Wednesday, December 4, 2024
Homeಮನರಂಜನೆಸಂಗೀತ ಸುಧೆಯಲ್ಲಿ ಮಿಂದೆದ್ದ ಒಂದು ಸರಳ ಪ್ರೇಮ ಕಥೆ

ಸಂಗೀತ ಸುಧೆಯಲ್ಲಿ ಮಿಂದೆದ್ದ ಒಂದು ಸರಳ ಪ್ರೇಮ ಕಥೆ

‘ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು’ ಈ ಒಂದು ತತ್ವಪದವನ್ನೇ ಮೂಲವಾಗಿಸಿಕೊಂಡು ಎರಡುವರೆ ಗಂಟೆ ಚಿತ್ರಕಥೆಯನ್ನು ರಸವತ್ತಾಗಿ ಪರದೆಯ ಮೇಲೆ ಬಿಚ್ಚಿಡುವ ಜಾಣ್ಮೆ ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿ ಘಟಿಸಿದೆ. ಸಂಗೀತದೊಂದಿಗೆ ಭಾವನೆಗಳನ್ನು ಬೆಸೆದು, ತಲ್ಲೀನ ಸ್ಥಿತಿಯಲ್ಲಿ ಕಥೆಯೊಂದಿಗೆ ಪಯಣಿಸುವ ಪ್ರೇಕ್ಷಕರ ಎದೆಗಳನ್ನ, ಮೆಲ್ಲನೆ ಕಂಪಿಸುವ ನವಿರಾದ ಪ್ರೇಮ ಕಥೆಗೆ ನಿರ್ದೇಶಕ ಸಿಂಪಲ್ ಸುನಿಯ ಅನಿರೀಕ್ಷಿತ ತಿರುವುಗಳು ಅವರ ನಿರ್ದೇಶನ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಂಗೀತವೇ ಉಸಿರಾಗಿಸಿಕೊಂಡಿರುವ ನಾಯಕ ಆ ಉಸಿರಿಗೆ ಬೆಸೆಯುವ ಮತ್ತೊಂದು ಉಸಿರನ್ನು ಹುಡುಕುವ ಪ್ರಯತ್ನವೇ ಒಂದು ಸರಳ ಪ್ರೇಮ ಕಥೆಯ ಒನ್ಲೈನ್ ಸ್ಟೋರಿ. ಕಥೆಯಲ್ಲಿ ನಾಯಕ ತನಗೆಷ್ಟವಿಲ್ಲದ, ಹುಡುಗಿಯನ್ನು ಮನೆಯವರ ಬಲವಂತಕ್ಕೆ ವಿವಾಹವಾಗುವ ಸನ್ನಿವೇಶ ತಿಯೇಟರ್ ನಲ್ಲಿ ಕೂತು ಸಿನಿಮಾ ನೋಡುವವರ ಎದೆ ಒಡೆದುಹೋಗುತ್ತದೆ.ಏನು?.. ಹೀಗಾಯ್ತಲ್ಲ ಅವನು ತುಂಬಾ ಇಷ್ಡ ಪಟ್ಟ ಹುಡುಗಿ ಸಿಗುವಷ್ಟರಲ್ಲಿ ಬಲವಂತದ ಮದುವೆಗೆ ಕಟ್ಟು ಬಿದ್ದನಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಾರೆ. ನಾಯಕ ಮದುವೆಯಾದ ಮೇಲು ತನ್ನ ಪ್ರೇಯಸಿಯ ಹುಡುಕಾಟವನ್ನು ಮುಂದುವರಿಸುತ್ತಾನೆ. ಇತ್ತ ನಾಯಕಿ ಕೂಡ ತಾನು ಪ್ರೀತಿಸಿದವನನ್ನ ಹುಡುಕಲು ಶುರು ಮಾಡುತ್ತಾಳೆ. ಈ ಎರಡು ದಿಕ್ಕುಗಳು ಚಿತ್ರದ ಕಥೆಯ ವೇಗವನ್ನು ಹೆಚ್ಚಿಸುತ್ತದೆ. ಪ್ರೇಕ್ಷಕರು ಎದೆ ಬಡಿತವು ಜೋರಾಗುತ್ತದೆ. ಇವರಿಬ್ಬರಿಗೂ ತಾವು ಪ್ರೀತಿಸಿದವರು ಸಿಗುತ್ತಾರಾ.. ಅಥವಾ ಬೇರೆ ಏನಾದರೂ ಇದೆಯಾ ಎಂಬುದೇ ಸಸ್ಪೆನ್ಸ್.

