Wednesday, February 28, 2024
Homeರಾಜಕೀಯಹನುಮ ಧ್ವಜ ಇಳಿಸಿದಂತೆ ಹಿಂದೂಗಳು ನಿಮ್ಮನ್ನೂ ಕುರ್ಚಿಯಿಂದ ಇಳಿಸುತ್ತಾರೆ : ಆರ್.ಅಶೋಕ್

ಹನುಮ ಧ್ವಜ ಇಳಿಸಿದಂತೆ ಹಿಂದೂಗಳು ನಿಮ್ಮನ್ನೂ ಕುರ್ಚಿಯಿಂದ ಇಳಿಸುತ್ತಾರೆ : ಆರ್.ಅಶೋಕ್

ಬೆಂಗಳೂರು,ಜ.31- ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಬಣ್ಣವಿದೆ. ಕೇಸರಿ ಬಣ್ಣ ಹಿಂದೂ ಧರ್ಮದ ಸಾಧು-ಸಂತರು, ಸನ್ಯಾಸಿಗಳು, ಮಠಾಪತಿಗಳು ಧರಿಸುವ ಬಣ್ಣ. ಹಿಂದೂಗಳ ಪರಮ ಪವಿತ್ರ ಲಾಂಛನ ಕೇಸರಿ ಬಣ್ಣ. ತ್ಯಾಗದ ಸಂಕೇತವಾದ ಕೇಸರಿ ಬಣ್ಣ ಶಾಶ್ವತವೇ ಹೊರತು ತಮ್ಮ ಅಧಿಕಾರವಲ್ಲ.

ತಾವು ಹನುಮ ಧ್ವಜವನ್ನು ಇಳಿಸಿದ ರೀತಿಯಲ್ಲೇ ಹಿಂದೂಗಳು ತಮ್ಮನ್ನು ಕುರ್ಚಿಯಿಂದ ಇಳಿಸುವ ದಿನ ಬಹಳ ದೂರ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.

ಮಾಲ್ಡೀವ್ಸ್ ಪ್ರಾಸಿಕ್ಯೂಟರ್ ಜನರಲ್‌ಗೆ ಇರಿತ

ಈ ಕುರಿತು ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ರಾಷ್ಟ್ರ ಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು-ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‍ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂಸಿದ್ದು ಇದೇ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ.

ಕೇಸರಿ, ಕುಂಕುಮ ಕಂಡರೆ ನನಗೆ ಭಯ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವ ತಮಗೆ ಹನುಮಧ್ವಜದ ಮೇಲಿನ ದ್ವೇಷವನ್ನು ಮರೆಮಾಚಲು ರಾಷ್ಟ್ರಧ್ವಜದ ಮುಖವಾಡ ಹಾಕಿಕೊಳ್ಳುವ ಅಗತ್ಯ ಏನಿದೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

RELATED ARTICLES

Latest News