐರ್ಲೆಂಡ್, ದಕ್ಷಿಣ ಕೊರಿಯಾ, ಅರ್ಮೇನಿಯಾ, ವಿಯೆಟ್ನಾಂ, ಮಾಲ್ಡೀವ್ಸ್, ಅಂಗೋಲಾ ಮತ್ತು ಉಜ್ಬೇಕಿಸ್ತಾನ್ ಹೆಸರುಗಳಿವೆ.

ಭಾರತವು 93ನೇ ಸ್ಥಾನದಲ್ಲಿದೆ. 2023ರ ಸಿಪಿಐನಲ್ಲಿ ಭಾರತ 39 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ. ಆದರೆ ನೆರೆಯ ರಾಷ್ಟ್ರ ಚೀನಾ 76 ಅಂಕ ಪಡೆದು 42ನೇ ಸ್ಥಾನದಲ್ಲಿದೆ. ವಿಶೇಷವೆಂದರೆ 2022ರಿಂದ ಚೀನಾದ ಅಂಕ 3ರಷ್ಟು ಕಡಿಮೆಯಾಗಿದೆ. ಪಾಕಿಸ್ತಾನವು 133ನೇ ಸ್ಥಾನದಲ್ಲಿದೆ, ಅವರು 29 ಅಂಕಗಳನ್ನು ಪಡೆದಿದ್ದಾರೆ. 180 ದೇಶಗಳಲ್ಲಿ ಅಫ್ಘಾನಿಸ್ತಾನ 20 ಅಂಕಗಳೊಂದಿಗೆ 162ನೇ ಸ್ಥಾನದಲ್ಲಿದೆ.

RELATED ARTICLES

Latest News