ದೇಶ ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ : ದೇವೇಗೌಡರು

ತಾನು ದೊಡ್ಡ ಸಂಗೀತ ನಿರ್ದೇಶಕನಾಗಬೇಕೆಂಬ ಕನಸು, ಆ ಕನಸಿಗೆ ಆಸರೆಯಾಗಿ ಜೊತೆ ನಿಲ್ಲುವವಳು ಅದನ್ನು ಗೌರವಿಸಬೇಕೆಂಬ ಹೆಬ್ಬಯಕೆ, ಇವೆರಡು ನಾಯಕನ ಜೀವನದ ಎರಡು ಗುರಿಗಳು. ನಿರ್ದೇಶಕನಾಗಿ ವಿಜಯಶಾಲಿಯಾಗುತ್ತಾನೆ. ತಾನು ಪ್ರೀತಿಸಿದ ಹುಡುಗಿ , ಪಡೆಯಬೇಕೆಂಬ ಪ್ರಯತ್ನದಲ್ಲಿ ಅವನು ನಡೆದುಕೊಳ್ಳುವ ವಿಚಾರಗಳು ಕಥೆಯನ್ನು ಮತ್ತಷ್ಟು ಕಲರ್ಫುಲ್ ಆಗಿಸಿವೆ. ಇದೇ ಸಿನಿಮಾದ ಜೀವಾಳ. ಈ ಪ್ರಯತ್ನದಲ್ಲಿ ವಿನಯ್ ರಾಜಕುಮಾರ್ ಮೆಚುರಿಟಿ ಅಭಿನಯವನ್ನು ನೀಡಿ ಇಷ್ಟವಾಗುತ್ತಾರೆ. ಅದೇ ರೀತಿ ನಾಯಕಿ ಸ್ವಾತಿಷ್ಠ ಕೃಷ್ಣನ್ ಕೂಡ ಕಥೆಗೆ ಸಾತ್ ಕೊಟ್ಟಿದ್ದಾರೆ. ಗೆಸ್ಟ್ ಅಪಿಯರೆನ್ಸ್ ರೋಲ್ನಲ್ಲಿ ರಾಘವೇಂದ್ರ ರಾಜಕುಮಾರ್ ಗಮನ ಸೆಳೆಯುತ್ತಾರೆ.

ಚಿತ್ರದುದ್ದಕ್ಕೂ ಸಂಗೀತ ಪ್ರಧಾನವಾಗಿದ್ದು, ಅದರ ಮಹತ್ವದೊಂದಿಗೆ ತಂದೆ ಅಜ್ಜಿಯ ಸೆಂಟಿಮೆಂಟ್, ಹುಡುಗ ಹುಡುಗಿಯ ಪ್ರೀತಿಯನ್ನ ಸಂಗೀತ ನಿರ್ದೇಶಕ ವೀರ ಸಮರ್ಥ, ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಚಿತ್ರ ತುಂಬಾ ಕಲರ್ ಫುಲ್ ಆಗಿ ಮೂಡಿಬರಲು ಕಾರಣವಾಗಿರುವುದು ನಿರ್ಮಾಪಕ ಮೈಸೂರು ರಮೇಶ್. ಮಲ್ಲಿಕಾ ಸಿಂಗ್, ರಾಜೇಶ್ ನಟರಂಗ, ಅರುಣ ಬಾಲ್ರಾಜ್ ಮುಂತಾದವರ ಅಭಿನಯ ಒಂದು ಸರಳ ಪ್ರೇಮ ಕಥೆಗೆ ಪೂರಕವಾಗಿ ಮೂಡಿ ಬಂದಿದೆ. ಸರಳವಾಗಿ ಮೂಡಿಬಂದಿರುವ ಅದ್ಭುತವಾದ ಪ್ರೇಮ ಕಾವ್ಯ “ಒಂದು ಸರಳ ಪ್ರೇಮ ಕಥೆ”ಯನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.

RELATED ARTICLES

Latest News