Monday, February 26, 2024
Homeಇದೀಗ ಬಂದ ಸುದ್ದಿಯುಎಇಯಲ್ಲಿ 33 ಕೋಟಿ ಲಾಟರಿ ಹಣ ಗೆದ್ದ ಭಾರತೀಯ

ಯುಎಇಯಲ್ಲಿ 33 ಕೋಟಿ ಲಾಟರಿ ಹಣ ಗೆದ್ದ ಭಾರತೀಯ

ದುಬೈ,ಫೆ.11- ಭಾರತೀಯ ವಲಸಿಗ ರಾಜೀವ್ ಅರಿಕ್ಕಾಟ್ ಎಂಬುವರಿಗೆ ಅಬುಧಾಬಿಯ ಬಿಗ್-ಟಿಕೆಟ್ ಸಾಪ್ತಾಹಿಕ ಲಾಟರಿ ಡ್ರಾದಲ್ಲಿ 15 ಮಿಲಿಯನ್ ಧೀರಮ್ ಅಂದರೆ ಸುಮಾರು 33 ಕೋಟಿ ರೂ.ಗಳ ಬಹುಮಾನ ಗೆದ್ದಿದ್ದಾರೆ. ಅರಿಕ್ಕಟ್ ಅವರು ಡ್ರಾಗಾಗಿ ಒಟ್ಟು ಆರು ಟಿಕೆಟ್‍ಗಳನ್ನು ಖರೀದಿಸಿದ್ದರು ಅವರು ಖರೀದಿಸಿದ್ದ 037130 ಟಿಕೆಟ್ ಸಂಖ್ಯೆಗೆ ಬಹುಮಾನ ಒಲಿದುಬಂದಿದೆ.

ಭಾರತದಲ್ಲಿ ಕೇರಳದಿಂದ ಬಂದಿರುವ ರಾಜೀವ್ ಅರಿಕ್ಕಾಟ್ ಅವರು ಯುಎಇಯಲ್ಲಿನ ಅಲ್ ಐನ್‍ನಲ್ಲಿರುವ ವಾಸ್ತುಶಿಲ್ಪ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನವರಿ 10 ರಂದು ಲಾಟರಿ ಟಿಕೆಟ್ ಖರೀದಿಸಿದ 40 ವರ್ಷ ವಯಸ್ಸಿನ ಅರಿಕ್ಕಾಟ್ ಅವರು ಪತ್ನಿ ಮತ್ತು ಇಬ್ಬರ ಮಕ್ಕಳೊಂದಿಗೆ ಕಳೆದ 10 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿರುವ ಉತ್ತರಾಖಂಡದ ಬಂಭುಲ್‍ಪುರದಲ್ಲಿ ಬಿಗಿ ಬಂದೋಬಸ್ತ್

ಮೊದಲ ಬಾರಿಗೆ ಲಾಟರಿ ವಿಜೇತರು ತಮ್ಮ ಹೆಂಡತಿಯೊಂದಿಗೆ ತಮ್ಮ ಮಕ್ಕಳ ಜನ್ಮ ದಿನಾಂಕವಾದ 7 ಮತ್ತು 13 ಸಂಖ್ಯೆಗಳೊಂದಿಗೆ ಟಿಕೆಟ್‍ಗಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದ ಅವರ ನಿರ್ಧಾರಕ್ಕೆ ಕೋಟಿ ಕೋಟಿ ಹಣ ಬಂದಂತಾಗಿದೆ.

ನಾನು ಅಲ್ ಐನ್‍ನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದೇನೆ. ನಾನು ಕಳೆದ 3 ವರ್ಷಗಳಿಂದ ಟಿಕೆಟ್‍ಗಳನ್ನು ಖರೀದಿಸುತ್ತಿದ್ದೇನೆ. ನಾನು ಲಾಟರಿ ಗೆದ್ದಿರುವುದು ಇದೇ ಮೊದಲು. ಈ ಬಾರಿ, ನಾನು 7 ಮತ್ತು 13 ಸಂಖ್ಯೆಗಳ ಟಿಕೆಟ್‍ಗಳನ್ನು ಆಯ್ಕೆ ಮಾಡಿದ್ದೇವೆ, ಅದು ನಮ್ಮ ಮಕ್ಕಳ ಜನ್ಮ ದಿನಾಂಕವಾಗಿದೆ. ಎರಡು ತಿಂಗಳ ಹಿಂದೆ, ನಾನು ಅದೇ ಸಂಯೋಜನೆಯೊಂದಿಗೆ ವಿಸ್ಕರ್‍ನಿಂದ 1 ಮಿಲಿಯನ್ ದಿರ್ಹಂ ಅನ್ನು ಕಳೆದುಕೊಂಡೆ, ಆದರೆ ಈ ಬಾರಿ ನಾನು ಅದೃಷ್ಟಶಾಲಿಯಾಗಿದ್ದಾನೆ ಎಂದು ಅರಿಕ್ಕಾಟ್ ತಿಳಿಸಿದ್ದಾರೆ.

RELATED ARTICLES

Latest News