Saturday, December 14, 2024
Homeರಾಜ್ಯರಾಜ್ಯ ಗುಪ್ತವಾರ್ತೆಯ ಮೂವರು ಅಧಿಕಾರಿಗಳು ಸೇರಿ 8 ಮಂದಿ ಅಧಿಕಾರಿಗಳ ವರ್ಗಾವಣೆ

ರಾಜ್ಯ ಗುಪ್ತವಾರ್ತೆಯ ಮೂವರು ಅಧಿಕಾರಿಗಳು ಸೇರಿ 8 ಮಂದಿ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಜ.31- ರಾಜ್ಯ ಗುಪ್ತವಾರ್ತೆಯ ಮೂವರು ಅಧಿಕಾರಿಗಳು ಸೇರಿದಂತೆ 8 ಮಂದಿ ಎಸ್‍ಪಿ ವೃಂದದ(ನಾನ್-ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶೃತಿ ಎಸ್.ಎಂ ಅವರಿಗೆ ಬೆಳಗಾವಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅೀಕ್ಷಕರ ಹುದ್ದೆ , ಕರಿಬಸವನಗೌಡ.ಎಸ್.ಪಿ ಅವರಿಗೆ ವಿಧಾನಸೌಧ ಭದ್ರತೆ ವಿಭಾಗದ ಪೊಲೀಸ್ ಅಧೀಕ್ಷಕರ ಹುದ್ದೆಗೆ ನಿಯೋಜಿಸಲಾಗಿದೆ.

ಗುಪ್ತವಾರ್ತೆಯ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ ಅವರನ್ನು ದಕ್ಷಿಣ ಕನ್ನಡ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗೆ, ರವಿಶಂಕರ್ ಸಿ.ಆರ್ ಅವರನ್ನು ಕೋಲಾರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆ ಹಾಗೂ ಪ್ರವೀಣ್ ಹೆಚ್.ನಾಯಕ್ ಅವರನ್ನು ಕಲಬುರಗಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.

ಹನುಮ ಧ್ವಜ ಇಳಿಸಿದಂತೆ ಹಿಂದೂಗಳು ನಿಮ್ಮನ್ನೂ ಕುರ್ಚಿಯಿಂದ ಇಳಿಸುತ್ತಾರೆ : ಆರ್.ಅಶೋಕ್

ಎ.ಆರ್.ಕರ್ನೂಲ್ ಅವರನ್ನು ಕಲಬುರಗಿಯಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರ ಹುದ್ದೆಗೆ, ಚನ್ನವೀರಪ್ಪ ಬಿ ಹಡಪದ್ ಅವರನ್ನು ಬೆಂಗಳೂರು ನಗರ ಸಿಎಆರ್(ದಕ್ಷಿಣ) ಉಪ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದೆ.
ಎಂ.ಎ.ನಟರಾಜ ಅವರನ್ನು ಡಿಜಿ ಮತ್ತು ಐಜಿಪಿ ಅವರ ಕಛೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.

RELATED ARTICLES

Latest News